ಪರಿಷತ್ ಕ್ಷೇತ್ರದಲ್ಲಿ ಟಿಕೆಟ್ ತಪ್ಪುವ ಆತಂಕ ; ಬಿಜೆಪಿ ಸೇರುವ ನಿರ್ಧಾರದಿಂದ ಉಲ್ಟಾ ಹೊಡೆಯುತ್ತಾರಾ ಹೊರಟ್ಟಿ ! ಕಾದು ನೋಡ್ತೀನಿ ಎಂದ ಸಭಾಪತಿ 

09-04-22 09:41 pm       HK Desk news   ಕರ್ನಾಟಕ

ವಿಧಾನ ಪರಿಷತ್ ಚುನಾವಣೆಗೆ ಶಿಕ್ಷಕರ ಕ್ಷೇತ್ರದಿಂದ ತಾನೇ ಬಿಜೆಪಿ ಅಭ್ಯರ್ಥಿ ಎಂದು ಮೋಹನ್ ಲಿಂಬೆಕಾಯಿ ಹೇಳಿರುವುದರಿಂದ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದ ಜನತಾ ಪರಿವಾರದ ಹಿರಿಯ ಮುಖಂಡ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ‌ ತನ್ನ ನಿರ್ಧಾರದಿಂದ ಉಲ್ಟಾ ಹೊಡೆಯಲು ಮುಂದಾಗಿದ್ದಾರೆ. 

ಧಾರವಾಡ, ಎ.9: ವಿಧಾನ ಪರಿಷತ್ ಚುನಾವಣೆಗೆ ಶಿಕ್ಷಕರ ಕ್ಷೇತ್ರದಿಂದ ತಾನೇ ಬಿಜೆಪಿ ಅಭ್ಯರ್ಥಿ ಎಂದು ಮೋಹನ್ ಲಿಂಬೆಕಾಯಿ ಹೇಳಿರುವುದರಿಂದ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದ ಜನತಾ ಪರಿವಾರದ ಹಿರಿಯ ಮುಖಂಡ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ‌ ತನ್ನ ನಿರ್ಧಾರದಿಂದ ಉಲ್ಟಾ ಹೊಡೆಯಲು ಮುಂದಾಗಿದ್ದಾರೆ. 

ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಲಿಂಬೆಕಾಯಿ ಅಭ್ಯರ್ಥಿಯಾದರೆ ನನಗೇನು ತೊಂದರೆ ಇಲ್ಲ. ಬಿಜೆಪಿ ಪಕ್ಷಕ್ಕೆ ನಾನು ಇನ್ನೂ ಹೋಗಿಲ್ಲ. ನನಗೆ ಕೇಳಿದ್ರೂ ನಾನು ಎಲ್ಲವೂ ಡಿಕ್ಲೇರ್ ಆಗಲಿ ಎಂದು ಹೇಳಿದ್ದೆ. ಇನ್ನು ಚುನಾವಣೆ ಡಿಕ್ಲೆರ್ ಆಗಲಿ. ಇನ್ನೂ ಸಮಯ ಇದೆ, ನಾನು ಬಿಜೆಪಿ ಸೆರೋದರ ಬಗ್ಗೆ ಕ್ಲಿಯರ್ ನಿರ್ಧಾರ ಮಾಡಿಲ್ಲ ಎಂದು ಹೊರಟ್ಟಿ ಹೇಳಿದ್ದಾರೆ. 

ನಾನು ಸುಳ್ಳು ಹೇಳಲ್ಲ, ಅವರು ನನಗೆ ಟಿಕೆಟ್ ಇಲ್ಲ ಅಂದ್ರು ಅಭ್ಯಂತ್ರ ಇಲ್ಲ. ನಾನು ಚುನಾವಣೆಗೆ ನಿಲ್ಲೋದು ಗ್ಯಾರಂಟಿ.‌ ಹೇಗೆ ನಿಲ್ತೇನಿ ಎಂಬುದನ್ನ ಹೇಳೋಲ್ಲ. ನಾನು ಯಾವ ಪಕ್ಷದಿಂದ ನಿಲ್ಲಲಿ ಬಿಡಲಿ. ಶಿಕ್ಷಕರು ನನ್ನ ಸೋಲಿಸಲಿಕ್ಕೆ ಸಾಧ್ಯನೇ ಇಲ್ಲ, ಅವರೆಲ್ಲರೂ ಸೇರಿ ನನ್ನನ್ನ ಗೆಲ್ಲಿಸಿಯೇ ತೀರುತ್ತಾರೆ. ನನಗೆ  ಬಿಜೆಪಿ ಅವರು ನಮ್ಮ‌ ಪಕ್ಷದಿಂದ ನಿಲ್ಲಿ ಎಂದು ಕೇಳಿದ್ರು. ಸಹಜವಾಗಿ ನಾನು ಓಕೆ ಅಂದಿದ್ದೆ. 

Former MLC Mohan Limbikai is BS Yediyurappa's legal adviser

ನಾನು‌ ಜೆಡಿಎಸ್ ನಿಂದ ದೊಡ್ಡವನಾಗಿದ್ದೇನೆ.‌ ಯಾರಿಗೂ ಜೆಡಿಎಸ್ ಪಕ್ಷ ಬಿಟ್ಟು ಹೋಗಿ ಅಂತ ಹೇಳಿಲ್ಲ. ಬದಲಾವಣೆಯ ವಿಚಾರವಾಗಿ ಈ ರೀತಿಯಾಗಿದೆ.‌ ಮುಂದೆ ಏನ್ ಆಗುತ್ತೆ ಎಂಬುದನ್ನ ಕಾದು ನೋಡೋಣ. ಶಿಕ್ಷಕರೇ ನಮಗೆ ನೀವೇ ದೇವರು ಅಂತ ಹೇಳ್ತಾ ಇದಾರೆ. ಹೀಗಾಗಿ ಎಲ್ಲದನ್ನೂ ಕಾದು ನೋಡಬೇಕು ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ‌

ಮೊನ್ನೆಯಷ್ಟೇ ಬಿಜೆಪಿ ಸೇರುವುದು ಖಚಿತ ಎಂದು ಹೇಳಿ ಹೊರಟ್ಟಿ ಅಚ್ಚರಿ ಮೂಡಿಸಿದ್ದರು. ಆದರೆ ಮೋಹನ್ ಲಿಂಬೆಕಾಯಿ ಮಾತನಾಡಿ, ಹೊರಟ್ಟಿ ಅವರನ್ನು ಯಾರೂ ಬಿಜೆಪಿಗೆ ಕರೆದಿಲ್ಲ. ಶಿಕ್ಷಕರ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ ಎಂದು ಹೇಳಿ ಟಾಂಗ್ ನೀಡಿದ್ದರು.

I am not guaranteed to stand for election. But how Nilteane Annodon did not say. "Teachers cannot defeat me, let alone party," deputy chairman Basavaraja said.