ಗಂಡ, ನಾದಿನಿಯರ ಕಿರುಕುಳ ;  ಕಾವೇರಿ ನದಿಗೆ ಹಾರಿ ಫಿಸಿಯೋಥೆರಪಿಸ್ಟ್ ಮಹಿಳೆ ಆತ್ಮಹತ್ಯೆ ! 

27-04-22 10:11 pm       HK Desk News   ಕರ್ನಾಟಕ

ಮೂರು ದಿನಗಳ‌ ಹಿಂದೆ ಕಾಣೆಯಾಗಿದ್ದ ಖಾಸಗಿ ಆಸ್ಪತ್ರೆಯಲ್ಲಿ ಪಿಸಿಯೋಥೆರಪಿಸ್ಟ್  ಆಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಪತಿ, ನಾದಿನಿಯರ ಕಾಟಕ್ಕೆ ಸಾವಿಗೆ ಶರಣಾಗಿದ್ದಾರೆಂಬ ಆರೋಪ ಕೇಳಿಬಂದಿದೆ.

ಚಾಮರಾಜನಗರ, ಎ.27: ಮೂರು ದಿನಗಳ‌ ಹಿಂದೆ ಕಾಣೆಯಾಗಿದ್ದ ಖಾಸಗಿ ಆಸ್ಪತ್ರೆಯಲ್ಲಿ ಪಿಸಿಯೋಥೆರಪಿಸ್ಟ್  ಆಗಿದ್ದ ಮಹಿಳೆಯೊಬ್ಬರು ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಪತಿ, ನಾದಿನಿಯರ ಕಾಟಕ್ಕೆ ಸಾವಿಗೆ ಶರಣಾಗಿದ್ದಾರೆಂಬ ಆರೋಪ ಕೇಳಿಬಂದಿದೆ. ಮಂಡ್ಯ ಜಿಲ್ಲೆಯ ಬೆಳಕವಾಡಿ ಬಳಿಯ ಕಾವೇರಿ ನದಿಯಲ್ಲಿ ಶವ ಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಯಳಂದೂರು ನಿವಾಸಿ ಪಿಸಿಯೋಥೆರಪಿಸ್ಟ್ ನಾಗವೇಣಿ(32) ಮೃತ ದುರ್ದೈವಿ. ಮಹಿಳೆಯ ಪತಿ ಸ್ವಾಮಿನಾಯಕ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ ಕ್ಷಯರೋಗ ವಿಭಾಗದ ಸೂಪರ್ ವೈಸರ್ ಆಗಿದ್ದಾನೆ. ಸ್ವಾಮಿನಾಯಕ ಹಾಗೂ ಆತನ ತಂಗಿ ಭಾಗ್ಯ ನಾಗವೇಣಿಗೆ ಕಿರುಕುಳ ಕೊಡುತ್ತಿದ್ದರು ಎನ್ನಲಾಗಿದೆ.

ಯಳಂದೂರು ನಿವಾಸಿ ನಾಗವೇಣಿ ಕಾಣೆಯಾಗಿದ್ದ ಬಗ್ಗೆ ಪೋಷಕರು ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪತಿ ಸ್ವಾಮಿನಾಯಕ ಅವರು ನಾಗವೇಣಿಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ನಾಗವೇಣಿ ಮನೆ ಬಿಟ್ಟು ಹೋಗಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಗವೇಣಿ ಪಾಲಕರು ದೂರಿದ್ದಾರೆ. ಮಂಡ್ಯ ಜಿಲ್ಲೆಯ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Chamrajnagara Torture by husband and family stenographer commits suicide