ಬ್ರೇಕಿಂಗ್ ನ್ಯೂಸ್
13-04-22 05:44 pm Bengaluru Correspondent ಕರ್ನಾಟಕ
ಬೆಂಗಳೂರು, ಎ.12: ದೆಹಲಿ ನಾಯಕರಿಂದ ರಾಜಿನಾಮೆಗೆ ಸೂಚನೆ ವದಂತಿ, ರಾಜ್ಯದಾದ್ಯಂತ ಕಾಂಗ್ರೆಸ್ ಪ್ರತಿಭಟನೆ, ರಾಜಿನಾಮೆಗೆ ಆಗ್ರಹದ ನಡುವೆಯೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಾತ್ರ ಯಾವುದೇ ಕಾರಣಕ್ಕೂ ರಾಜಿನಾಮೆ ನೀಡಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಈಶ್ವರಪ್ಪ, ಯಾರೋ ಒಬ್ಬ ವಾಟ್ಸಪ್ ನಲ್ಲಿ ಟೈಪ್ ಮಾಡಿದ್ದಾನೆ ಎಂದ ಮಾತ್ರಕ್ಕೆ ಅದು ಡೆತ್ ನೋಟ್ ಆಗಲ್ಲ. ಅದರಲ್ಲಿ ಸಹಿಯೂ ಇಲ್ಲ. ಕೈಬರಹವೂ ಇಲ್ಲ. ಅದು ಆತನೇ ಬರೆದಿದ್ದಾನೆ ಎನ್ನುವುದಕ್ಕೆ ಯಾವುದೇ ದಾಖಲೆ ಇಲ್ಲ. ಹೀಗಿರಬೇಕಾದರೆ ನಾನು ಯಾಕಾಗಿ ರಾಜಿನಾಮೆ ನೀಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಸಂತೋಷ್ ಪಾಟೀಲ್ ಎಂಬ ವ್ಯಕ್ತಿಯನ್ನು ಒಮ್ಮೆಯೂ ಕಣ್ಣಾರೆ ಕಂಡಿಲ್ಲ. ಆತ ದೆಹಲಿಗೆ ಹೋಗಿದ್ದಾನೆ. ಅಮಿತ್ ಷಾ, ಮೋದಿಗೆ ದೂರು ನೀಡಿದ್ದಾನೆ. ನಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಿನಿಸ್ಟರ್ ಗಿರಿರಾಜ್ ಸಿಂಗ್ ಅವರಿಗೂ ದೂರು ನೀಡಿದ್ದಾನೆ. ಇಷ್ಟೆಲ್ಲ ಮಾಡಲು ಆತನಿಗೆ ಹಣದ ವ್ಯವಸ್ಥೆ ಮಾಡಿದ್ದು ಯಾರು.. ಬಡ ಮನುಷ್ಯ ಅಂತಾರೆ, ಆತನಿಗೆ ದೆಹಲಿಗೆ ಹೋಗಲು ವಿಮಾನದ ಟಿಕೆಟ್ ಬುಕ್ ಮಾಡಿಸಿದವರು ಯಾರು.. ಇವೆಲ್ಲದರ ಬಗ್ಗೆ ತನಿಖೆ ಆಗಬೇಕು.
ನಮ್ಮ ಇಲಾಖೆಯಲ್ಲಿ ಯಾವುದೇ ಕಾಮಗಾರಿಯನ್ನೂ ಹಾಗೆಲ್ಲ ಕೊಡೋಕ್ಕಾಗಲ್ಲ. ಅಡ್ಮಿನಿಸ್ಟ್ರೇಟಿವ್ ಕ್ಲಿಯರ್ ಆಗಬೇಕು, ಟೆಕ್ನಿಕಲ್ ಕ್ಲಿಯರ್ ಆದಬಳಿಕ ಸ್ಯಾಂಕ್ಷನ್ ಆಗಬೇಕಾಗುತ್ತದೆ. ಇಷ್ಟೆಲ್ಲ ಪ್ರಕ್ರಿಯೆ ಆಗಿರುವುದರ ಯಾವುದೇ ದಾಖಲೆ ಆತನಲ್ಲಿ ಇಲ್ಲ. ಕಾಮಗಾರಿ ಮಾಡಿದ್ದೀನಿ, ಹಣ ಕೊಡಬೇಕು ಎಂದರೆ ಹೇಗೆ ಕೊಡೊಕ್ಕಾಗುತ್ತದೆ. ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಅದರ ಬಗ್ಗೆ ತನಿಖೆ ಆಗಲಿ. ಏನೆಲ್ಲ ಪಿತೂರಿ ಇದೆ ಅನ್ನೋದು ಹೊರಬರುತ್ತದೆ. ಹಾಗಂತ, ನನ್ನ ಮೇಲೆ ಯಾರೋ ಆರೋಪ ಮಾಡಿದ ಮಾತ್ರಕ್ಕೆ ಯಾಕೆ ರಾಜಿನಾಮೆ ಕೊಡಬೇಕು. ನನಗೆ ಯಾವುದೇ ದೆಹಲಿ ನಾಯಕರು ಫೋನ್ ಮಾಡಿಲ್ಲ. ಹೈಕಮಾಂಡಿನಿಂದ ಸೂಚನೆ ಬಂದಿದೆ ಅನ್ನೋದು ಸುಳ್ಳು. ನಾನು ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತೇನೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಜೊತೆಗೆ ಮಾತನಾಡಿದ್ದೇನೆ. ಏನೂ ಚಿಂತೆ ಮಾಡಬೇಡಿ ಎಂದು ಹೇಳಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ನಾನು ರಾಜಿನಾಮೆ ನೀಡಲ್ಲ ಎಂದು ಈಶ್ವರಪ್ಪ ಖಡಕ್ಕಾಗಿ ಹೇಳಿದ್ದಾರೆ.
ಮಧ್ಯಾಹ್ನ ವೇಳೆಗೆ ಈಶ್ವರಪ್ಪ ರಾಜಿನಾಮೆ ನೀಡುತ್ತಾರೆಂದು ವದಂತಿ ಹಬ್ಬಿತ್ತು. ಆದರೆ ಮೈಸೂರಿನಿಂದ ಬೆಂಗಳೂರು ಆಗಮಿಸಿದ ಈಶ್ವರಪ್ಪ ರಾಂಗ್ ಆಗಿದ್ದು, ರಾಜಿನಾಮೆ ನೀಡಲ್ಲ ಎಂದು ತನ್ನನ್ನು ತಾನು ಸಮರ್ಥನೆ ಮಾಡಿಕೊಂಡಿದ್ದಾರೆ.
Amid increasing pressure for his resignation over the death of a civil contractor, Karnataka Rural Development and Panchayat Raj Minister KS Eshwarappa on Wednesday ruled out the possibility of stepping down from his post. He also termed the contractor's death note as "false propaganda."He demanded an investigation into the "conspiracy" behind the death of Santosh Patil who accused Eshwarappa of corruption. The minister's statement came in wat of the Bharatiya Janata Party (BJP) leader being booked by police for abetment of suicide.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm