ಬ್ರೇಕಿಂಗ್ ನ್ಯೂಸ್
25-04-22 04:47 pm Bengaluru Correspondent ಕರ್ನಾಟಕ
ಬೆಂಗಳೂರು, ಎ.25: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದ ಆರೋಪದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಸೌಮ್ಯಾ ಎಂಬಾಕೆಯನ್ನು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದು ಬೆಂಗಳೂರಿಗೆ ಕರೆತರಲಾಗಿದೆ. ಪಿಎಸ್ಐ ನೇಮಕಾತಿ ಅಕ್ರಮದ ತನಿಖೆಯ ಸಂದರ್ಭದಲ್ಲೇ ಮತ್ತೊಂದು ಪ್ರಕರಣ ಮುನ್ನೆಲೆಗೆ ಬಂದಿರುವುದು ರಾಜ್ಯ ಸರಕಾರಕ್ಕೆ ಮತ್ತೆ ಮುಜುಗರ ಸೃಷ್ಟಿಸಿದೆ.
ಮಾರ್ಚ್ 14ರಂದು ಭೂಗೋಳಶಾಸ್ತ್ರದ ಪರೀಕ್ಷೆ ನಿಗದಿಯಾಗಿದ್ದ ದಿನವೇ ಬೆಳಗ್ಗೆ 8.30ಕ್ಕೆ ಸೌಮ್ಯಾ ಮೊಬೈಲ್ ವಾಟ್ಸಪ್ ನಿಂದ 18 ಪ್ರಶ್ನೆಗಳು ಹಲವರಿಗೆ ರವಾನೆಯಾಗಿದ್ದವು. ವಾಟ್ಸಪ್ ನಲ್ಲಿ ಪ್ರಶ್ನೆ ಮತ್ತು ಉತ್ತರಗಳು ಹರಿದಾಡಿದ್ದ ವಿಚಾರದ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕರು ಎ.22ರಂದು ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸೌಮ್ಯಾಳನ್ನು ಬಂಧಿಸಿದ್ದಾರೆ. ಬೆಂಗಳೂರು ಉತ್ತರ ವಿಭಾಗದ ಎಸಿಪಿ ನೇತೃತ್ವದ ಪೊಲೀಸರ ತಂಡ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.
ಪಿಎಚ್ ಡಿ ವಿದ್ಯಾರ್ಥಿನಿ ಸೌಮ್ಯಾ
ಮೈಸೂರು ಮೂಲದ ಸೌಮ್ಯಾ ಪಿಹೆಚ್ ಡಿ ವಿದ್ಯಾರ್ಥಿನಿ. ಆದರೆ, ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ನಡೆಯುವ ದಿನವೇ ಆಕೆಯ ಮೊಬೈಲಿನಿಂದ ಪ್ರಶ್ನೆ ಪತ್ರಿಕೆ ರವಾನೆಯಾಗಿದ್ದರಿಂದ ಇವು ಆಕೆಗೆ ಹೇಗೆ ಸಿಕ್ಕಿದ್ದವು ಎನ್ನುವ ಬಗ್ಗೆ ಪ್ರಶ್ನೆಗಳು ಎದ್ದಿವೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಹಾಲ್ ನಲ್ಲಿಯೇ ಓಪನ್ ಮಾಡಲಾಗುವುದು. ಅದಕ್ಕೂ ಮೊದಲು ಓಪನ್ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಆದರೆ ಬೆಳಗ್ಗೆ 9 ಗಂಟೆಗೆ ಪರೀಕ್ಷೆ ಇರಬೇಕಿದ್ದರೆ, ಅರ್ಧ ಗಂಟೆಗೆ ಮೊದಲೇ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದಕ್ಕೆ ಪರೀಕ್ಷಾ ಮಂಡಳಿಯ ಅಧಿಕಾರಿಗಳು ಅಥವಾ ಪರೀಕ್ಷಾ ಹಾಲ್ ನಲ್ಲಿ ಇದ್ದವರ ಕೈವಾಡ ಇದ್ದಿರಲೇಬೇಕು.
ಅಂದು 300 ಜನ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು ಎನ್ನಲಾಗಿದ್ದು ಎಲ್ಲರನ್ನೂ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಮೊದಲಿಗೆ ಅಭ್ಯರ್ಥಿಗಳನ್ನು ವಿಚಾರಣೆ ನಡೆಸಲಿರುವ ಪೊಲೀಸರು ಮುಂದಿನ ಹಂತದಲ್ಲಿ ಲೀಕ್ ಆಗಿದ್ದು ಎಲ್ಲಿಂದ ಅನ್ನುವುದನ್ನು ಪತ್ತೆ ಹಚ್ಚಲು ಮುಂದಾಗಲಿದ್ದಾರೆ. ಇಷ್ಟಕ್ಕೂ ಪರೀಕ್ಷಾ ಪ್ರಾಧಿಕಾರದಿಂದ ಪೊಲೀಸ್ ದೂರು ದಾಖಲಾಗಲು ಕಾರಣ, ಕೆಲವು ಅಭ್ಯರ್ಥಿಗಳು ಈ ಬಗ್ಗೆ ದೂರು ಸಲ್ಲಿಸಿದ್ದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅಭ್ಯರ್ಥಿಗಳೇ ದೂರು ನೀಡಿದ್ದು. ದೂರಿನಲ್ಲಿ ಉಲ್ಲೇಖಿತ ಅಂಶಗಳನ್ನು ಮುಂದಿಟ್ಟು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಹು ಆಯ್ಕೆ ಮಾದರಿಯ 18 ಪ್ರಶ್ನೆಗಳು ಉತ್ತರ ಸಹಿತವಾಗಿ ಸೌಮ್ಯಾ ಮೊಬೈಲಿನಿಂದ ವಾಟ್ಸಪ್ ಗ್ರೂಪಿಗೆ ರವಾನೆಯಾಗಿತ್ತು. ಇದನ್ನೇ ಅನುಸರಿಸಿ, ಕೆಲವರು ನನಗೆ ಮೊದಲ ರ್ಯಾಂಕ್, ಇತರ ಸ್ನೇಹಿತರು ತಮಗೆ 2, 3 ಮತ್ತು 4ನೇ ರ್ಯಾಂಕ್ ಎಂದು ವಾಟ್ಸಪ್ ಗ್ರೂಪಿನಲ್ಲಿ ಸಂಭಾಷಣೆ ನಡೆಸಿದ್ದರು. ನಾಲ್ಕು ಪುಟಗಳಿದ್ದ ಪ್ರಶ್ನೆ ಮತ್ತು ಉತ್ತರಗಳು ಪರೀಕ್ಷೆ ನಡೆಯುವ ಅರ್ಧ ಗಂಟೆ ಮೊದಲು ಸ್ನೇಹಿತರ ಒಳಗಿನ ವಾಟ್ಸಪ್ ಗ್ರೂಪಿಗೆ ರವಾನೆಯಾಗಿದ್ದು ಚರ್ಚೆಗೆ ಕಾರಣವಾಗಿತ್ತು. ಪ್ರಶ್ನೆ ಪತ್ರಿಕೆ ಮೊದಲು ಲೀಕ್ ಆಗಿದ್ದು ಸೌಮ್ಯಾ ಮೊಬೈಲಿನಿಂದಾಗಿದ್ದರಿಂದ ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದಕ್ಕಾಗಿ ಸೌಮ್ಯಾ ಮಾಡಿದ್ದ ಕರೆಗಳು, ವಾಟ್ಸಪ್ ಸಂಪರ್ಕದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅತ್ತ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸದ್ದು ಮಾಡಿರುವಾಗಲೇ ಇತ್ತ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯ ನೇಮಕಾತಿಯಲ್ಲೂ ಅದೇ ರೀತಿ ಅಕ್ರಮ ನಡೆದಿದೆಯಾ ಎನ್ನುವ ಬಗ್ಗೆ ಶಂಕೆ ಮೂಡಿದೆ. ಒಂದು ಹುದ್ದೆಗೆ 40ರಿಂದ 50 ಲಕ್ಷ ಡೀಲ್ ಆಗಿದೆ ಎನ್ನುವ ಮಾತುಗಳೂ ಕೇಳಿಬರುತ್ತಿದ್ದು ಸರಕಾರದ ಆಯಕಟ್ಟಿನ ಅಧಿಕಾರಿಗಳ ಬಗ್ಗೆಯೇ ಶಂಕೆ ಮೂಡುತ್ತಿದೆ. ರಾಜ್ಯ ಸರಕಾರ ಪ್ರಕರಣವನ್ನು ಯಾವ ರೀತಿ ತನಿಖೆ ನಡೆಸಲಿದೆ, ಅದರ ಮೇಲೆ ತನಿಖೆಯ ಜಾಡು ಸಾಗಲಿದೆ.
Assistant Professor’s Examination Paper Leakage Case; Soumya Arrest accused in Mysore Associate Professor Exam leak issue in Bengaluru Police arrested sowmya.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
06-02-25 09:32 pm
HK News Desk
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm