ಬಿಜೆಪಿ ರಾಜ್ಯದಲ್ಲಿ ಬೆಂಕಿ ಹಚ್ಚಲು ಹೊರಟಿದೆ, ವರ್ಷ ಪೂರ್ತಿ ಹೀಗೇ ನಡೆಯತ್ತೆ ; ಎಚ್ಡಿಕೆ ವಾಗ್ದಾಳಿ 

22-04-22 03:13 pm       HK Desk news   ಕರ್ನಾಟಕ

ಹುಬ್ಬಳ್ಳಿ ಗಲಭೆ ಪ್ರಕರಣದ ಬಗ್ಗೆ ಸರಕಾರ ಗಂಭೀರವಾಗಿ  ತೆಗೆದುಕೊಂಡಿಲ್ಲ.‌ ಕಠಿಣ ಕ್ರಮಕ್ಕೆ  ಮೊದಲೇ ಸಲಹೆ ನೀಡಿದ್ದೆ.‌ ರಾಜ್ಯದಲ್ಲಿ ಕಲುಷಿತ ವಾತಾವರಣ  ನಿರ್ಮಾಣವಾಗಿದೆ. ಇನ್ನೂ ಒಂದು  ವರ್ಷ ಪೂರ್ತಿ ಇದೇ ನಡೆಯುತ್ತದೆ.

ಶಿವಮೊಗ್ಗ, ಎ.22 : ಹುಬ್ಬಳ್ಳಿ ಗಲಭೆ ಪ್ರಕರಣದ ಬಗ್ಗೆ ಸರಕಾರ ಗಂಭೀರವಾಗಿ  ತೆಗೆದುಕೊಂಡಿಲ್ಲ.‌ ಕಠಿಣ ಕ್ರಮಕ್ಕೆ  ಮೊದಲೇ ಸಲಹೆ ನೀಡಿದ್ದೆ.‌ ರಾಜ್ಯದಲ್ಲಿ ಕಲುಷಿತ ವಾತಾವರಣ  ನಿರ್ಮಾಣವಾಗಿದೆ. ಇನ್ನೂ ಒಂದು  ವರ್ಷ ಪೂರ್ತಿ ಇದೇ ನಡೆಯುತ್ತದೆ. ರಾಜ್ಯದಲ್ಲಿ ಬೆಂಕಿ ಹಚ್ಚಲು ಬಿಜೆಪಿ ಪಕ್ಷ ಹೊರಟಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ಬಿಜೆಪಿ ಸರ್ಕಾರ ನಡೆಸುವವರು ಕಾಣದ ಕೈಗಳು ಆಡಿಸಿದಂತೆ ಆಡಳಿತ ನಡೆಸುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ಸಿನ ಒಂದು ಗುಂಪು ಸಾಥ್ ಕೊಟ್ಟಿದೆ. ಕಳೆದ ಎರಡು ತಿಂಗಳಿಂದ  ಗಲಭೆ, ಗಲಾಟೆ ನಡೆಯುತ್ತಿದ್ದು ಅದನ್ನು ತಡೆಯಲು ಸರಕಾರ  ಸಂಪೂರ್ಣ ವಿಫಲವಾಗಿದೆ. ಯಾರೆಲ್ಲ ಪ್ರಚೋದನಕಾರಿ ಹೇಳಿಕೆ  ನೀಡುತ್ತಿದ್ದಾರೋ ಮೊದಲು  ಅವರನ್ನು ಬಂಧಿಸಬೇಕು ಎಂದು ಹಿಂದು ಸಂಘಟನೆಗಳ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.  

ಪರ್ಸೇಂಟೆಜ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ಸರಕಾರದ ಹಣ ಶೇಕಡಾ 65 ಮಧ್ಯವರ್ತಿಗಳ ಪಾಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಹೇಗೆ ಗುತ್ತಿಗೆದಾರರು ಕೆಲಸ ಮಾಡಬೇಕು. ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಈ ರೀತಿಯ ಅವ್ಯವಹಾರ ನಡೆದಿದೆ. ಕಾಂಗ್ರೆಸ್ ನಾಯಕರೇನು ಅಪ್ಪಟ ಚಿನ್ನವೇ ಎಂದು ಪ್ರಶ್ನೆ ಮಾಡಿದ್ದಾರೆ.

Bjp is trying to set Karnataka on fire slams HD Kumarswami.