ಬ್ರೇಕಿಂಗ್ ನ್ಯೂಸ್
22-04-22 06:55 pm HK Desk news ಕರ್ನಾಟಕ
ಕಲಬುರಗಿ, ಎ.22: ಪಿಎಸ್ಐ ನೇಮಕಾತಿಯಲ್ಲಿ ಆಗಿರುವ ಅಕ್ರಮದ ಬಗ್ಗೆ ಸಿಐಡಿ ಪೊಲೀಸರು ತನಿಖೆ ಮುಂದುವರಿಸಿದ್ದು, ಪ್ರಕರಣ ಸಂಬಂಧಿಸಿ ಇಂದು ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ ಅವರನ್ನು ಬಂಧಿಸಲಾಗಿದೆ. ಬಿಜೆಪಿ ನಾಯಕರು ಶಾಮೀಲಾಗಿದ್ದಾರೆಂದು ಆರೋಪಕ್ಕೆ ಗುರಿಯಾಗಿದ್ದ ಪ್ರಕರಣದಲ್ಲೀಗ ಕಾಂಗ್ರೆಸ್ ನಾಯಕರು ಬಂಧನವಾಗುತ್ತಲೇ ಇಡೀ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ.
ಪ್ರಕರಣ ಸಂಬಂಧಿಸಿ ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ ಅವರ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಎಂಬವರನ್ನು ಗುರುವಾರ ಬಂಧಿಸಲಾಗಿತ್ತು. ಹಯ್ಯಾಳಿ ದೇಸಾಯಿಗೆ ಅಕ್ರಮದಲ್ಲಿ ಸಹಕರಿಸಿದ ಆರೋಪದಲ್ಲಿ ಇದೀಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಬಂಧಿಸಲಾಗಿದೆ. ಆದರೆ ಪ್ರಕರಣದಲ್ಲಿ ಮಹಾಂತೇಶ ಅವರ ತಮ್ಮ ಆರ್.ಡಿ.ಪಾಟೀಲ ನೇರವಾಗಿ ಭಾಗಿಯಾಗಿದ್ದು ದೊಡ್ಡ ಪ್ರಮಾಣದಲ್ಲಿ ಶಾಮೀಲಾತಿ ಹೊಂದಿರುವ ಶಂಕೆ ಸಿಐಡಿ ಅಧಿಕಾರಿಗಳಲ್ಲಿದೆ. ಪ್ರಕರಣದಲ್ಲಿ ಹಯ್ಯಾಳಿ ಬಂಧನ ಆಗುತ್ತಲೇ ಆರ್.ಡಿ.ಪಾಟೀಲ ತಲೆಮರೆಸಿಕೊಂಡಿದ್ದು ಮಹಾಂತೇಶ ಪಾಟೀಲ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕೊರಳಪಟ್ಟಿ ಹಿಡಿದು ಎಳೆದೊಯ್ದ ಡಿವೈಎಸ್ಪಿ
ಅಫಜಲಪುರ ಪೊಲೀಸರು ಮಹಾಂತೇಶ ಪಾಟೀಲ್ ಅವರನ್ನು ಬಂಧಿಸಲು ತೆರಳಿದ್ದಾಗ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದರು. ಆನಂತರ, ಸಿಐಡಿ ಡಿವೈಎಸ್ಪಿ ಶಂಕರಗೌಡ ಸ್ವತಃ ಸ್ಥಳಕ್ಕೆ ಬಂದಿದ್ದು, ಮಹಾಂತೇಶ ಪಾಟೀಲ ಅವರನ್ನು ವಿಚಾರಣೆಗೆ ಬರುವಂತೆ ಹೇಳಿದ್ದಾರೆ. ಈ ವೇಳೆ, ಆರೋಪಿಯಾಗಿ ಗುರುತಿಸಲ್ಪಟ್ಟ ಆರ್ ಡಿ ಪಾಟೀಲ, ನೇರವಾಗಿ ಸಿಐಡಿ ವಿಭಾಗದ ಡಿವೈಎಸ್ಪಿ ಜೊತೆಗೆ ಮಾತನಾಡಿದ್ದು ಆವಾಜ್ ಹಾಕಿದ್ದಾನೆ. ನಮ್ಮ ಅಣ್ಣನನ್ನು ಬಂಧಿಸಿದ್ರೆ ಹುಷಾರ್. ನಮ್ಮ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ, ಜಾಗ್ರತೆ ಅಂತಾ ಏಕವಚನದಲ್ಲಿ ಮಾತನಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಡಿವೈಎಸ್ಪಿ ಶರಣಗೌಡ, ಮಹಾಂತೇಶ ಪಾಟೀಲ ಅವರನ್ನು ಕೊರಳ ಪಟ್ಟಿ ಹಿಡಿದುಕೊಂಡೇ ಎಳೆದೊಯ್ದಿದ್ದಾರೆ.
ಅಫಜಲಪುರದಲ್ಲಿ ಸಾಮೂಹಿಕ ವಿವಾಹಕ್ಕೆ ಅಡಚಣೆ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ ಮತ್ತು ತಮ್ಮ ಆರ್.ಡಿ.ಪಾಟೀಲ ಸೇರಿ ಅಫಜಲಪುರದಲ್ಲಿ ಶನಿವಾರ (ಎ.23) ಸಾಮೂಹಿಕ ವಿವಾಹ ಏರ್ಪಡಿಸಿದ್ದಾರೆ. ಇದರ ನಡುವೆಯೇ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದು ಎರಡು ದಿನಗಳಿಂದ ಆರ್.ಡಿ ಪಾಟೀಲ ಪತ್ತೆಗೆ ಹುಡುಕಾಟ ನಡೆಸಿದ್ದರು. ಇದಕ್ಕಾಗಿ ಪಾಟೀಲನ ಮನೆಗೆ ತೆರಳಿದ್ದಾಗ ಅಲ್ಲಿಂದ ನಾಪತ್ತೆಯಾಗಿದ್ದ. ಆನಂತರ ಸಾಮೂಹಿಕ ವಿವಾಹ ಕಾರ್ಯ ನಡೆಯುವಲ್ಲಿಗೆ ಪೊಲೀಸರು ತೆರಳಿದ್ದು ಅಲ್ಲಿದ್ದ ಮಹಾಂತೇಶ ಪಾಟೀಲ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ, ಇತರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಮಹಾಂತೇಶ ಪಾಟೀಲ ಅವರ ಮೊಬೈಲಿನಲ್ಲಿಯೇ ಆರ್.ಡಿ.ಪಾಟೀಲ, ಸಿಐಡಿ ಅಧಿಕಾರಿಗಳ ಜೊತೆ ಮಾತನಾಡಿದ್ದು, ಶನಿವಾರದ ವಿವಾಹ ಕಾರ್ಯ ನಡೆಯುವಲ್ಲಿ ವರೆಗೆ ಅವಕಾಶ ಕೊಡಿ, ಆಬಳಿಕ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಸಮಯ ಕೇಳಿದ್ದಾರೆ. ಅದನ್ನು ನಿರಾಕರಿಸಿದ ಸಿಐಡಿ ಅಧಿಕಾರಿಗಳು ಮಹಾಂತೇಶ ಪಾಟೀಲ್ ಅವರನ್ನು ಕೊರಳ ಪಟ್ಟಿ ಹಿಡಿದು ಅವರ ಕಾರಿನಲ್ಲಿಯೇ ವಿಚಾರಣೆಗೆ ಕರೆತಂದಿದ್ದಾರೆ.
ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಸ್ಥಳೀಯ ಎಬಿವಿಪಿ ಮುಖಂಡರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಆರೋಪ ಇರುವುದರಿಂದ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ನಾಯಕರು ಉನ್ನತ ಮಟ್ಟದ ತನಿಖೆಗೆ ಆಗ್ರಹ ಮಾಡಿದ್ದರು. ಆದರೆ ಇದೀಗ ಕಾಂಗ್ರೆಸ್ ನಾಯಕರೇ ಪ್ರಕರಣದಲ್ಲಿ ಶಾಮೀಲಾಗಿರುವುದು ಕಂಡುಬರುತ್ತಿದ್ದಂತೆ ಮುಖಭಂಗಕ್ಕೆ ಒಳಗಾಗಿದ್ದಾರೆ. ಆರೋಪಿ ದಿವ್ಯಾ ಹಾಗರಗಿ ಪತಿ ರಾಜೇಶ್ ಎಂಬವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ, ದಿವ್ಯಾ ಮತ್ತು ಆಕೆಯ ಒಡೆತನದ ಜ್ಞಾನಜ್ಯೋತಿ ಶಾಲೆಯ ಕೆಲವರು ತಲೆಮರೆಸಿಕೊಂಡು ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ. ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪಿಎಸ್ಐ ಪರೀಕ್ಷೆ ಬರೆದವರೇ ಪ್ರಮುಖವಾಗಿ ಅಕ್ರಮದಲ್ಲಿ ಶಾಮೀಲಾಗಿರುವುದು ಸಿಐಡಿ ತನಿಖೆಯಲ್ಲಿ ಕಂಡುಬಂದಿದೆ.
ಪರೀಕ್ಷಾ ಅಕ್ರಮದಲ್ಲಿ ಬ್ಲೂಟೂತ್ ಬಳಕೆ !
ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಬ್ಲೂಟೂತ್ ಬಳಸಿಯೂ ನಕಲು ಮಾಡಿದ್ದಾರೆಂಬ ಅನುಮಾನ ಸಿಐಡಿ ಅಧಿಕಾರಿಗಳಿಗೆ ಬಂದಿದೆ. ವಿಶಾಲ್ ಶಿರೂರ ಎಂಬ ಅಭ್ಯರ್ಥಿಯನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆತ ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದು, ನಕಲು ಮಾಡಲು ಬ್ಲೂಟೂತ್ ಬಳಕೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಇದರಿಂದಾಗಿ ಪರೀಕ್ಷೆ ನಕಲಿಗೆ ಇಲೆಕ್ಟ್ರಾನಿಕ್ ಉಪಕರಣವೂ ಬಳಕೆಯಾಗಿರುವ ಮಾಹಿತಿ ಲಭಿಸಿದ್ದು ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ. ಈವರೆಗೂ ಒಎಂಆರ್ ಶೀಟ್ ನಲ್ಲಿ ನಕಲು ಆಗಿರುವ ಬಗ್ಗೆ ಮಾಹಿತಿಗಳಿದ್ದುದರಿಂದ ಅದೇ ವಿಚಾರದಲ್ಲಿ ಜಾಲಾಡುತ್ತಿದ್ದರು. ಇದೀಗ ಬ್ಲೂಟೂಕ್ ಬಳಕೆಯ ಮಾಹಿತಿ ಲಭಿಸಿದ್ದು ತನಿಖೆಯ ಜಾಡು ಹೊಸ ದಿಕ್ಕಿನತ್ತ ಹೊರಳಿದೆ.
A CID leader has been arrested by the CID in connection with a case of illegal submission of a police sub-inspector (PSI).Afzalpur block Congress president Mahantesh Patil arrested. This illegal case has come to the Congress. He was arrested at the National Function Hall in the town of Afzalpur.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
06-02-25 09:32 pm
HK News Desk
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm