ಬ್ರೇಕಿಂಗ್ ನ್ಯೂಸ್
26-04-22 10:27 pm Giridhar S ಕರ್ನಾಟಕ
ಬೆಂಗಳೂರು, ಎ.26: 150 ಪ್ಲಸ್ ಟಾರ್ಗೆಟ್ ಬೆನ್ನತ್ತಿರುವ ಬಿಜೆಪಿ ಪಾಳಯ ಪಕ್ಷಕ್ಕೆ ನೆಲೆಯೇ ಇಲ್ಲದ ಒಕ್ಕಲಿಗರ ಪ್ರಾಬಲ್ಯದ ಹಳೆ ಮೈಸೂರಿನಲ್ಲಿ ಶಾಸಕರನ್ನು ಗೆಲ್ಲಿಸಲು ಪ್ಲಾನ್ ಹಾಕಿದೆ. ಇದಕ್ಕಾಗಿ ಚುನಾವಣೆಗೆ ಮೊದಲೇ ಆಪರೇಶನ್ ಕಮಲ ನಡೆಸಲು ರಹಸ್ಯ ಯೋಜನೆ ಹಾಕಿದ್ದು ಬಿಜೆಪಿಗೆ ನೆಲೆ ಇಲ್ಲದ ಭಾಗದಲ್ಲಿ ಅನ್ಯಪಕ್ಷಗಳ ನಾಯಕರನ್ನು ಸೆಳೆಯಲು ಕಸರತ್ತು ನಡೆಸಿದೆ. ಇದರ ಸುಳಿವನ್ನು ಈಗಾಗಲೇ ಬಿಜೆಪಿ ನಾಯಕರು ಬಿಟ್ಟುಕೊಟ್ಟಿದ್ದು, ಜೆಡಿಎಸ್ ಮತ್ತು ಕಾಂಗ್ರೆಸಿನ ಹತ್ತು ಶಾಸಕರು ಬಿಜೆಪಿ ಸೇರಲಿದ್ದಾರೆ ಎನ್ನುವ ಮೂಲಕ ಕುತೂಹಲ ಎಬ್ಬಿಸಿದ್ದಾರೆ.
ಮಂಡ್ಯ, ತುಮಕೂರು, ರಾಮನಗರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಭಾಗದಲ್ಲಿ ಬಿಜೆಪಿಗೆ ರಾಜ್ಯದ ಇತರ ಕಡೆಗಳಲ್ಲಿರುವಂತೆ ಸಂಘಟನೆಯ ಬಲ ಇಲ್ಲ. ಇಡೀ ರಾಜ್ಯಕ್ಕೆ ಹೋಲಿಸಿದರೆ, ಬಿಜೆಪಿಗೆ ಭದ್ರ ನೆಲೆ ಇಲ್ಲದೇ ಇರುವುದು ಈ ಭಾಗದಲ್ಲಿ ಮಾತ್ರ. ಇದಕ್ಕಾಗಿ ಅಲ್ಲಿ ಪಕ್ಷವನ್ನು ಬಲಪಡಿಸಲು ಏನೆಲ್ಲಾ ತಂತ್ರಗಳನ್ನು ಮಾಡಬೇಕೋ ಅದನ್ನು ಜಾರಿಗೆ ತರಲು ಕೇಂದ್ರ ನಾಯಕರು ರಾಜ್ಯದ ಕೇಸರಿ ಪಾಳಯಕ್ಕೆ ಟಾಸ್ಕ್ ನೀಡಿದ್ದಾರೆ. ಮೊದಲಿಗೆ, ಅಲ್ಲಿ ಈಗಾಗಲೇ ಗುರುತಿಸಲ್ಪಟ್ಟ ನಾಯಕರನ್ನು ಪಕ್ಷಕ್ಕೆ ಸೆಳೆದಲ್ಲಿ ಅವರ ಜೊತೆಗೆ ಬೆಂಬಲಿಗರು ಕೂಡ ಸಿಗುತ್ತಾರೆ, ಪಕ್ಷಕ್ಕೆ ಒಂದಷ್ಟು ಅಡಿಪಾಯ ಸಿಗುತ್ತದೆ ಎಂಬ ದೂರಾಲೋಚನೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರನ್ನು ಸೆಳೆಯಲು ಬಿಜೆಪಿ ಪ್ಲಾನ್ ಹಾಕಿದೆ. ಯೋಜನೆ ಜಾರಿಗೊಳಿಸಲು ಬಿಜೆಪಿಯ ಪ್ರಭಾವಿ ಸಚಿವರಿಗೆ ಹೊಣೆ ನೀಡಲಾಗಿದ್ದು, ಒಕ್ಕಲಿಗ ಪ್ರಾಬಲ್ಯ ಹೊಂದಿರುವ ಅಶ್ವತ್ಥ ನಾರಾಯಣ, ಅಶೋಕ್ ಸೇರಿದಂತೆ ಒಕ್ಕಲಿಗ ನಾಯಕರು ಈ ಕೆಲಸಕ್ಕೆ ಮುಂದಾಗಿದ್ದಾರೆ.
ಕೇಸರಿ ಪಾಳಯಕ್ಕೆ ಸುಮಲತಾ ಪಕ್ಕಾ ?
ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಗೆ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬಹಿರಂಗ ಬೆಂಬಲ ಘೋಷಿಸಿತ್ತು. ಪಕ್ಷೇತರ ಸ್ಪರ್ಧಿಸಿದ್ದ ಸುಮಲತಾ ಜೆಡಿಎಸ್ ಪ್ರಾಬಲ್ಯದ ಮಂಡ್ಯದ ಕೋಟೆಗೆ ಲಗ್ಗೆ ಹಾಕಿದ್ದು, ಕಾಂಗ್ರೆಸ್ ಮತ್ತು ಗೌಡರ ಜಂಘಾಬಲವನ್ನೇ ನಡುಗಿಸಿತ್ತು. ಕುಮಾರಸ್ವಾಮಿ ಮತ್ತು ದೇವೇಗೌಡರ ಪರವಾಗಿ ಮಂಡ್ಯದಲ್ಲಿ ಒಲವಿದ್ದರೂ, ಅಂಬರೀಶ್ ಬಗ್ಗೆ ಅಭಿಮಾನದ ಪರಾಕಾಷ್ಠೆ ಇದೆ. ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಮತ್ತು ಶಿವರಾಮೇಗೌಡ ಅವರು ಸುಮಲತಾ ಬಗ್ಗೆ ನೀಡಿದ್ದ ಹೇಳಿಕೆಗಳೇ ತೆನೆ ಪಕ್ಷಕ್ಕೆ ಮುಳುವಾಗಿದ್ದವು. ಏಳು ಜೆಡಿಎಸ್ ಶಾಸಕರ ಹೊರತಾಗಿಯೂ ಸುಮಲತಾ ಭದ್ರಕೋಟೆಗೆ ಲಗ್ಗೆ ಹಾಕಿದ್ದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಸಂಸದೆಯಾದ ಸುಮಲತಾ ಬಗ್ಗೆ ಪ್ರಧಾನಿ ಮೋದಿಯವರೂ ಬಹಿರಂಗವಾಗಿಯೇ ಮೆಚ್ಚುಗೆ ತೋರಿದ್ದರು. ಇದೀಗ ಸುಮಲತಾ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೆಳೆದು ಆ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಗಿಟ್ಟಿಸಲು ಪ್ಲಾನ್ ಹಾಕಿದ್ದು ಇದಕ್ಕಾಗಿ ವನ್ ಟು ವನ್ ಮಾತುಕತೆಗಳೂ ನಡೆದಿವೆ. ಆದರೆ ಈ ಬಗ್ಗೆ ಯಾವುದೇ ನಾಯಕರು ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ. ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸುಮಲತಾ ಬಿಜೆಪಿ ಸೇರುವುದರಲ್ಲಿ ಅನುಮಾನ ಇಲ್ಲ.
ಮಂಡ್ಯದಲ್ಲಿ ಪಕ್ಷಕ್ಕೆ ನೆಲೆಯೇ ಇಲ್ಲದಿದ್ದರೂ, ಕಳೆದ ಬಾರಿ ಕೆ.ಆರ್.ಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾರಾಯಣ ಗೌಡ ಗೆಲುವಿನ ನಗೆ ಬೀರಿದ್ದು ಕಮಲ ಪಕ್ಷದಲ್ಲಿ ಮಂದಹಾಸ ಮೂಡಿಸಿತ್ತು. ಹೀಗಾಗಿ, ಅಲ್ಲಿಯೂ ಬೀಜ ಬಿತ್ತಿದರೆ ಬೆಳೆ ತೆಗೆಯಬಹುದು ಎನ್ನೋದನ್ನು ಕನ್ಫರ್ಮ್ ಮಾಡಿಕೊಂಡಿರುವ ಬಿಜೆಪಿ ನಾಯಕರು, ಮಂಡ್ಯದಿಂದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಠಕ್ಕರ್ ಕೊಡಲು ಮುಂದಾಗಿದ್ದಾರೆ. ಅದಕ್ಕಾಗಿ ಅಲ್ಲಿರುವ ಎರಡೂ ಪಕ್ಷಗಳ ಶಾಸಕರನ್ನು ಸೆಳೆಯಲು ಗೇಮ್ ಪ್ಲಾನ್ ಹಾಕಿದ್ದಾರೆ. ಇದೇ ವೇಳೆ, ತುಮಕೂರಿನಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡರಿಗೂ ಕೇಸರಿ ಗಾಳ ಹಾಕಿದೆ. ಕಳೆದ ಬಾರಿ ಟಿಕೆಟ್ ತಪ್ಪಿದರೂ, ತುಮಕೂರಿನಲ್ಲಿ ಪ್ರಭಾವ ಹೊಂದಿರುವ ಗೌಡರನ್ನು ಸೆಳೆದುಕೊಂಡಲ್ಲಿ ಅವರೊಂದಿಗೆ ಒಂದಷ್ಟು ಒಕ್ಕಲಿಗ ನಾಯಕರು ಕೂಡ ಜೊತೆ ಸೇರಲಿದ್ದಾರೆ ಎಂಬ ದೂರಗಾಮಿ ಆಲೋಚನೆ ಕೇಸರಿ ನಾಯಕರದ್ದು. ಇದೆಲ್ಲ ಸಾಕಾರಗೊಂಡರೆ ತುಮಕೂರು ಜಿಲ್ಲೆಯ ಸೊಗಡು ಚುನಾವಣೆ ಹೊತ್ತಿಗೆ ಬೇರೆಯದೇ ಆಗಬಹುದು.
ಕೇಸರಿ ಕೋಟೆ ಹತ್ತಲಿದ್ದಾರೆಯೇ ಅಪ್ಪ- ಮಗ ?
ಮೈಸೂರಿನಲ್ಲಿ ಅತ್ತ ಜೆಡಿಎಸ್ಸೂ ಅಲ್ಲದ, ಇತ್ತ ಕಾಂಗ್ರೆಸ್ಸೂ ಅಲ್ಲದಂತಿದ್ದರೂ ಪ್ರಭಾವ ಮತ್ತು ವರ್ಚಸ್ಸಿನಲ್ಲಿ ಮುಂಚೂಣಿಯಲ್ಲಿರುವ ಜಿಟಿ ದೇವೇಗೌಡರಿಗೂ ಬಿಜೆಪಿ ಗಾಳ ಹಾಕಿದೆ. ಜೆಡಿಎಸ್ ನಲ್ಲಿ ತಮ್ಮನ್ನು ಮೂಲೆಗುಂಪು ಮಾಡಿರುವ ನೋವನ್ನು ಹೊಂದಿರುವ ಜಿಟಿಡಿ, ಆನಂತರ ಕಾಂಗ್ರೆಸ್ ಸೇರುವ ಇಂಗಿತವನ್ನೂ ಹೊಂದಿದ್ದರು. ಈ ನಡುವೆ ಸಿದ್ದರಾಮಯ್ಯ ಜೊತೆಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಜಿಟಿ ದೇವೇಗೌಡರನ್ನು ಸಿದ್ದು ಹೊಗಳಿದ್ದು ಕೈ ಪಕ್ಷ ಸೇರುವ ತಯಾರಿ ಎಂದೇ ಹೇಳಲಾಗಿತ್ತು. ಆದರೆ, ಜಿಟಿಡಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಂತೂ ಆಗಿಲ್ಲ. ಇದೇ ವೇಳೆ, ಜಿಟಿ ದೇವೇಗೌಡ ತನ್ನ ಜೊತೆಗೆ ಮಗನ ಭವಿಷ್ಯದ ಬಗ್ಗೆಯೂ ತಲೆಕೆಡಿಸಿಕೊಂಡಿದ್ದು ಸಹಕಾರಿ ರಂಗದಲ್ಲಿರುವ ಹರೀಶ್ ಗೌಡರನ್ನು ಮುಂದಿನ ಬಾರಿ ಶಾಸಕನಾಗಿಸಲು ಪಣ ತೊಟ್ಟಿದ್ದಾರೆ. ಮಗನ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಸೇರುತ್ತಾರೆಯೇ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಕಳೆದ ಬಾರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜಿಡಿ ದೇವೇಗೌಡರ ಪ್ರಭಾವವೂ ವರ್ಕೌಟ್ ಆಗಿತ್ತು. ಹೀಗಾಗಿ ಕೇಸರಿ ನಾಯಕರು ಜಿಟಿಡಿಯನ್ನು ಸೆಳೆಯುವುದಕ್ಕೂ ಎಡತಾಕಿದ್ದಾರೆ.
ಎನ್.ಮಹೇಶ್ ಅಂಡ್ ಪಟಾಲಂ ಬಿಜೆಪಿಯತ್ತ
ಮೈಸೂರಿನಲ್ಲಿ ಒಕ್ಕಲಿಗರನ್ನು ಬಿಟ್ಟರೆ ಅತಿ ಹೆಚ್ಚು ಕುರುಬರ ಮತಗಳೇ ಇದ್ದರೂ, ಪ್ರಭಾವ ಹೊಂದಿರುವುದು ಮುಂದುವರಿದ ಜಾತಿಗಳದ್ದು ಮಾತ್ರ. ಹಾಗಾಗಿ ಒಕ್ಕಲಿಗ ನಾಯಕರನ್ನು ಸೆಳೆದುಕೊಂಡರಷ್ಟೇ ಅಲ್ಲಿ ತಳಪಾಯ ಗಟ್ಟಿಗೊಳಿಸಬಹುದು ಅನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಚಾಮರಾಜನಗರ ಜಿಲ್ಲೆಯಲ್ಲಿ ಈಗಾಗಲೇ ಸಂಸದ ಶ್ರೀನಿವಾಸ ಪ್ರಸಾದ್ ಬಿಜೆಪಿಯಲ್ಲಿದ್ದಾರೆ. ಅಲ್ಲಿನ ಹಿಂದುಳಿದ ವರ್ಗದ ಮತಗಳನ್ನು ಸೆಳೆಯಲು ದಲಿತ ಸಮುದಾಯದ ಶಾಸಕ ಎನ್.ಮಹೇಶ್ ಅವರನ್ನು ಸೆಳೆಯಲು ಕಸರತ್ತು ನಡೆದಿದೆ. ಯಡಿಯೂರಪ್ಪ ಜೊತೆಗೆ ಹತ್ತಿರದ ನಂಟು ಹೊಂದಿರುವ ಮಹೇಶ್ ಕೇಸರಿ ಪಾಳಯ ಸೇರಿದಲ್ಲಿ ಮೈಸೂರು, ಚಾಮರಾಜನಗರ ಎರಡೂ ಕಡೆಯಲ್ಲಿ ಹಿಂದುಳಿದ ವರ್ಗದ ಮತಗಳನ್ನು ಸೆಳೆಯಬಲ್ಲರು. ಆ ಭಾಗದಲ್ಲಿ ಇನ್ನಷ್ಟು ಪ್ರಭಾವಿಗಳನ್ನು ತೆಕ್ಕೆಗೆ ಸೇರಿಸಲು ಆ ಭಾಗದ ನಾಯಕರು ಶ್ರಮಿಸುತ್ತಿದ್ದಾರೆ.
ಬೋಳು ಗುಡ್ಡದಲ್ಲಿ ವಿಟಮಿನ್ ಬಿತ್ತಿ ಬೆಳೆ ತೆಗೆಯೋದ್ಯಾರು ?
ಇತ್ತ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರದಲ್ಲಿ ಬಿಜೆಪಿಯದ್ದೇನಿದ್ದರೂ ಖಾಲಿ ಖಾಲಿ. ಹೀಗಾಗಿ ಹಾಲಿ ಪ್ರಭಾವಿಗಳನ್ನು ಅಥವಾ ಮಾಜಿ ಅಧಿಕಾರಿಗಳು, ವರ್ಚಸ್ಸು ಹೊಂದಿರುವ ವ್ಯಕ್ತಿಗಳನ್ನು ಪಕ್ಷಕ್ಕೆ ಸೆಳೆದು ಅಭ್ಯರ್ಥಿಯಾಗಿಸಲು ಸಚಿವ ಡಾ.ಸುಧಾಕರ್ ಗೆ ಹೊಣೆ ನೀಡಲಾಗಿದೆ. ಇವರೆಡೂ ಜಿಲ್ಲೆಗಳಲ್ಲಿ ಗಣಿಗಾರಿಕೆ ಇನ್ನಿತರ ಅಕ್ರಮ ವಿಚಾರದಲ್ಲಿ ಸುಧಾಕರ್ ಗರಿಷ್ಠ ಪ್ರಭಾವ ಹೊಂದಿದ್ದಾರೆ. ಬೇಕಾಬಿಟ್ಟಿ ಹಣ ಬಿಚ್ಚುವ ಪ್ರಭಾವಿ ಗುತ್ತಿಗೆದಾರರ ಜೊತೆಗೂ ಸುಧಾಕರ್ ಸಖ್ಯ ಹೊಂದಿದ್ದಾರೆ. ಇದೇ ನೆಲೆಯಲ್ಲಿ ಪ್ರಭಾವಿಗಳನ್ನು ನಿಲ್ಲಿಸಿ, ಶಾಸಕರನ್ನಾಗಿಸಲು ಸುಧಾಕರ್ ಯೋಜನೆ ಹಾಕಿದ್ದಾರೆ ಎನ್ನುವ ಮಾಹಿತಿಗಳಿವೆ. ಆ ಭಾಗದಲ್ಲಿ ನಿರ್ದಿಷ್ಟ ಮತಬ್ಯಾಂಕ್ ಇಲ್ಲದಿದ್ದರೂ, ಯಾವುದೇ ಗಟ್ಟಿಗ ವ್ಯಕ್ತಿಗಳು ಮನಸ್ಸು ಮಾಡಿದರೆ ಗೆಲ್ಲುವ ಸಾಧ್ಯತೆ ಇರುತ್ತದೆ. ಹಾಗಾಗಿ, ಅಲ್ಲಿನ ಕ್ಷೇತ್ರಗಳಲ್ಲಿ ಯಾವೆಲ್ಲಾ ವಿಟಮಿನ್ ಸುರಿಯಬೇಕೋ ಅದನ್ನು ಮಾಡಲು ಪ್ಲಾನ್ ಹಾಕಲಾಗಿದೆ.
ಮೇ ಮೊದಲ ವಾರದಲ್ಲೇ ಮತ್ತೆ ಅಮಿತ್ ಷಾ
ಇವೆಲ್ಲ ಯೋಜನೆಗಳನ್ನು ಮೇ ತಿಂಗಳಲ್ಲಿಯೇ ಜಾರಿಗೆ ತರಬೇಕೆಂಬ ಆತುರ ಕೇಂದ್ರ ನಾಯಕರಲ್ಲಿದೆ. ಇದರ ನಡುವೆ, ಮೇ ಮೊದಲ ವಾರದಲ್ಲಿ ಮತ್ತೆ ಕೇಂದ್ರ ಸಚಿವ ಅಮಿತ್ ಷಾ ಬೆಂಗಳೂರು ಬರಲಿದ್ದು, ಕಳೆದ ಎಪ್ರಿಲ್ 1ರಂದು ನೀಡಿದ್ದ 150 ಪ್ಲಸ್ ಟಾಸ್ಕ್ ಬಗ್ಗೆ ಬಿಜೆಪಿ ನಾಯಕರನ್ನು ಪರೀಕ್ಷೆಗೊಡ್ಡಲಿದ್ದಾರೆ. 150 ಪ್ಲಸ್ ಗೆಲ್ಲುವುದಕ್ಕೆ ಏನೆಲ್ಲಾ ತಯಾರಿ ಆಗಿದೆ ಅನ್ನೋದ್ರ ಬಗ್ಗೆ ಪರೀಕ್ಷೆ ನಡೆಸಲಿದ್ದು ನಪಾಸ್ ಆಗುವವರಿಗೆ ಗೇಟ್ ಪಾಸ್ ಕೊಟ್ಟು ಬದಲಿ ನಾಯಕರನ್ನು ಮುಂಚೂಣಿಗೆ ತರುವುದನ್ನೂ ಅಮಿತ್ ಷಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಏಕಕಾಲದಲ್ಲಿ ಸಂಪುಟ ಪುನಾರಚನೆ, ಪಕ್ಷಕ್ಕೂ ಸರ್ಜರಿ ಆಗಲಿದೆ ಎನ್ನುವ ಮಾತುಗಳೂ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ. ಚುನಾವಣೆಗೆ ಒಂದು ವರ್ಷ ಇರುವಾಗಲೇ ಸರ್ಜರಿ, ಆಪರೇಶನ್ ನಡೆಸುವುದರಿಂದ ಮತಗಳ ಕ್ರೋಡೀಕರಣಕ್ಕೂ ಸಮಯಾವಕಾಶ ಸಿಗಲಿದೆ ಎನ್ನುವ ಆಲೋಚನೆಯಲ್ಲಿ ವರಿಷ್ಠರು ಇದ್ದಾರೆ.
ಡಿಕೆಶಿ, ಎಚ್ಡಿಕೆಗೆ ಡಿಚ್ಚಿ ಕೊಡುತ್ತಾ ಕೇಸರಿ ?
ಕೇಸರಿ ಪಾಳಯ ಈ ರೀತಿಯ ಠಕ್ಕರ್ ಪ್ಲಾನ್ ಹಾಕೋದಕ್ಕೂ ಮೊದಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದೇ ರೀತಿಯ ಯೋಜನೆ ಹಾಕಿದ್ದರು. ಚುನಾವಣೆ ಹೊತ್ತಿಗೆ ಹಳೆ ಮೈಸೂರು ಭಾಗದ ಜೆಡಿಎಸ್ ಪ್ರಭಾವಿಗಳನ್ನು ಕಾಂಗ್ರೆಸಿನತ್ತ ಸೆಳೆದುಕೊಂಡು ಹೆಚ್ಚು ಸ್ಥಾನ ಗೆಲ್ಲಿಸುವುದು ಮತ್ತು ಸಿದ್ದರಾಮಯ್ಯ ವಿರುದ್ಧ ಒಕ್ಕಲಿಗರ ಪ್ರಾಬಲ್ಯದ ಕೋಟೆ ನಿರ್ಮಿಸುವುದು ಪ್ಲಾನ್ ಆಗಿತ್ತು. ಇದರ ಬಗ್ಗೆ ಮಾಹಿತಿ ಅರಿತಿದ್ದ ಎಚ್ಡಿ ಕುಮಾರಸ್ವಾಮಿ, ಆಗಿಂದಾಗ್ಗೆ ಡಿಚ್ಚಿ ಕೊಡುವ ರೀತಿ ಮಾತಿನ ಛೂಬಾಣ ಬಿಡುತ್ತಲೇ ಇದ್ದರು. ಇಬ್ಬರ ಜಗಳದ ನಡುವಲ್ಲೇ ದಿಢೀರ್ ಆಗಿ ಚುನಾವಣೆ ತಯಾರಿಗಿಳಿದ ಅಮಿತ್ ಷಾ, ಕಳೆದ ಎಪ್ರಿಲ್ 1ರಂದು ಆಗಮಿಸಿದ ದಿನವೇ ಪಕ್ಷದ ಪ್ರಭಾವ ಕಡಿಮೆ ಇರುವ ಜಿಲ್ಲೆಗಳಲ್ಲಿ ಆಪರೇಶನ್ ನಡೆಸುವುದಕ್ಕೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದರು. ಅತ್ತ ಒಂದೇ ತಿಂಗಳಲ್ಲಿ ಹಳೆ ಮೈಸೂರು ಭಾಗದ ಚಿತ್ರಣ ಬದಲಾಯಿಸಲು ಬಿಜೆಪಿ ನಾಯಕರು ಹೊರಟಿದ್ದರೆ, ಡಿಕೆಶಿ, ಎಚ್ಡಿಕೆ, ಸಿದ್ದು ಕೋಲು ಕೊಟ್ಟು ಪೆಟ್ಟು ತಿನ್ನುವ ಹಂತಕ್ಕೆ ತಲುಪಿದ್ದಾರೆ.
With the 2023 assembly elections barely 14 months away, the Congress and JDS are preparing to slug it out for supremacy in the Vokkaliga heartland of Old Mysuru. KPCC president D K Shivakumar, sensing a “conspiracy” by the JDS and BJP, had sarcastically stated that he has no stamina to compete against JDS supremo HD Deve Gowda and his family members. The recent MLC polls gave a fillip to the Congress, which won most of the seats in the region -- except Hassan where Gowda’s grandson Dr Suraj Revanna’s victory was a face-saver for the JDS.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm