ಹುಬ್ಬಳ್ಳಿ ಗಲಭೆ ; ಬಂಧಿತರ ಬಿಡುಗಡೆಗೆ ಮತ್ತೊಂದು ಹೋರಾಟಕ್ಕೆ ಸಿದ್ಧತೆ ! ರಾತ್ರೋರಾತ್ರಿ ಕೈದಿಗಳು ಕಲಬುರ್ಗಿ ಜೈಲಿಗೆ ಶಿಫ್ಟ್ , ಬಂಧಿತರ ಸಂಖ್ಯೆ 104ಕ್ಕೆ ಏರಿಕೆ 

19-04-22 07:55 pm       HK Desk news   ಕರ್ನಾಟಕ

ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಗಲಭೆ ಪ್ರಕರಣದಲ್ಲಿ ಬಂಧಿತರ ಬಿಡುಗಡೆಗಾಗಿ ಮತ್ತೊಂದು ಹೋರಾಟಕ್ಕೆ ತಯಾರಿ ನಡೆಸಿರುವ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಕೈದಿಗಳನ್ನು ರಾತ್ರೋರಾತ್ರಿ ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. 

ಹುಬ್ಬಳ್ಳಿ, ಎ.19: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಗಲಭೆ ಪ್ರಕರಣದಲ್ಲಿ ಬಂಧಿತರ ಬಿಡುಗಡೆಗಾಗಿ ಮತ್ತೊಂದು ಹೋರಾಟಕ್ಕೆ ತಯಾರಿ ನಡೆಸಿರುವ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಕೈದಿಗಳನ್ನು ರಾತ್ರೋರಾತ್ರಿ ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. 

ಗುಪ್ತಚರ ಮಾಹಿತಿಯಿಂದ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ಬಂಧಿತರ ಬಿಡುಗಡೆಗೆ ಆಗ್ರಹಿಸಿ ಕೆಲವು ಸಂಘಟನೆಗಳು ಹೋರಾಟಕ್ಕೆ ಮುಂದಾಗಿರುವ ಮಾಹಿತಿಗಳಿವೆ. ಹೀಗಾಗಿ ಏಕಾಏಕಿ ಆರೋಪಿಗಳನ್ನು ಕಲಬುರಗಿಯ ಕೇಂದ್ರಿಯ ಕಾರಾಗೃಹಕ್ಕೆ ರವಾನೆ ಮಾಡಲಾಗಿದೆ ಎನ್ನಲಾಗಿದೆ. ಹುಬ್ಬಳ್ಳಿಯಿಂದ ನವಲಗುಂದ ಮಾರ್ಗವಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಗಳನ್ನು ರವಾನಿಸಲಾಯಿತು. 

Hubballi violence: K'taka Police launch manhunt for Maulvi - Mangalorean.com

ಸುಮಾರು 88 ಜನರನ್ನು ಕಲಬುರಗಿ ಜೈಲಿಗೆ ಕಳುಹಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಆರೋಪಿಗಳನ್ನ ಸ್ಥಳಾಂತರಿಸಲಾಗಿದ್ದು, ಬಂಧಿತರೆಲ್ಲರಿಗೂ ಹುಬ್ಬಳ್ಳಿಯ 4ನೇ ಜೆಎಮ್‌ಎಫ್​ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇಂದು ಪೊಲೀಸರು ಮತ್ತೆ 14 ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ. 

ಇದೇ ವೇಳೆ, ಪೊಲೀಸ್ ವಾಹನದ ಮೇಲೆ ಹತ್ತಿದ್ದ ಮೌಲ್ವಿಯ ಪತ್ತೆಗೆ ಕಾರ್ಯಾಚರಣೆ ನಡೆದಿದೆ. ಅಲ್ಲದೆ, ಗಲಭೆಯಲ್ಲಿ ಹೊರಗಿನವರು ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಅಲ್ತಾಫ್ ಅಳ್ಳೂರ ಮಾಹಿತಿ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

The Karnataka Police have launched a hunt for a Maulvi for delivering hate speech and instigating a mob to indulge in large-scale violence after an objectionable post appeared on social media, police said on Tuesday.Maulvi Waseem went missing after finding out that the police are after him.