ಉರ್ದು ಬರಲ್ಲ ಎಂಬ ಕಾರಣಕ್ಕೇ ಕೊಲೆ ; ಗೃಹ ಸಚಿವರು ಸತ್ಯವನ್ನೇ ಹೇಳಿದ್ದಾರೆ, ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ ; ರವಿಕುಮಾರ್

09-04-22 02:54 pm       Bengaluru Correspondent   ಕರ್ನಾಟಕ

ಉರ್ದು ಬರಲ್ಲ ಎಂಬ ಕಾರಣಕ್ಕೆ ಯುವಕನ ಕೊಲೆಯಾಗಿತ್ತು ಎಂದು ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದ ಗೃಹ ಸಚಿವರ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು, ಎ.9: ಉರ್ದು ಬರಲ್ಲ ಎಂಬ ಕಾರಣಕ್ಕೆ ಯುವಕನ ಕೊಲೆಯಾಗಿತ್ತು ಎಂದು ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದ ಗೃಹ ಸಚಿವರ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಗೃಹ ಸಚಿವರ ಹೇಳಿಕೆ ಸರಿ ಇತ್ತು. ಮಾಹಿತಿ ಆಧರಿಸಿಯೇ ಹೇಳಿಕೆ ನೀಡಿದ್ದರು. ಆದರೆ ಬೆಂಗಳೂರು ಪೊಲೀಸ್ ಕಮಿಷನರ್ ಅವರೇ ಸುಳ್ಳು ಹೇಳಿದ್ದಾರೆ ಎಂದು ರವಿಕುಮಾರ್ ಆರೋಪಿಸಿದ್ದಾರೆ.

ಪೊಲೀಸ್ ಕಮಿಷನರ್ ತನ್ನ ತಲೆ ಮೇಲೆ ಬರುತ್ತೆ ಎಂದು ಜನತೆಗೆ ಸುಳ್ಳು ಹೇಳಿದ್ದಾರೆ. ಉರ್ದು ಬರಲ್ಲ ಎಂಬ ಕಾರಣಕ್ಕೆ ಚಂದ್ರುನನ್ನು ಕೊಲೆ ಮಾಡಲಾಗಿತ್ತು. ಇದನ್ನು ಆತನ ಜೊತೆಗಿದ್ದ ಸೈಮನ್ ಹೇಳಿದ್ದಾನೆ. ಚಂದ್ರು ಓಡಿಸ್ತಿದ್ದ ಬೈಕ್ ಆಕ್ಸಿಡೆಂಟ್ ಆಗಿದ್ದು ನಿಜ. ಅಲ್ಲಿ ಗಲಾಟೆ ನಡೆದಿದ್ದು ಮಾತಿಗೆ ಮಾತು ಬೆಳೆದಿತ್ತು. ಈ ವೇಳೆ ಉರ್ದುವಿನಲ್ಲಿ ಮಾತನಾಡುವಂತೆ ಅಲ್ಲಿನ ಸ್ಥಳೀಯರು ಹೇಳಿದ್ದಾರೆ. ಉರ್ದು ನಹೀ ಹೈ ಎಂದು ಹೇಳಿದ್ದಕ್ಕೆ ಚಂದ್ರುವನ್ನು ಚೂರಿಯಿಂದ ಚುಚ್ಚಿ ಕೊಂದಿದ್ದಾರೆ. ಗೂಂಡಾ ಮುಸ್ಲಿಮರು ಈ ಕೃತ್ಯ ಎಸಗಿದ್ದಾರೆ ಎಂದು ರವಿಕುಮಾರ್ ಹೇಳಿದ್ದಾರೆ.

Cops living like dogs, taking bribes,' says Karnataka Home Minister Araga  Jnanendra in viral video | Deccan Herald

ಈ ವಿಚಾರದಲ್ಲಿ ಗೃಹ ಸಚಿವರು ಹೇಳಿದ್ದರಲ್ಲಿ ಸತ್ಯವಿದೆ. ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ. ಚಂದ್ರು ಗೆಳೆಯ ಸೈಮನ್ ಹೇಳಿದ್ದು ಸತ್ಯವಿದೆ. ಈ ಬಗ್ಗೆ ತನಿಖೆ ನಡೆದರೆ ಸತ್ಯ ಹೊರಬರುತ್ತದೆ ಎಂದು ರವಿಕುಮಾರ್ ಹೇಳಿದ್ದಾರೆ. ದೇಶಾದ್ಯಂತ ಇಂಗ್ಲಿಷಿಗಿಂತ ಹೆಚ್ಚು ಹಿಂದಿಗೆ ಪ್ರಾಶಸ್ತ್ಯ ಕೊಡಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ, ಕರ್ನಾಟಕದಲ್ಲಿ ಕನ್ನಡ ಮೊದಲು. ತಮಿಳುನಾಡಿನಲ್ಲಿ ತಮಿಳು ಮೊದಲು. ಅದರಲ್ಲಿ ಎರಡು ಮಾತಿಲ್ಲ. ರಾಷ್ಟ್ರೀಯ ನೆಲೆಯಲ್ಲಿ ಹಿಂದಿಗೆ ಪ್ರಾಶಸ್ತ್ಯ ಕೊಡಬೇಕು. ಈ ವಿಚಾರದಲ್ಲಿ ನಮ್ಮ ಸರಕಾರ ಬದ್ಧವಾಗಿದೆ. ಕುಮಾರಸ್ವಾಮಿ ಹೇಳಿಕೆಯನ್ನು ಗಮನಿಸಿದ್ದೇನೆ. ಅಲಿಖಿತ ಆಗಿದ್ದರೂ ಹೆಚ್ಚಿನ ಜನರು ಬಳಸ್ತಿರೋದು ಹಿಂದಿ ಎಂದು ರವಿಕುಮಾರ್ ಹೇಳಿದ್ದಾರೆ.

BJP state secretary Ravikumar has made it clear in the case of a home minister, who was caught in a scuffle that a youth was murdered for not being Urdu.