ಪ್ರಭಾವಿ ನಾಯಕರು ಆಪ್ ಪಕ್ಷದತ್ತ ; ಯಡಿಯೂರಪ್ಪ, ಸಿದ್ದರಾಮಯ್ಯ ಬೆಂಬಲಿಗರೂ ಪೊರಕೆಯತ್ತ ಚಿತ್ತ ! ಕೋಡಿಹಳ್ಳಿ ಚಂದ್ರಶೇಖರ್, ನಿವೃತ್ತ ಅಧಿಕಾರಿಗಳಿಗೆ ಗಾಳ 

09-04-22 11:09 pm       Bengaluru Correspondent   ಕರ್ನಾಟಕ

ಆಮ್ ಆದ್ಮಿ ಪಕ್ಷ ರಾಜ್ಯ ವಿಧಾನಸಭಾ ಚುನಾವಣೆಯತ್ತ ಕಣ್ಣಿಟ್ಟು ಸಿದ್ಧತೆ ಆರಂಭಿಸಿದ್ದು, ಪ್ರಭಾವಿ ನಾಯಕರು, ನಿವೃತ್ತ ಅಧಿಕಾರಿಗಳನ್ನು ಸೆಳೆದುಕೊಳ್ಳಲು ಮುಂದಾಗಿದೆ.

ಬೆಂಗಳೂರು, ಎ.9 : ಆಮ್ ಆದ್ಮಿ ಪಕ್ಷ ರಾಜ್ಯ ವಿಧಾನಸಭಾ ಚುನಾವಣೆಯತ್ತ ಕಣ್ಣಿಟ್ಟು ಸಿದ್ಧತೆ ಆರಂಭಿಸಿದ್ದು, ಪ್ರಭಾವಿ ನಾಯಕರು, ನಿವೃತ್ತ ಅಧಿಕಾರಿಗಳನ್ನು ಸೆಳೆದುಕೊಳ್ಳಲು ಮುಂದಾಗಿದೆ. ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಮ್ ಆದ್ಮಿ ಸೇರಿದ ಬಳಿಕ ಮತ್ತೊಬ್ಬ ನಿವೃತ್ತ ಕೆಎಎಸ್ ಅಧಿಕಾರಿ ಮಥಾಯಿ ಅವರು ಆಪ್ ಸೇರಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಬಂದಿದೆ. 

ಕೆಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಕೆ‌. ಮಥಾಯಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಈ ಹಿಂದೆ ಸಕಾಲ ಯೋಜನೆ, ಬಿಬಿಎಂಪಿ ಜಾಹಿರಾತು ವಿಭಾಗದಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಮಥಾಯಿ, 2020ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ತಮ್ಮ ದಿಟ್ಟ ನಿಲುವು, ಕ್ರಮಗಳಿಂದ ಸರ್ಕಾರವನ್ನೇ ಎದುರು ಹಾಕಿಕೊಂಡು ಸುದ್ದಿಯಾಗಿದ್ದವರು ಮಥಾಯಿ. 

Arvind Kejriwal promises Rs 1,000 to women, Rs 5,000 to jobless youths  monthly if voted to power in- The New Indian Express

ಮಥಾಯಿ ಅವರು ಏಪ್ರಿಲ್ 21 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ರೈತ ಸಂಘದ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷ ಸೇರಲಿದ್ದಾರೆ ಎನ್ನಲಾಗುತ್ತಿದೆ. ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಾಲ್ಗೊಳ್ಳುವ ನಿರೀಕ್ಷೆಗಳಿವೆ. ಇದೇ ವೇಳೆ, ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಆಪ್'ಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮಾಹಿತಿಗಳಿವೆ.

Investors shunning Karnataka, says Siddaramaiah | Deccan Herald

ಸಿದ್ದರಾಮಯ್ಯ ಅವರ ಕೆಲ ಬೆಂಬಲಿಗರು ಕೂಡ ಬಾದಾಮಿ ಕ್ಷೇತ್ರದಲ್ಲಿ ಆಪ್ ಸೇರ್ಪಡೆಗೊಳ್ಳಲು ಉತ್ಸುಕರಾಗಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಭಾಸ್ಕರ್ ರಾವ್ ಅವರೊಂದಿಗೆ ದೆಹಲಿಯಲ್ಲಿ ಆಪ್ ಸೇರಿದ್ದರು. ಅಲ್ಲದೆ, ರಾಜ್ಯದ ವಿವಿಧೆಡೆ ಯಡಿಯೂರಪ್ಪ ಬೆಂಬಲಿಗರು ಮತ್ತು ಸಿದ್ದರಾಮಯ್ಯ ಬೆಂಬಲಿಗರು ಆಪ್ ಪಕ್ಷ ಸೇರಲು ಮುಂದಾಗಿದ್ದಾರೆ ಎನ್ನುವ ಮಾಹಿತಿಗಳಿವೆ. ಸದ್ಯದಲ್ಲೇ ಕೇಜ್ರಿವಾಲ್ ರಾಜ್ಯ ಪ್ರವಾಸ ಮಾಡಲಿದ್ದು ಆ ಹೊತ್ತಿಗೆ ಈ ವಿಚಾರ ಪಕ್ಕಾ ಆಗಲಿದೆ.

The aam aadmi party (aap) is gearing up for the assembly elections in the state to rope in influential leaders and retired bureaucrats. after former ips officer bhaskar rao joined the aam aadmi party( aap), another retired kas officer mathai is all set to join aap.