ಬೆಳಗಾವಿಯಲ್ಲಿ ಸಭೆ ನಡೆಸುತ್ತಿದ್ದ ಬಿಎಸ್ವೈ, ಅರುಣ್ ಸಿಂಗ್ ಗೆ ಆಪ್ ಕಾರ್ಯಕರ್ತರ ಮುತ್ತಿಗೆ, ಸಚಿವ ಈಶ್ವರಪ್ಪ ವಜಾಕ್ಕೆ ಒತ್ತಾಯ 

12-04-22 05:00 pm       HK Desk news   ಕರ್ನಾಟಕ

ಗುತ್ತಿಗೆದಾರ ಸಂತೋಷ ಪಾಟೀಲ ಎಂಬವರು ಸಚಿವ ಈಶ್ವರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿದ್ದರಿಂದ ಬಿಜೆಪಿ ನಾಯಕರು ಸಭೆ ನಡೆಸುತ್ತಿದ್ದ ಹೋಟೆಲ್‌ಗೆ ಆಪ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.‌

ಬೆಳಗಾವಿ, ಎ.12 : ಗುತ್ತಿಗೆದಾರ ಸಂತೋಷ ಪಾಟೀಲ ಎಂಬವರು ಸಚಿವ ಈಶ್ವರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿದ್ದರಿಂದ ಬಿಜೆಪಿ ನಾಯಕರು ಸಭೆ ನಡೆಸುತ್ತಿದ್ದ ಹೋಟೆಲ್‌ಗೆ ಆಪ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.‌

ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ಮಾಜಿ ಸಿಎಂ ಬಿಎಸ್‌ವೈ ಬಿಜೆಪಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದಾಗ ಹೊರಗೆ ಸೇರಿದ ಕಾರ್ಯಕರ್ತರು ಘೆರಾವ್ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಆಪ್ ನಾಯಕ ರಾಜು ಟೋಪಣ್ಣನವರ ನೇತೃತ್ವದಲ್ಲಿ ಹೋಟೆಲ್‌ಗೆ ಮುತ್ತಿಗೆ ಹಾಕಿದ್ದು ಬಿಜೆಪಿ ನಾಯಕರಿಗೆ ಧಿಕ್ಕಾರ ಕೂಗಿದ್ದಾರೆ.‌ 

ಸಂತೋಷ ಸಾವಿಗೆಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ಆಪ್ ಕಾರ್ಯಕರ್ತರು ಆರೋಪಿಸಿದ್ದು ಸಚಿವ ಈಶ್ವರಪ್ಪ, ಬಿಎಸ್‌ವೈ, ಅರುಣ್ ಸಿಂಗ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ. ಅಲ್ಲದೆ ಸಚಿವ ಈಶ್ವರಪ್ಪ ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಆಪ್ ಮುಖಂಡರ ಆಗ್ರಹಿಸಿದ್ದಾರೆ. ಮುತ್ತಿಗೆ ಹಾಕಿದ ಆಪ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದು ಮಾಳಮಾರುತಿ ಠಾಣೆಗೆ ಕರೆದೊಯ್ದಿದ್ದಾರೆ.

AAP workers gheraoed a hotel where bjp leaders were holding a meeting after a contractor, santosh patil, committed suicide by writing down the name of minister Eshwarappa.