ತಲೆತಪ್ಪಿಸಿಕೊಳ್ಳಲು ನೆರವಿತ್ತ ಸೊಲ್ಲಾಪುರದ ಮರಳು ಉದ್ಯಮಿ ; ಕಾಶ್ಮೀರ್ ಟು ಮಹಾರಾಷ್ಟ್ರ - 18 ದಿನ ದಿವ್ಯಾ ಓಡಾಡಿದ್ದೇ ರೋಚಕ ! ಆ ಒಂದು ಸುಳಿವಲ್ಲಿ ಗೆದ್ದುಬಿಟ್ಟ ಸಿಐಡಿ !  

29-04-22 03:33 pm       HK Desk News   ಕರ್ನಾಟಕ

ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಕಿಂಗ್ ಪಿನ್ ಎನ್ನಲಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು 18 ದಿನಗಳ ಬಳಿಕ ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದ್ದಾರೆ.

ಕಲಬುರ್ಗಿ, ಎ.29: ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಕಿಂಗ್ ಪಿನ್ ಎನ್ನಲಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು 18 ದಿನಗಳ ಬಳಿಕ ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದ್ದಾರೆ. ಈ ಹದಿನೆಂಟು ದಿನಗಳಲ್ಲಿ ದಿವ್ಯಾ ಹಾಗರಗಿ ತಲೆಮರೆಸಿಕೊಂಡಿದ್ದು ಹೇಗೆ ? ಎಲ್ಲೆಲ್ಲಿ ಓಡಾಡಿದ್ದಳು ? ದೇಶಾದ್ಯಂತ ಸಿಐಡಿ ಅಧಿಕಾರಿಗಳು ಬಲೆ ಬೀಸಿದ್ದರೂ, ಕೈಗೆ ಸಿಗದೆ ತಪ್ಪಿಸಿಕೊಂಡಿದ್ದು ಹೇಗೆ ? ಇಷ್ಟಕ್ಕೂ ಆಕೆಯನ್ನು ಬಚಾವ್ ಮಾಡಿದ್ದ ಕೈಗಳು ಯಾವುವು ಅನ್ನೋದು ಕುತೂಹಲಕಾರಿ ಕತೆ.

ಹದಿನೆಂಟು ದಿನಗಳಲ್ಲಿ ಒಂದು ದಿನವೂ ಒಂದೇ ಕಡೆ ಉಳಿದಿರಲಿಲ್ಲ. ಪ್ರತಿದಿನವೂ ಜಾಗ ಬದಲಾಯಿಸುತ್ತಾ ರಾಜ್ಯದಿಂದ ರಾಜ್ಯಕ್ಕೆ ಸುತ್ತಾಡಿದ್ದಾಳೆ. ಕಾಶ್ಮೀರದಿಂದ ಹರ್ಯಾಣ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಸುತ್ತಾಡಿದ್ದಾಳೆ. ಆದರೆ ಈ ವೇಳೆ ತನ್ನ ಖಾಸಗಿ ಮೊಬೈಲ್ ಬಳಕೆ ಮಾಡಿರಲಿಲ್ಲ. ತನ್ನ ಖಾತೆಯಿಂದ ಹಣ ತೆಗೆಯುವುದಾಗಲೀ, ಎಟಿಎಂ ಬಳಸೋದಾಗಲೀ ಮಾಡಿರಲಿಲ್ಲ. ಹೀಗಾಗಿ ಇತ್ತ ತೀವ್ರ ಒತ್ತಡಕ್ಕೆ ಬಿದ್ದಿದ್ದ ರಾಜ್ಯ ಸರಕಾರ ಮತ್ತು ಸಿಐಡಿ ಅಧಿಕಾರಿಗಳ ತಂಡಕ್ಕೆ ಆಕೆಯನ್ನು ಪತ್ತೆ ಮಾಡುವುದೇ ಸವಾಲಾಗಿತ್ತು. ವಿಪಕ್ಷ ಕಾಂಗ್ರೆಸ್ ನಾಯಕರಂತೂ, ಕಾಂಗ್ರೆಸ್ ಮುಖಂಡರನ್ನು ಅರೆಸ್ಟ್ ಮಾಡಿದ್ದೀರಿ, ಬಿಜೆಪಿ ನಾಯಕಿಯನ್ನು ಬಚಾವ್ ಮಾಡಿದ್ದೀರಿ, ಆರೋಪಿಗಳನ್ನು ನೀವೇ ರಕ್ಷಣೆ ಮಾಡ್ತಿದೀರಿ ಎಂದು ಹೇಳಿ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದ್ದರು.

Raghavendra K. Hegde (@rkhegde_cod) / Twitter

ಇದರ ನಡುವಲ್ಲೇ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಮತ್ತಿತರರಿದ್ದ ತಂಡ ಆರೋಪಿಗಳಿಗಾಗಿ ತೀವ್ರ ಹುಡುಕಾಟದಲ್ಲಿ ತೊಡಗಿತ್ತು. ದಿವ್ಯಾ ಹಾಗರಗಿಯ ಸಖ್ಯ ಹೊಂದಿದ್ದವರನ್ನೆಲ್ಲ ವಿಚಾರಣೆಗೆ ಒಳಪಡಿಸಿತ್ತು. ಎರಡು ದಿನಗಳ ಹಿಂದೆ ಅಫಜಲಪುರದ ಶಹಾಬಾದ್ ನಗರಸಭೆಯಲ್ಲಿ ಎಫ್ ಡಿಎ ಆಗಿದ್ದ ಜ್ಯೋತಿ ಪಾಟೀಲ್ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆಕೆಯನ್ನು ವಿಚಾರಣೆ ನಡೆಸುತ್ತಲೇ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಲಭಿಸಿತ್ತು. ದಿವ್ಯಾ ಹಾಗರಗಿ ಮತ್ತು ತಂಡ ಜೊತೆಗಿದ್ದಾರೆ, ತನ್ನ ಪರ್ಸನಲ್ ನಂಬರ್ ಬಿಟ್ಟು ಬೇರೊಂದು ಮೊಬೈಲಿನಲ್ಲಿ ವ್ಯವಹರಿಸುತ್ತಿದ್ದಾಳೆ ಅನ್ನುವ ಸುಳಿವು ಲಭಿಸಿತ್ತು. ಅದೇ ನಂಬರಿನಿಂದ ಜ್ಯೋತಿಗೂ ಸಂಪರ್ಕ ಇದ್ದುದರಿಂದ ಪೊಲೀಸರು ದಿವ್ಯಾಳನ್ನು ಟ್ರೇಸ್ ಔಟ್ ಮಾಡಲು ಪ್ಲಾನ್ ಹಾಕಿದ್ದರು.

How to Trace Mobile Number Current Location Online on Map

ಸುಳಿವು ನೀಡಿದ್ದು ಜ್ಯೋತಿ ಪಾಟೀಲ್ ಫೋನ್

ವಿಚಾರ ತಿಳಿಯುತ್ತಲೇ ಜ್ಯೋತಿಯಿಂದಲೇ ದಿವ್ಯಾಗೆ ಫೋನ್ ಮಾಡಿಸಿದ್ದರು ಸಿಐಡಿ ಅಧಿಕಾರಿಗಳು. ಲೋಕಾಭಿರಾಮ ಮಾತನಾಡುವಂತೆ ಹೇಳಿ, ಇತ್ತ ಅಧಿಕಾರಿಗಳು ಆಕೆಯ ಫೋನ್ ಟ್ರೇಸ್ ಮಾಡಿದ್ದರು. ಲೊಕೇಶನ್ ಮೂಲಕ ದಿವ್ಯಾ ಹಾಗರಗಿ ಪುಣೆಯ ಹೊಟೇಲ್ ನಲ್ಲಿ ಉಳಿದುಕೊಂಡಿದ್ದು ಖಚಿತವಾಗಿತ್ತು. ಮೊದಲೇ ಅಲರ್ಟ್ ಆಗಿದ್ದ ಸಿಐಡಿ ತಂಡ ನೇರವಾಗಿ ಪುಣೆಗೆ ನುಗ್ಗಿತ್ತು. ಅದಕ್ಕೂ ಮೊದಲೇ ನಾಲ್ಕು ತಂಡಗಳು ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ಬೀಡು ಬಿಟ್ಟಿದ್ದವು. ಇತ್ತ ಜ್ಯೋತಿ ಪಾಟೀಲ್ ವಶಕ್ಕೆ ಪಡೆದಿರುವುದನ್ನು ಮಾಧ್ಯಮಕ್ಕೆ ತಿಳಿಸದೇ ಅಧಿಕಾರಿಗಳ ತಂಡ ಪುಣೆಯಲ್ಲಿ ಮೊಬೈಲ್ ನಂಬರನ್ನು ಟ್ರೇಸ್ ಮಾಡಿ, ದಿವ್ಯಾ ಹಾಗರಗಿ ಬೆನ್ನು ಹತ್ತಿತ್ತು. ಗುರುವಾರ ರಾತ್ರಿ ದಿವ್ಯಾ ಹಾಗರಗಿ ಮತ್ತು ಐವರ ತಂಡ ಹೊಟೇಲ್ ನಲ್ಲಿ ಊಟ ಮಾಡುತ್ತಿದ್ದಾಗಲೇ ಅಲ್ಲಿಗೆ ಪೊಲೀಸರು ಎಂಟ್ರಿ ಆಗಿದ್ದು ರೆಡ್ ಹ್ಯಾಂಡಾಗಿ ಕ್ಯಾಚ್ ಮಾಡಿದ್ದಾರೆ.

When can the police officers arrest without a warrant - iPleaders

ತಲೆಮರೆಸಿಕೊಳ್ಳಲು ಮರಳು ಉದ್ಯಮಿ ನೆರವು

ಪಿಎಸ್ಐ ಪರೀಕ್ಷೆ ನಡೆದಿದ್ದ ಜ್ಞಾನಜ್ಯೋತಿ ಶಾಲೆಯ ಶಿಕ್ಷಕಿಯರಾದ ಸುನಂದಾ, ಅರ್ಚನಾ, ಸುನೀತಾ ಜೊತೆಗೇ ಇದ್ದುಕೊಂಡು ದಿವ್ಯಾ ಜೊತೆಗೆ ಅರೆಸ್ಟ್ ಆಗಿದ್ದಾರೆ. ಇದೇ ವೇಳೆ, ದಿವ್ಯಾ ಹಾಗರಗಿ ಇಷ್ಟು ದಿನಗಳ ವರೆಗೆ ತಲೆಮರೆಸಿಕೊಳ್ಳಲು ಹಣದ ಸಹಾಯ ಮಾಡಿದ್ದ ಸೊಲ್ಲಾಪುರದ ಮರಳು ಉದ್ಯಮಿ ಸುರೇಶ್ ಕಾಟೇಗಾಂವ ಹಾಗೂ ಕಾಳಿದಾಸ್ ಎಂಬಿಬ್ಬರನ್ನೂ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸುರೇಶ್ ಕಾಟೆಗಾಂವ, ಕರ್ನಾಟಕ – ಮಹಾರಾಷ್ಟ್ರ ಗಡಿಭಾಗದಲ್ಲಿ ಮರಳುಗಾರಿಕೆ ನಡೆಸುತ್ತಿದ್ದು, ಕಲಬುರ್ಗಿಯಲ್ಲಿ ಮರಳು ದಂಧೆ ನಡೆಸಲು ದಿವ್ಯಾ ಹಾಗರಗಿ ನೆರವು ನೀಡಿದ್ದಳು. ಇದಕ್ಕೆ ಪ್ರತಿಯಾಗಿ ದಿವ್ಯಾ ತಲೆಮರೆಸಿಕೊಳ್ಳಲು ಸಾಕಷ್ಟು ಹಣ ಮತ್ತು ವಾಹನದ ನೆರವನ್ನು ಸುರೇಶ್ ನೀಡಿದ್ದ ಎನ್ನಲಾಗಿದೆ. ಪುಣೆ, ಮುಂಬೈ, ನಾಸಿಕ್, ಗುಜರಾತ್, ಕಾಶ್ಮೀರ ಹೀಗೆ ಹದಿನೆಂಟು ದಿನಗಳ ಉದ್ದಕ್ಕೂ ದಿವ್ಯಾ ಮತ್ತು ತಂಡ ಸಂಚರಿಸಿತ್ತು. ದಿನವೂ ಹೊಟೇಲ್ ನಲ್ಲಿ ಕೊಠಡಿ ಬುಕ್ಕಿಂಗ್ ನಿಂದ ತೊಡಗಿ ವಾಹನ ಬದಲಾವಣೆ, ಅಲ್ಲಲ್ಲಿ ಹಣಕಾಸು ವ್ಯವಸ್ಥೆಯನ್ನು ಸುರೇಶ್ ತನ್ನ ಆಪ್ತರ ಮೂಲಕ ಮಾಡಿಸಿದ್ದ.

Uttarakhand HC allows anyone, even children, to seek e-court services |  Dehradun News - Times of India

ಆಸ್ತಿ ಜಪ್ತಿ ಬೆದರಿಕೆ ಹಾಕಿದ್ದ ಕೋರ್ಟ್

ಎರಡು ದಿನಗಳ ಹಿಂದಷ್ಟೇ ದಿವ್ಯಾ ಹಾಗರಗಿ ವಿರುದ್ಧ ಕಲಬುರ್ಗಿ ಕೋರ್ಟ್ ಬಂಧನ ವಾರಂಟ್ ಹೊರಡಿಸಿತ್ತು. ಒಂದು ವಾರದೊಳಗೆ ಕೋರ್ಟಿಗೆ ಶರಣಾಗದಿದ್ದರೆ, ಆಕೆಯ ಆಸ್ತಿ ಜಪ್ತಿ ಮಾಡುವಂತೆ ಸೂಚಿಸಿತ್ತು. ಇದರಿಂದ ಸಿಐಡಿ ಅಧಿಕಾರಿಗಳು ಒಂದು ಹೆಜ್ಜೆ ಮುಂದೆ ಹೋಗಿದ್ದರೆ, ತಲೆಮರೆಸಿಕೊಂಡು ಓಡಾಡಿದ್ದ ದಿವ್ಯಾ ಕಂಗೆಡುವಂತಾಗಿತ್ತು. ಪಿಎಸ್ಐ ಪರೀಕ್ಷೆ ನಡೆದಿದ್ದ ಜ್ಞಾನಜ್ಯೋತಿ ಶಾಲೆಯೇ ಅಕ್ರಮದ ಕೇಂದ್ರ ಬಿಂದು ಎನ್ನುವ ಮಾಹಿತಿ ಇದ್ದುದರಿಂದ ಆಕೆಯನ್ನು ಅರೆಸ್ಟ್ ಮಾಡದೇ ಸಿಐಡಿಗೂ ವಿಧಿ ಇರಲಿಲ್ಲ. ಪಿಎಸ್ಐ ಹುದ್ದೆ ಗಿಟ್ಟಿಸಲು ಹಣ ನೀಡಿದ್ದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಮುಖಂಡ ಆರ್.ಡಿ.ಪಾಟೀಲ ಬ್ಲೂಟೂತ್ ಮೂಲಕ ಉತ್ತರಗಳನ್ನು ರವಾನಿಸಿದ್ದ. ಆರ್.ಡಿ.ಪಾಟೀಲ್, ಆತನ ಸಹೋದರ ಮಹಾಂತೇಶ ಪಾಟೀಲ ಸೇರಿ 17 ಮಂದಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ದಿವ್ಯಾ ಹಾಗರಗಿ ಸೇರಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದು, ಒಟ್ಟು ಬಂಧಿತರ ಸಂಖ್ಯೆ 23ಕ್ಕೇರಿದೆ.

ಶಾಲೆಯಲ್ಲಿ ಮೇಲ್ವಿಚಾರಕಿ ಆಗಿದ್ದ ಶಾಂತಾಬಾಯಿ, ಮುಖ್ಯ ಶಿಕ್ಷಕ ಕಾಶೀನಾಥ್, ಹಣಕಾಸು ನೆರವು ನೀಡಿದ್ದ ಇಂಜಿನಿಯರ್ ಮಂಜುನಾಥ್ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಹಗರಣದ ಪ್ರಮುಖ ಕಿಂಗ್ ಪಿನ್ ಗಳು ಸಿಕ್ಕಿಬಿದ್ದಿರುವುದರಿಂದ ಸದ್ಯದಲ್ಲೇ ಉಳಿದವರ ಬಂಧನ ಆಗುವ ನಿರೀಕ್ಷೆಯಿದೆ.

Divya was a former accused in the PSI examination and was former president of the Kalaburagi district BJP women's unit. Divya has been identified with the BJP women's unit, and has good relations with leaders of all parties, including the Congress. Diwya's photo with several Congress leaders, including state BJP leaders DK Sivakumar, was viral everywhere.