ಬ್ರೇಕಿಂಗ್ ನ್ಯೂಸ್
08-04-22 03:00 pm Bengaluru Correspondent ಕರ್ನಾಟಕ
ಬೆಂಗಳೂರು, ಎ.8: ಹಿಜಾಬ್ ಸಂಘರ್ಷದ ಸಂದರ್ಭದಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿಯನ್ನು ಹೊಗಳಿ ದಿಟ್ಟ ಯುವತಿ ಎಂದು ಬಣ್ಣಿಸಿ ಅಲ್ ಖೈದಾ ಉಗ್ರರು ವಿಡಿಯೋ ಬಿಡುಗಡೆ ಮಾಡಿರುವ ಘಟನೆಯ ಬಗ್ಗೆ ತನಿಖೆ ನಡೆಸಲು ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಮಾಡಿದ್ದಾರೆ.
ಅಲ್ ಖೈದಾ ಮುಖ್ಯಸ್ಥ ಅಲ್ ಜವಾಹಿರಿ ಮಂಡ್ಯ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಬಗ್ಗೆ ಹೊಗಳಿ 9 ನಿಮಿಷಗಳ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ. ಮುಸ್ಕಾನ್ ಖಾನ್ ಬಗ್ಗೆ ಅರಬಿ ಭಾಷೆಯಲ್ಲಿ ಹೇಳುತ್ತಿರುವ ವಿಡಿಯೋದಲ್ಲಿ ಕವನದ ಮೂಲಕ ಪ್ರಶಂಸೆಯ ಮಾತುಗಳನ್ನಾಡಿದ್ದ. ಅಲ್ ಖೈದಾ ಮುಖಂಡ ಹಿಜಾಬ್ ವಿಚಾರದಲ್ಲಿ ಮಂಡ್ಯದ ಹುಡುಗಿ ಬಗ್ಗೆ ಪ್ರಶಂಸೆ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಅಲ್ಲದೆ, ಸತ್ತಿದ್ದಾನೆಂದು ತಿಳಿಯಲಾಗಿದ್ದ ವ್ಯಕ್ತಿಯೇ ಅರಬಿ ಭಾಷೆಯಲ್ಲಿ ಮಾತನಾಡುತ್ತಿರುವುದು ವಿಡಿಯೋದಲ್ಲಿ ಬಂದಿತ್ತು.
ಮಂಡ್ಯದ ವಿದ್ಯಾರ್ಥಿನಿ ಹಿಜಾಬ್ ಹಾಕಿಕೊಂಡು ಕಾಲೇಜು ಪ್ರವೇಶ ಮಾಡಿದ್ದಾಗ ಅಲ್ಲಿದ್ದ ಹಿಂದು ವಿದ್ಯಾರ್ಥಿಗಳು ಜೈಶ್ರೀರಾಮ್ ಘೋಷಣೆ ಕೂಗಿದ್ದರು. ಇದರಿಂದ ಸಿಟ್ಟಾಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಖಾನ್, ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಸಾಗಿದ್ದಳು. ಇದರ ವಿಡಿಯೋ ಭಾರೀ ವೈರಲ್ ಆಗಿದ್ದಲ್ಲದೆ, ಮುಸ್ಲಿಂ ಸಂಘಟನೆಗಳು, ಮುಸ್ಲಿಂ ನಾಯಕರು ಮುಸ್ಕಾನ್ ಕುಟುಂಬಕ್ಕೆ ಭಾರೀ ಕೊಡುಗೆಗಳನ್ನೂ ಕೊಟ್ಟಿದ್ದರು. ಇದೀಗ ಅಲ್ ಖೈದಾ ಉಗ್ರರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದರಿಂದ ಹಿಜಾಬ್ ಸಂಘರ್ಷದಲ್ಲಿ ಅಂತಾರಾಷ್ಟ್ರೀಯ ಸಂಚು ಇರುವುದಕ್ಕೆ ಸಾಕ್ಷಿ ಎಂದು ರಾಜ್ಯ ಸರಕಾರದ ಸಚಿವರು ಹೇಳಿಕೆ ನೀಡಿದ್ದರು.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಉಗ್ರನ ವಿಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ಅಲ್ ಖೈದಾ ಉಗ್ರರಿಗೆ ಮಂಡ್ಯದ ವಿಚಾರ ಹೇಗೆ ಗೊತ್ತಿರೋದು. ಇದನ್ನೆಲ್ಲ ಆರೆಸ್ಸೆಸ್ ನವರು ಸೃಷ್ಟಿ ಮಾಡಿರಬಹುದು. ವಿಡಿಯೋ ಬಗ್ಗೆ ಮುಖ್ಯಮಂತ್ರಿ ಸತ್ಯಾಸತ್ಯತೆ ಏನೆಂದು ಹೇಳಲಿ ಎಂದು ಲಘುವಾಗಿ ಮಾತನಾಡಿದ್ದರು. ಇದರಿಂದ ಸಿಟ್ಟಾಗಿರುವ ಸಿಎಂ ಬೊಮ್ಮಾಯಿ ವಿಡಿಯೋ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ವರಿಷ್ಠರಿಗೆ ಸೂಚನೆ ನೀಡಿದ್ದಾರೆ.
ವಿಡಿಯೋ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ವರಿಷ್ಠರಿಗೆ ಸೂಚಿಸಿದ್ದೇನೆ. ವರದಿ ಬಂದ ಮೇಲೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ. ಸಿದ್ದರಾಮಯ್ಯ ಆರೆಸ್ಸೆಸ್ ಮೇಲೆ ಆರೋಪ ಮಾಡಿದ್ದೆಲ್ಲ ನಿರಾಧಾರವಾದ್ದು. ಅಲ್ ಖೈದಾ ಬಗ್ಗೆ ಪ್ರಶ್ನೆ ಬಂದಾಗ ಸಿದ್ದರಾಮಯ್ಯ ಏಕೆ ಅಪ್ ಸೆಟ್ ಆಗುತ್ತಾರೆ ಅನ್ನೋದು ಗೊತ್ತಾಗಲ್ಲ ಎಂದಿದ್ದಾರೆ ಸಿಎಂ ಬೊಮ್ಮಾಯಿ.
Karnataka Chief Minister Basavaraj Bommai on Thursday said he was not surprised with Al Qaeda chief Ayman al-Zawahiri heaping praise on college student Muskan Khan, who defended her right to wear hijab inside the classroom.The Chief Minister also slammed the leader of the Opposition in the legislative assembly, Siddaramaiah over his statement that Zawahiri's video was doctored and was a 'handiwork' of the Rashtriya Swayamsevak Sangh (RSS).
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 11:04 pm
Mangalore Correspondent
Muneer Katipalla, Mangalore, Anupam Agarwal;...
27-11-24 09:36 pm
Dr Chinnappa Gowda, Mangalore: 25 ಕೋಟಿ ವ್ಯಯಿಸ...
27-11-24 08:50 pm
Mangalore MP Captain Brijesh Chowta, Chouhan...
27-11-24 08:39 pm
Mangalore News: ಬ್ರಿಟಿಷರ ಕಾಲದ ಜಿಲ್ಲಾಧಿಕಾರಿ ಕಚ...
27-11-24 08:28 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm