ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಾಟೆ ರೀತಿಯಲ್ಲೇ ಗಲಭೆಗೆ ಸಂಚು ನಡೆದಿತ್ತು ; ಎನ್ಐಎ ತನಿಖೆ ಬಗ್ಗೆ ಚಿಂತನೆ - ಸಚಿವ ಪ್ರಹ್ಲಾದ ಜೋಷಿ 

22-04-22 01:41 pm       HK Desk news   ಕರ್ನಾಟಕ

ಕೆಜಿ ಹಳ್ಳಿ, ಡಿಜೆ ಹಳ್ಳಿ ಮಾದರಿಯಲ್ಲೇ ಹುಬ್ಬಳ್ಳಿಯಲ್ಲಿ ಗಲಭೆ ನಡೆಸಲು ಸಂಚು ಹೂಡಲಾಗಿತ್ತು. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ವಿಚಾರಿಸಿದ್ದು ಪೊಲೀಸರೇ ಮಾಹಿತಿ ಕೊಟ್ಟಿದ್ದಾರೆ.

ರಾಯಚೂರು, ಎ.22 : ಕೆಜಿ ಹಳ್ಳಿ, ಡಿಜೆ ಹಳ್ಳಿ ಮಾದರಿಯಲ್ಲೇ ಹುಬ್ಬಳ್ಳಿಯಲ್ಲಿ ಗಲಭೆ ನಡೆಸಲು ಸಂಚು ಹೂಡಲಾಗಿತ್ತು. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ವಿಚಾರಿಸಿದ್ದು ಪೊಲೀಸರೇ ಮಾಹಿತಿ ಕೊಟ್ಟಿದ್ದಾರೆ. ಘಟನೆ ಕುರಿತು ಎನ್ಐಎ ತನಿಖೆ ನಡೆಸುವ ಅಗತ್ಯವಿದೆಯೇ ಎಂಬ ಬಗ್ಗೆ ರಾಜ್ಯದ ಪೊಲೀಸರು, ಲಾ ಎನ್ಫೋರ್ಸಿಂಗ್ ಏಜೆನ್ಸಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದ್ದಾರೆ. ‌

ಇದೇ ರೀತಿ ಎಲ್ಲೆಲ್ಲಿ ಗಲಭೆಯ ಸಂಚು ನಡೆದಿದೆಯೋ ಅನ್ನುವುದರ ಬಗ್ಗೆ ತನಿಖೆ ನಡೀತಿದೆ. ಹುಬ್ಬಳ್ಳಿ ಘಟನೆಗೆ ಅಲ್ಲಿನದೇ ಪ್ರಾರ್ಥನಾ ಮಂದಿರದಲ್ಲಿ ಸಂಚು ನಡೆದಿತ್ತು ಎನ್ನಲಾಗಿದೆ. ಆ ಬಗ್ಗೆ ಸತ್ಯ ಹೊರತೆಗೆದು ಅತ್ಯಂತ ಕಠೋರ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೀತಿದೆ. ಗಲಭೆ ಕ್ಲಿಪ್ಪಿಂಗ್ಸ್ ಆಧಾರದಲ್ಲಿ ಗಲಭೆಯ ಮಾಸ್ಟರ್ ಮೈಂಡ್ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರನ್ನು ಕಲ್ಲು ಚಪ್ಪಡಿ ಹಾಕಿ ಕೊಂದು ಹಾಕುವ ಪ್ರಯತ್ನ ನಡೆದಿತ್ತು. 
ಈಗ ಒಬ್ಬ ಮಾಸ್ಟರ್ ಮೈಂಡ್ ಸಿಕ್ಕಿದ್ದಾನೆ. ಇಂತಹ ಇನ್ನೂ ಎಷ್ಟೆಷ್ಟು ಮಾಸ್ಟರ್ ಮೈಂಡ್ ಗಳು ಇದ್ದಾರೋ, ಎಲ್ಲವನ್ನೂ ತನಿಖೆಯಿಂದ ಹೊರ ತೆಗೆಯುತ್ತೇವೆ ಎಂದರು ಜೋಷಿ. 

Violence Erupts At DJ Halli And KG Halli Over Facebook Post In Bengaluru  Photos: HD Images, Pictures, News Pics - Oneindia Photos

ಗಲಭೆಯಿಂದ ಯಾರಿಗೆ ಲಾಭ, ನಷ್ಟ ಎಂದು ಯಾರೂ ಮಾತನಾಡಬಾರದು.‌ ಗಲಭೆ ಎಬ್ಬಿಸಿದೋರು ಸಮಾಜದ್ರೋಹಿ ಶಕ್ತಿಗಳು. ಎಲ್ಲ ಮುಸಲ್ಮಾನರು ಅನ್ನುತ್ತಿಲ್ಲ, ಕೆಲ ಮತಾಂಧ ಮುಸಲ್ಮಾನರು ಕೃತ್ಯ ಮಾಡಿದ್ದಾರೆ. ಅಂಥವರನ್ನು ಪೊಲೀಸರು ಬಂಧಿಸಿದಾಗ ಯಾಕೆ ಕಾಂಗ್ರೆಸ್, ಜೆಡಿಎಸ್ ಮಂದಿ ಸಪೋರ್ಟ್ ಮಾಡ್ತಾರೆ ಎನ್ನೋದು ಗೊತ್ತಾಗಲ್ಲ. 

ಹುಬ್ಬಳ್ಳಿ ಆಗ ಬಹಳ ಸೆನ್ಸಿಟಿವ್ ಇತ್ತು. ಆದರೆ ಕಳೆದ 20 ವರ್ಷದಿಂದ ಹುಬ್ಬಳ್ಳಿ ಶಾಂತವಾಗಿದೆ. ಲಾಭ ನಷ್ಟದ ಲೆಕ್ಕ ಹಾಕೋದನ್ನು ಕಾಂಗ್ರೆಸ್ ಬಂದ್ ಮಾಡ್ಲಿ. ತುಷ್ಟೀಕರಣ ಪಾಲಿಸಿಯಿಂದ ದೇಶ, ರಾಜ್ಯ ಈ ಸ್ಥಿತಿಗೆ ಬಂದಿದೆ. ಇನ್ನಾದ್ರೂ ಇಂಥಹದ್ದನ್ನು ಬಿಡಿ ಎಂದು ಪ್ರಹ್ಲಾದ್ ಜೋಶಿ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು.

Pralhad Joshi talks about Hubli riots says will think about NIA investigating.