ಬುಲ್ಡೋಜರ್ ಓಡಿಸಲು ನಮ್ಮಲ್ಲೂ ಕಾನೂನು ಇದೆ, ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕ್ತೀವಿ ; ಸಿಎಂ ಬೊಮ್ಮಾಯಿ ಎಚ್ಚರಿಕೆ 

22-04-22 06:36 pm       HK Desk news   ಕರ್ನಾಟಕ

ಗಲಭೆಕೋರರ ವಿರುದ್ಧ ಯುಪಿ ಸಿಎಂ ಯೋಗಿಯ ರೀತಿಯಲ್ಲೇ ಬುಲ್ಡೋಜರ್ ಕಾರ್ಯಾಚರಣೆ ನಡೆಸಬೇಕೆಂಬ ಬೇಡಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಯಾವುದೇ ರೀತಿಯ ಕಾರ್ಯಾಚರಣೆ ನಡೆಸುವುದಕ್ಕೂ ನಮ್ಮಲ್ಲಿ ಕಾನೂನು ಇದೆ.

ಕಲಬುರ್ಗಿ, ಎ.22 : ಗಲಭೆಕೋರರ ವಿರುದ್ಧ ಯುಪಿ ಸಿಎಂ ಯೋಗಿಯ ರೀತಿಯಲ್ಲೇ ಬುಲ್ಡೋಜರ್ ಕಾರ್ಯಾಚರಣೆ ನಡೆಸಬೇಕೆಂಬ ಬೇಡಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಯಾವುದೇ ರೀತಿಯ ಕಾರ್ಯಾಚರಣೆ ನಡೆಸುವುದಕ್ಕೂ ನಮ್ಮಲ್ಲಿ ಕಾನೂನು ಇದೆ. ಗಲಭೆಯಲ್ಲಿ ಆಸ್ತಿ ಪಾಸ್ತಿ ಹಾನಿ ಮಾಡಿದರೆ ಅದನ್ನು ಆರೋಪಿಗಳ ಆಸ್ತಿಗಳಿಂದಲೇ ರಿಕವರಿ ಮಾಡಲು ಹೈಕೋರ್ಟ್ ನಿರ್ದೇಶನ ಇದೆ ಎಂದು ಹೇಳಿ ಬುಲ್ಡೋಜರ್ ಕಾರ್ಯಾಚರಣೆಯನ್ನೂ ನಡೆಸಬಲ್ಲೆ ಎನ್ನುವ ಸುಳಿವು ನೀಡಿದ್ದಾರೆ. 

ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ನಂತರ ಹೈಕೋರ್ಟ್ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದೆ. ಯಾವ್ಯಾವ ಆಸ್ತಿಪಾಸ್ತಿಗೆ ಹಾನಿಯಾಗಿದೆ, ಅದನ್ನು ಅವರ ಆಸ್ತಿಗಳಿಂದಲೇ ರಿಕವರಿ ಮಾಡಲು ನಿರ್ದೇಶನ ಇದೆ. ಇದಕ್ಕಾಗಿ ಒಂದು ಕಮಿಷನ್ ಸಹ ನೇಮಿಸಲಾಗಿದೆ. ಹೀಗಾಗಿ ಗಲಭೆಕೋರರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ.‌ ಅವುಗಳನ್ನು ನಾವು ಬಳಕೆ ಮಾಡುತ್ತೇವೆ ಎಂದು ಗಲಭೆಕೋರರರಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. 

divya hagaragi demanads intorogation against mandya student |ಮಂಡ್ಯದ  ವಿದ್ಯಾರ್ಥಿನಿಯನ್ನು ಉಗ್ರ ಹೊಗಳಿರುವ ವಿಚಾರ; ಸಮಗ್ರ ತನಿಖೆಗೆ ದಿವ್ಯಾ ಹಾಗರಗಿ ಒತ್ತಾಯ  Karnataka News in Kannada

ಹಿಂದೆ ತನಿಖೆ ನಡೆಸಿ ಯಾರನ್ನಾದ್ರೂ ಬಂಧಿಸಿದ್ದುಂಟೇ ? 

ಪಿಎಸ್ಐ ನೇಮಕಾತಿ ಅಕ್ರಮ ಕುರಿತ ಪ್ರಶ್ನೆಗೆ, ಪ್ರಕರಣದಲ್ಲಿ ಆರೋಪಿ ದಿವ್ಯಾ ಹಾಗರಗಿ ಬಂಧನ ಖಂಡಿತ ಆಗುತ್ತೆ.‌ ಈಗಾಗಲೇ ಅವರ ಪತಿಯನ್ನು ಸಿಐಡಿ ಅವರು ಅರೆಸ್ಟ್ ಮಾಡಿದ್ದಾರೆ.‌ ನ್ಯಾಯಾಂಗ ತನಿಖೆ ಆಗಬೇಕು ಎನ್ನುವವರು ಇಷ್ಟು ದಿನ ಎಲ್ಲಿದ್ದರು ? ಈ ಅಕ್ರಮ ಗುರುತಿಸಿದ್ದೇ ನಾವು.. ನಾವೇ ಇದನ್ನ ಸಿಐಡಿ ತನಿಖೆಗೆ ಒಪ್ಪಿಸಿದ್ದೇವೆ.‌ ನಾವು ಮುಕ್ತ ತನಿಖೆ ನಡೆಸುವುದರಿಂದಲೇ ಸಿಐಡಿ ಮುಕ್ತವಾಗಿ ಶಾಲೆಗಳ ಮೇಲೆ ರೇಡ್ ಮಾಡಿದೆ. ಹಿಂದೆಯೂ ನೇಮಕಾತಿಯಲ್ಲಿ ಅಕ್ರಮಗಳು ನಡೆದಿದ್ದವು. ಒಂದಾದ್ರೂ ತನಿಖೆಯಾಗಿದೆಯಾ ? ಯಾರನ್ನಾದ್ರೂ ಅರೆಸ್ಟ್ ಮಾಡಿದ್ದಾರಾ ? ಮೊದಲ ಬಾರಿಗೆ ನಾವೇ ಇದನ್ನು ತನಿಖೆಗೆ ಒಪ್ಪಿಸಿದ್ದು ಈಗಾಗಲೇ ಹಲವರನ್ನು ಅರೆಸ್ಟ್ ಮಾಡಿದ್ದೇವೆ. ಪ್ರಾಮಾಣಿಕರಿಗೆ ಅನ್ಯಾಯ ಆಗಬಾರದೆಂದು ನಾವು ತನಿಖೆ ಮಾಡುತ್ತಿದ್ದೇವೆ. ಯಾರೇ ತಪ್ಪಿತಸ್ಥರು ಇರಲಿ, ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.‌

I won't leave Congress: MY Patil

ನನ್ನ ಗನ್ ಮ್ಯಾನ್ ಅಲ್ಲ, ಆತ ಬಸವರಾಜ್ ಬೊಮ್ಮಾಯಿ ಕೊಟ್ಟ ಗನ್ ಮ್ಯಾನ್ ಎನ್ನುವ ಶಾಸಕ ಎಂ.ವೈ ಪಾಟೀಲ್ ಹೇಳಿಕೆಗೆ ತಿರುಗೇಟು ಕೊಟ್ಟ ಬೊಮ್ಮಾಯಿ, ಎಂ.ವೈ ಪಾಟೀಲ್ ಯಾರನ್ನ ಕೇಳಿದ್ದಾರೋ, ಅವರನ್ನ ಕೊಟ್ಟಿದ್ದೇವೆ. ತನ್ನ ಜೊತೆಗಿರುವ ಗನ್ ಮ್ಯಾನ್ ಬಗ್ಗೆ ಅವರಿಗೆ ಗೊತ್ತಿರಬೇಕು. ಏನ್ ನಡೀತಿದೆ ಎಲ್ಲಾ ಗೊತ್ತಿದ್ದೂ ಸುಮ್ಮನಿದ್ದು ಈಗ ನನಗೇನೂ ಗೊತ್ತಿಲ್ಲ ಅಂದ್ರೆ ಹೇಗೆ ? ಯಾರಾದ್ರೂ ನಂಬುವ ವಿಚಾರವೇ ಇದು ಎಂದು ಪ್ರಶ್ನೆ ಮಾಡಿದರು.‌

AAP Will Form Govt in Karnataka Like it Did in Delhi, Punjab: Arvind  Kejriwal

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರ್ನಾಟಕದ 40 ಪರ್ಸೆಂಟೇಜ್ ಸರ್ಕಾರ ತೆಗೆದು ಝೀರೋ ಪರ್ಸೆಂಟೆಜ್ ಸರ್ಕಾರ ತರುತ್ತೇವೆ ಎನ್ನುವ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಕೇಜ್ರಿವಾಲ್ ಅವರ ಸುತ್ತಲೂ ಕುಳಿತವರು ಎಂಥವರಿದ್ದಾರೆ ? ಅವರ ಬ್ಯಾಗ್ರೌಂಡ್ ಏನಿದೆ ? ಪರ್ಸೆಂಟೇಜ್ ಬ್ಯಾಗ್ರೌಂಡ್ ಇದ್ದವರೇ ಅವರ ಹಿಂದೆ ಕೂತಿದ್ದಾರೆ. ಅಂಥವರಿಂದ ಏನಾದರೂ ಬದಲಾವಣೆಯಾಗಲು ಸಾಧ್ಯವಾ ? ಇದು ಗೊತ್ತಿಲ್ಲ ಅವರಿಗೆ ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

CM Basavaraja Bommai has responded to the demand for a bulldozer campaign similar to that of a UP CM Yogi against rioters.