ಹಿಂಡಲಗಾದಲ್ಲಿ 108 ಕಾಮಗಾರಿ ಆಗಿದ್ದು ಸತ್ಯ, RDPR ಫಂಡಿನಡಿ ಪಂಚಾಯಿತಿ ಠರಾವು ಬೇಕಿಲ್ಲ ; ಈಶ್ವರಪ್ಪ ಮಾತನ್ನು ಅಲ್ಲಗಳೆದ ಬಿಜೆಪಿ ಗ್ರಾಪಂ ಅಧ್ಯಕ್ಷ ! 

19-04-22 01:38 pm       HK Desk news   ಕರ್ನಾಟಕ

ಬಿಜೆಪಿ ಆಡಳಿತ ಇರುವ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ 104 ಕಾಮಗಾರಿಗಳನ್ನು ಮಾಡಿಸಿದ್ದು ಈ ಬಗ್ಗೆ ಈಶ್ವರಪ್ಪ ಉಲ್ಟಾ ಹೇಳಿಕೆ ನೀಡಿದ್ದರಿಂದ ಕಾಮಗಾರಿ ಬಗ್ಗೆಯೇ ಅನುಮಾನ ವ್ಯಕ್ತವಾಗಿತ್ತು.‌

ಬೆಳಗಾವಿ, ಎ.18 : ಬಿಜೆಪಿ ಆಡಳಿತ ಇರುವ ಹಿಂಡಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ 104 ಕಾಮಗಾರಿಗಳನ್ನು ಮಾಡಿಸಿದ್ದು ಈ ಬಗ್ಗೆ ಈಶ್ವರಪ್ಪ ಉಲ್ಟಾ ಹೇಳಿಕೆ ನೀಡಿದ್ದರಿಂದ ಕಾಮಗಾರಿ ಬಗ್ಗೆಯೇ ಅನುಮಾನ ವ್ಯಕ್ತವಾಗಿತ್ತು.‌ ಆದರೆ ಗ್ರಾಪಂ ಅಧ್ಯಕ್ಷ ನಾಗೇಶ್ ಮಂಡೋಳಕರ್ ಇದೀಗ ಹೇಳಿಕೆ ನೀಡಿದ್ದು , ಎಲ್ಲ ಕಾಮಗಾರಿ ನಡೆದಿದ್ದು ಸತ್ಯ ಎಂದಿದ್ದಾರೆ. 

ಸಂತೋಷ ಪಾಟೀಲ್ ಜೊತೆ 12 ಜನ ಉಪ ಗುತ್ತಿಗೆದಾರರು ಕಾಮಗಾರಿ ಮಾಡಿದ್ದಾರೆ. 4 ಕೋಟಿ ವೆಚ್ಚದಲ್ಲಿ 108 ಕಾಮಗಾರಿಗಳನ್ನ ಎಲ್ಲರೂ ಸೇರಿ ಮಾಡಿದ್ದಾರೆ. ಸಂತೋಷ ಪಾಟೀಲ್ 50 ಲಕ್ಷದ ಕಾಮಗಾರಿ ಸ್ವಂತ ನೆಲೆಯಲ್ಲಿ ಮಾಡಿದ್ದ. ಉಳಿದವರಿಗೆ ಸಬ್ ಕಾಂಟ್ರ್ಯಾಕ್ಟ್ ನೀಡಲಾಗಿತ್ತು. ಇದಕ್ಕಾಗಿ ಪ್ರತ್ಯೇಕ ವರ್ಕ್ ಆರ್ಡರ್ ಇರಲಿಲ್ಲ. RDPR ಫಂಡ್ ಇದೆ ಎಂದು ಸಂತೋಷ  ಪಾಟೀಲ್ ಹೇಳುತ್ತಿದ್ದ. 

After accusing Minister Eshwarappa of corruption, Belagavi BJP worker ends  life | Deccan Herald

ನಿನ್ನೆ ಎಲ್ಲ ಗುತ್ತಿಗೆದಾರರ ಜೊತೆ ರಮೇಶ ಜಾರಕಿಹೊಳಿಯವರನ್ನ ಭೇಟಿಯಾಗಿದ್ದೇವೆ. ನಾವು ಕೆಲಸ ಮಾಡಿದ್ದೇವೆ, ಹೀಗಾಗಿ
ಸರ್ಕಾರದೊಂದಿಗೆ ಮಾತನಾಡಿ ಬಿಲ್ ಕೊಡಿಸುವಂತೆ ಮನವಿ ಮಾಡಿದ್ದೇವೆ. ಕಾಮಗಾರಿ ವಿಚಾರವಾಗಿ ರಮೇಶ ಜಾರಕಿಹೊಳಿಯವ್ರು ಈಶ್ವರಪ್ಪರನ್ನ ಭೇಟಿಯಾಗಲು ತಿಳಿಸಿಲ್ಲ. ವರ್ಕ್ ಆರ್ಡರ್ ಕುರಿತು ನನಗೆ ಮಾಹಿತಿಯಿಲ್ಲ, ಸಂತೋಷ ಪಾಟೀಲ್ ಅದನ್ನ ಫಾಲೋಅಪ್ ಮಾಡ್ತಿದ್ರು. 

ಕಾಮಗಾರಿ ಕುರಿತು ಪಂಚಾಯತಿಯಲ್ಲಿ ಯಾವುದೇ ಠರಾವು ಪಾಸ್ ಮಾಡಿಲ್ಲ. RDPR ಸ್ಪೆಷಲ್ ಫಂಡ್ ಇದೆ, ಹೀಗಾಗಿ ಠರಾವು ಅಗತ್ಯವಿಲ್ಲ ಎಂದು ಸಂತೋಷ ಪಾಟೀಲ್ ಹೇಳಿದ್ದ. ಅದರಂತೆ, ಉಪ ಗುತ್ತಿಗೆದಾರರು ಸೇರಿ ಕಾನಗಾರಿ ನಿರ್ವಹಣೆ ಮಾಡಿದ್ದರು. ಹಿಂಡಲಗಾ ಗ್ರಾಮದಲ್ಲಿ ಎಲ್ಲ ಕಡೆ ಕಾಮಗಾರಿ ಆಗಿದ್ದು ನಿಜ ಇದೆ.‌

K S Eshwarappa sparks row with expletive against Congress leaders,  apologises later | Deccan Herald

ಹಾಗೆಂದು, ಸಂತೋಷ ಪಾಟೀಲ್ ಗೆ ಹಣದ ವಿಚಾರವಾಗಿ ಯಾರು ಕೂಡ ಒತ್ತಡ ಹಾಕಿರಲಿಲ್ಲ.  ಸಂತೋಷ ಪಾಟೀಲ್ ಮತ್ತು ಸಬ್ ಕಾಂಟ್ರಾಕ್ಟರುಗಳು ಎಲ್ಲರ ಮಧ್ಯೆ ಸಂಬಂಧ ಚೆನ್ನಾಗಿದೆ. ಈ ನಡುವೆ ಸಚಿವ ಈಶ್ವರಪ್ಪರನ್ನ ಎರಡು ಭಾರಿ ಭೇಟಿಯಾಗಿದ್ದೆವು. ನನಗೆ ಕನ್ನಡದ ಲ್ಯಾಂಗ್ವೇಜ್ ಸಮಸ್ಯೆ ಇದ್ದುದರಿಂದ ಏನು ಮಾತನಾಡಿದ್ರು ಎಂದು ಅರ್ಥವಾಗಿಲ್ಲ. ನನಗೆ ಮರಾಠಿ, ಹಿಂದಿ ಮಾತ್ರ ಗೊತ್ತಿರೋದು. ಹಾಗಾಗಿ ಸಂತೋಷ ಪಾಟೀಲ್ ಈಶ್ವರಪ್ಪನವರ ಜೊತೆ ಮಾತನಾಡುತ್ತಿದ್ದ. ಕಾಮಗಾರಿ ಎಲ್ಲದರ ಬಗ್ಗೆ ನಮಗೂ ಹೇಳುತ್ತಿದ್ದ. ಈ ವೇಳೆ ಯಾವುದೇ ಸ್ವಾಮೀಜಿಗಳು ಯಾರೂ ನಮ್ಮ ಜೊತೆ ಬಂದಿರಲಿಲ್ಲ ಎಂದು ಗ್ರಾಪಂ ಅಧ್ಯಕ್ಷ ನಾಗೇಶ್ ಮುನ್ನೋಳ್ಕರ್ ಹೇಳಿದ್ದಾರೆ.

Bjp gram panchayat president refuses all statements made by KS Eshwarappa on RDPR.