ಬ್ರೇಕಿಂಗ್ ನ್ಯೂಸ್
08-04-22 06:01 pm Bengaluru Correspondent ಕರ್ನಾಟಕ
ಬೆಂಗಳೂರು, ಎ.8: ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶ ವ್ಯಾಪ್ತಿಯ ಒಂಬತ್ತು ಶಾಲಾಡಳಿತಗಳಿಗೆ ಏಕಕಾಲದಲ್ಲಿ ಬಾಂಬ್ ಬೆದರಿಕೆ ಹಾಕಲಾಗಿದ್ದು, ಪೊಲೀಸರು ಒಮ್ಮಿಂದೊಮ್ಮೆಲೇ ತಡಬಡಾಯಿಸಿ ಅಲರ್ಟ್ ಆಗಿದ್ದಾರೆ.
ಶಾಲೆಗಳ ಆಡಳಿತ ಮಂಡಳಿಯ ಇಮೇಲ್ ಗಳಿಗೆ ಬಾಂಬ್ ಹಾಕುವುದಾಗಿ ಅನಾಮಧೇಯ ಸಂದೇಶ ಹಾಕಲಾಗಿತ್ತು. ಕೂಡಲೇ ಶಾಲಾ ಸಿಬಂದಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಶಾಲೆಯ ಆವರಣದಲ್ಲಿ ಸರ್ಚ್ ನಡೆಸಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದ ಕಾರಣ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬಂದಿ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಪೊಲೀಸರು ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ತಪಾಸಣೆ ನಡೆಸಿದ್ದಾರೆ.
ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪ ಬೇಗೂರು ರಸ್ತೆಯಲ್ಲಿರುವ ಕ್ಯಾಂಡಾರ್ ಸ್ಕೂಲ್ ಮತ್ತು ರೆಡ್ ಬ್ರಿಡ್ಜ್ ಸ್ಕೂಲ್ ಗೆ ಬೆದರಿಕೆ ಮೇಲ್ ಬಂದಿತ್ತು. ಇದಕ್ಕೂ ಮುನ್ನ ಬೆಳಗ್ಗಿನ ವೇಳೆ ಎಬಿನೈಜರ್ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಬೆದರಿಕೆ ಮೇಲ್ ಕಳಿಸಲಾಗಿತ್ತು. ಸರ್ಜಾಪುರ ರಸ್ತೆಯ ಕುನ್ಸ್ ಕ್ಯಾಪ್ಸ್ ಕೋಲಮ್ ಇಂಟರ್ನ್ಯಾಷನಲ್ ಸ್ಕೂಲ್, ಹೆಣ್ಣೂರಿನ ಸೆಂಟ್ ವಿನ್ಸೆಂಟ್ ಪಲ್ಲೋಟಿ ಶಾಲೆ, ಇಂಡಿಯನ್ ಪಬ್ಲಿಕ್ ಸ್ಕೂಲ್- ಗೋವಿಂದಪುರ, ಡೆಲ್ಲಿ ಪಬ್ಲಿಕ್ ಶಾಲೆ- ವರ್ತೂರು, ನ್ಯೂ ಅಕಾಡೆಮಿ ಶಾಲೆ- ಮಾರತಹಳ್ಳಿ, ಎಬಿನೈಜರ್ ಇಂಟರ್ ನ್ಯಾಷನಲ್ ಶಾಲೆ – ಹೆಬ್ಬಗೋಡಿ, ಗೋಪಾಲನ್ ಇಂಟರ್ ನ್ಯಾಷನಲ್ ಶಾಲೆ- ಮಹದೇವಪುರ ಹೀಗೆ ಬೆಂಗಳೂರು ನಗರ ಭಾಗದಲ್ಲಿ ಐದು ಶಾಲೆಗಳು ಹಾಗೂ ಗ್ರಾಮಾಂತರ ಪ್ರದೇಶದ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ.
ಪೊಲೀಸರ ಪರಿಶೀಲನೆ, ಹುಸಿಬಾಂಬ್ !
ಬೆದರಿಕೆ ಬಂದಿದ್ದ ಎಲ್ಲ ಶಾಲೆಗಳಿಗೂ ತೆರಳಿದ ಪೊಲೀಸರು ಶಾಲೆ ಆವರಣದ ಮೂಲೆ ಮೂಲೆಯಲ್ಲೂ ತಡಕಾಡಿದ್ದಾರೆ. ಬಾಂಬ್ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಹುಸಿ ಬಾಂಬ್ ಎಂದು ಪೊಲೀಸರು ಹಿಂತಿರುಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೂರ್ವ ವಿಭಾಗ ಎಸಿಪಿ ಸುಬ್ರಮಣ್ಯೇಶ್ವರ ರಾವ್, ನಗರದಲ್ಲಿ 8-9 ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದು ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ಶಾಲೆಗಳನ್ನ ಸಂಪೂರ್ಣ ಪರಿಶೀಲನೆ ಮಾಡಿದ್ದಾರೆ. ಮಕ್ಕಳು, ಪೋಷಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಪರೀಕ್ಷೆ ಸಮಯದಲ್ಲಿ ಈ ರೀತಿ ಬೆದರಿಕೆ ಬರುವುದು ಸಹಜ. ವಿವಿಧ ಇ-ಮೇಲ್ ಐಡಿಗಳಿಂದ ಬೆದರಿಕೆ ಬಂದಿದ್ದು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
Five schools in Bengaluru have been bombed. The bomb was threatened by anonymous e-mail.By 10-25 am on Friday, four schools in Bengaluru were bombed by e-mail and the police raided the place. “A powerful bomb has been placed in your school. It is your duty to be careful. "Please inform the police immediately."
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm