ಸುಮಲತಾಗೆ ನ್ಯಾಚುರಲ್ ಚಾಯ್ಸ್ ಇರೋದು ಬಿಜೆಪಿ, ಇನ್ನೇನು ಜೆಡಿಎಸ್, ಕಾಂಗ್ರೆಸ್ ಹೋಗ್ತಾರಾ.. ; ಅಶ್ವತ್ಥ್ ನಾರಾಯಣ ಪ್ರಶ್ನೆ 

30-04-22 08:28 pm       HK Desk News   ಕರ್ನಾಟಕ

ನಮ್ಮ ಪಕ್ಷಕ್ಕೂ ಸುಮಲತಾ ಅವರಿಗೂ ಒಳ್ಳೆಯ ಸಂಬಂಧ ಇದೆ. ಇಂದು ಎಲ್ಲರಿಗೂ ಸಲ್ಲುವ, ಭರವಸೆ ಇರುವ, ಭವಿಷ್ಯದ ಪಕ್ಷ ಬಿಜೆಪಿ. ಅವರು ಭಾರತೀಯ ಜನತಾ ಪಕ್ಷವನ್ನೇ ಸೇರುವುದು ಸೂಕ್ತ. ಸುಮಲತಾ ಬಿಜೆಪಿ ಸೇರಲಿ ಅನ್ನೋದು ಬಯಸುತ್ತೇವೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ. 

ಬೆಳಗಾವಿ, ಎ.30: ನಮ್ಮ ಪಕ್ಷಕ್ಕೂ ಸುಮಲತಾ ಅವರಿಗೂ ಒಳ್ಳೆಯ ಸಂಬಂಧ ಇದೆ. ಇಂದು ಎಲ್ಲರಿಗೂ ಸಲ್ಲುವ, ಭರವಸೆ ಇರುವ, ಭವಿಷ್ಯದ ಪಕ್ಷ ಬಿಜೆಪಿ. ಅವರು ಭಾರತೀಯ ಜನತಾ ಪಕ್ಷವನ್ನೇ ಸೇರುವುದು ಸೂಕ್ತ. ಸುಮಲತಾ ಬಿಜೆಪಿ ಸೇರಲಿ ಅನ್ನೋದು ಬಯಸುತ್ತೇವೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ. 

ಅವರಿಗೆ ನ್ಯಾಚುರಲ್ ಚಾಯ್ಸ್ ಇರುವಂತದ್ದು ಬಿಜೆಪಿ.‌ ಇನ್ನೇನು ಕಾಂಗ್ರೆಸ್ ಗೆ ಹೋಗ್ತಾರಾ, ಜೆಡಿಎಸ್‌ಗೆ ಹೋಗ್ತಾರಾ. ಸೂಕ್ತ ಕಾಲದಲ್ಲಿ ಅವರೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು. 

Sumalatha on HDK jibe: Shows his culture- The New Indian Express

ಮೈಸೂರು ಭಾಗದಲ್ಲಿ ಬಿಜೆಪಿಗೆ ಟಾರ್ಗೆಟ್ ಯಾರು ಎಂಬ ಮಾಧ್ಯಮಗಳ ಪ್ರಶ್ನೆಗೆ, ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷ ಎರಡೂ ಇದೆ, ಎರಡೂ ಟಾರ್ಗೆಟ್ ಇದೆ. ಆದರೆ ಎರಡೂ ಅಪ್ರಸ್ತುತವಾಗಿದೆ, ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಸಂಪೂರ್ಣ ಬಲಿಷ್ಠಗೊಳಿಸಲು ಪ್ರಯತ್ನ ಮಾಡುತ್ತೇವೆ. 

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ, ಸಂಪುಟ ವಿಸ್ತರಣೆಯನ್ನು ಸಿಎಂ ನೋಡಿಕೊಳ್ಳುತ್ತಾರೆ. ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ವಿಸ್ತರಣೆ ಮಾಡ್ತಾರೆ ಎಂದು ಸಚಿವ ಅಶ್ವತ್ಥ್‌ ನಾರಾಯಣ್ ಹೇಳಿದರು.

On the offer from the BJP, she said: “Karnataka minister C N Ashwath Narayan and other BJP functionaries invited me to join the party. But, as of now, there is no necessity for me to join, I will continue as an Independent MP. I will take the opinion of my supporters and voters before joining the BJP, I am yet to take a call on it.”