ಬ್ರೇಕಿಂಗ್ ನ್ಯೂಸ್
02-05-22 02:45 pm HK Desk News ಕರ್ನಾಟಕ
ಕಲಬುರಗಿ, ಮೇ 2 : ಪಿಎಸ್‌ಐ ಪರೀಕ್ಷೆಯ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಪ್ರಮುಖ ಆರೋಪಿ, ಒಟ್ಟು ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಸೋಮವಾರ ಸಿಐಡಿ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ.
ಕಳೆದ 22 ದಿನಗಳಿಂದ ತಲೆಮರೆಸಿಕೊಂಡಿದ್ದ ಕಾಶೀನಾಥ್, ಸೋಮವಾರ ಬೆಳಿಗ್ಗೆ 8.30ರ ವೇಳೆಗೆ ನೇರವಾಗಿ ಸಿಐಡಿ ಕಚೇರಿಗೆ ಆಗಮಿಸಿದ್ದು ಶರಣಾಗಿದ್ದಾನೆ. ಪರೀಕ್ಷಾ ಅಕ್ರಮದಲ್ಲಿ ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಬಳಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ.
ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅಕ್ರಮದಲ್ಲಿ ಶಾಲೆಯ ಮುಖ್ಯಗುರು ಕಾಶಿನಾಥ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಐಡಿ ತಂಡದ ಎದುರು ಹೇಳಿಕೆ ನೀಡಿದ್ದರು. ಹೀಗಾಗಿ ಕಾಶಿನಾಥ್ ಶರಣಾಗತಿ ಅತ್ಯಂತ ಮಹತ್ವ ಪಾತ್ರ ವಹಿಸಿದೆ. ಇದರಿಂದ ಬಂಧಿತರ ಸಂಖ್ಯೆ 26ಕ್ಕೆ ಏರಿದಂತಾಗಿದೆ.
ಅಕ್ರಮ ಬಯಲು ಮಾಡಿದ್ದಾತನೇ ಅರೆಸ್ಟ್ !
ಇದೇ ವೇಳೆ, ಪಿಎಸ್ಐ ಪರೀಕ್ಷೆ ಅಕ್ರಮ ಬಯಲಿಗೆ ಬರಲು ಕಾರಣನಾದ ಆರೋಪಿ ಶ್ರೀಧರ್ ರಾಠೋಡ್ ಎಂಬಾತನನ್ನು ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಕಲಬುರಗಿಯ ಕಣದಾಳ ತಾಂಡಾ ನಿವಾಸಿಯಾಗಿರುವ ಶ್ರೀಧರ್ ರಾಠೋಡ್, ಪ್ರಕರಣದ ಮೊದಲ ಆರೋಪಿ ವಿರೇಶನನ್ನ ಮಂಜುನಾಥ ಮೇಳಕುಂದಿಗೆ ಪರಿಚಯಿಸಿದ್ದ. ಇದಕ್ಕಾಗಿ 5 ಲಕ್ಷ ರೂ. ನೀಡುವಂತೆ ವೀರೇಶ ಬಳಿ ಡಿಮ್ಯಾಂಡ್ ಇಟ್ಟಿದ್ದ. ಆತ ಹಣ ಕೊಡದೇ ಇದ್ದುದಕ್ಕೆ ಓಎಂಆರ್ ಶೀಟನ್ನು ಶ್ರೀಧರ ಲೀಕ್ ಮಾಡಿದ್ದ. ಇದರಿಂದಾಗಿ ಪಿಎಸ್ಐ ಹಗರಣ ಬಯಲಿಗೆ ಬರುವಂತಾಗಿತ್ತು.
ಶ್ರೀಧರ್ ರಾಠೋಡ್ ಕೂಡ ಪರೀಕ್ಷೆ ಬರೆದಿದ್ದು ಪಿಎಸ್ಐ ನೇಮಕಾತಿಯಲ್ಲಿ ತೇರ್ಗಡೆಯೂ ಆಗಿದ್ದ. ಅಕ್ರಮ ನಡೆಸಿದವರು ಜ್ಞಾನಜ್ಯೋತಿ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದರೆ, ಶ್ರೀಧರ್ ರಾಠೋಡ್ ಬೇರೆ ಕೇಂದ್ರದಲ್ಲಿ ಪರೀಕ್ಷೆ ಬರೆದು ಪಾಸ್ ಆಗಿದ್ದ. ಆತನ ಓಎಂಆರ್ ಶೀಟ್ ಚೆಕ್ ಮಾಡಿದಾಗ ಯಾವುದೇ ಮೋಸ ಕಂಡುಬಂದಿಲ್ಲ ಎಂದು ಸಿಐಡಿ ಅಧಿಕಾರಿಗಳ ತನಿಖೆಯಲ್ಲಿ ಕಂಡುಬಂದಿದೆ. ಆದರೆ ಆರೋಪಿ ವೀರೇಶನಿಗೆ ಸಹಾಯ ಮಾಡಿದ್ದಕ್ಕಾಗಿ ಈಗ ಶ್ರೀಧರ್ ನನ್ನು ಅರೆಸ್ಟ್ ಮಾಡಲಾಗಿದೆ.
ಈ ನಡುವೆ, 21 ದಿನಗಳಿಂದ ತಲೆಮರೆಸಿಕೊಂಡಿದ್ದ ಇಂಜಿನಿಯರ್ ಮಂಜುನಾಥ ಮೇಳಕುಂದಿ ಭಾನುವಾರ ಆಟೋದಲ್ಲಿ ಸಿಐಡಿ ಕಚೇರಿಗೆ ಶರಣಾಗಿದ್ದ. ಅತ್ತ ಸಿಐಡಿ ಅಧಿಕಾರಿಗಳು ಮಂಜುನಾಥ್ ಮನೆ ಬಳಿ ಕಾಯುತ್ತಿದ್ದರೆ, ಇತ್ತ ನೇರವಾಗಿ ಸಿಐಡಿ ಕಚೇರಿಗೆ ತೆರಳಿ ಕೈ ಎತ್ತಿದ್ದ. ಆರೋಪಿ ಮಂಜುನಾಥ್ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದರಿಂದ ಆತನ ತಂದೆಯನ್ನು ಕರೆದು ವಿಚಾರಣೆ ನಡೆಸಿದ್ದರು. ಅಲ್ಲದೆ, ಮೇ 8 ರಂದು ಮಂಜುನಾಥ ಚಿಕ್ಕಪ್ಪನ ಮಗಳ ಮದುವೆ ಇದ್ದುದರಿಂದ, ನಾವು ಮದುವೆ ದಿನವೇ ಮನೆಗೆ ಮತ್ತು ಮದುವೆ ಮಂಟಪಕ್ಕೆ ಇರಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಹೇಳಿದ್ದರು.
ಇದೇ ಹಿನ್ನೆಲೆಯಲ್ಲಿ ಆರೋಪಿ ಮಂಜುನಾಥ ಮೇಳಕುಂದಿ ಸಿಐಡಿಗೆ ಬಂದು ಸರೆಂಡರ್ ಆಗಿದ್ದಾನೆ ಎನ್ನಲಾಗುತ್ತಿದೆ. ತಮ್ಮ ಮನೆಗಳಿಗೆ ಬರದಂತೆ ಸಂಬಂಧಿಕರು ಕೂಡ ಹೇಳಿದ್ದರಿಂದ ಮಂಗಳೂರು ಮತ್ತಿತರ ಕಡೆ ಸುತ್ತಾಡಿ ಕೊನೆಗೆ ಸರೆಂಡರ್ ಆಗಿದ್ದಾನೆ.
Another prime accused in the PSI CET scam, Kashinath, who is the headmaster of Jnana Jyoti English Medium School where the manipulation of OMR sheets of PSI-CET exams took place, has surrendered before the state CID on Monday morning.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm