ಅಮಿತ್ ಷಾ ರಾಜ್ಯಕ್ಕೆ ಬರುತ್ತಿದ್ದಂತೆ ಬಿಜೆಪಿಯಲ್ಲಿ ನಡುಕ, ಮತ್ತೆ ನಾಯಕತ್ವ ಬದಲಾವಣೆಯ ವದಂತಿ, ರಾಜ್ಯಾಧ್ಯಕ್ಷ - ಮುಖ್ಯಮಂತ್ರಿ ಇಬ್ಬರೂ ಬದಲಾಗ್ತಾರಾ ?

02-05-22 10:22 pm       Bangalore Correspondent   ಕರ್ನಾಟಕ

ಅತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಹಬ್ಬಿದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಮತ್ತೆ ಸುಳಿಗಾಳಿ ಎದ್ದಿದೆ. ಮತ್ತೆ ನಾಯಕತ್ವ ಬದಲಾವಣೆಗೆ ಕೇಂದ್ರ ನಾಯಕರು ಮನ ಮಾಡಿದ್ದಾರೆ ಎನ್ನುವ ಸ್ಫೋಟಕ ಸುದ್ದಿಗಳು ಬರತೊಡಗಿದ್ದು, ಇದಕ್ಕಾಗಿ ದೆಹಲಿ ಮತ್ತು ಬೆಂಗಳೂರಿನಲ್ಲಿ ದಿಢೀರ್ ರಾಜಕೀಯ ಸಭೆಗಳು ನಡೆದಿವೆ.

ಬೆಂಗಳೂರು, ಮೇ 2: ಅತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಹಬ್ಬಿದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಮತ್ತೆ ಸುಳಿಗಾಳಿ ಎದ್ದಿದೆ. ಮತ್ತೆ ನಾಯಕತ್ವ ಬದಲಾವಣೆಗೆ ಕೇಂದ್ರ ನಾಯಕರು ಮನ ಮಾಡಿದ್ದಾರೆ ಎನ್ನುವ ಸ್ಫೋಟಕ ಸುದ್ದಿಗಳು ಬರತೊಡಗಿದ್ದು, ಇದಕ್ಕಾಗಿ ದೆಹಲಿ ಮತ್ತು ಬೆಂಗಳೂರಿನಲ್ಲಿ ದಿಢೀರ್ ರಾಜಕೀಯ ಸಭೆಗಳು ನಡೆದಿವೆ.

Karnataka Covid 19 clusters: CM Basavaraj Bommai calls emergency meeting-  The New Indian Express

ಇತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನ ಉಳಿಸಿಕೊಳ್ಳಲು ದಿಢೀರ್ ಆಗಿ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರನ್ನು ಸೋಮವಾರ ಮಧ್ಯಾಹ್ನ ಭೇಟಿಯಾಗಿದ್ದಾರೆ. ಆದರೆ, ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಂಡ ಕಟ್ಟಿಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕೇಂದ್ರ ವರಿಷ್ಠರಿಗೆ ವರದಿ ಕೊಟ್ಟಿದ್ದಾರೆ ಎನ್ನುವ ಸುದ್ದಿಗಳಿವೆ. ಇದಲ್ಲದೆ, ಭಾನುವಾರ ಮೈಸೂರಿಗೆ ಆಗಮಿಸಿದ್ದ ಬಿ.ಎಲ್ ಸಂತೋಷ್, ನಾಯಕತ್ವ ಬದಲಾವಣೆಯೇ ಬಿಜೆಪಿಯ ಶಕ್ತಿ ಎನ್ನುವ ಮೂಲಕ ಸಂಚಲನ ಎಬ್ಬಿಸಿದ್ದರು. ಈ ಹೇಳಿಕೆ ಹೊರಬಿದ್ದ ಮರುದಿನವೇ ಅಮಿತ್ ಷಾ ರಾಜ್ಯದ ರಾಜಕೀಯ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದುಕೊಂಡೇ ಬೆಂಗಳೂರಿಗೆ ಹೊರಟಿದ್ದಾರೆ.

The rise of JP Nadda

Who is BL Santosh BJP give responsibility to end yogi government political  crisis BL Santosh BJP | जानिये कौन हैं बीएल संतोष जिन पर है UP BJP का  गतिरोध खत्म करने की

ಆದರೆ ಬೆಂಗಳೂರಿಗೆ ಹೊರಡುವುದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಮನೆಯಲ್ಲಿ ತುರ್ತು ಸಭೆಯನ್ನೂ ನಡೆಸಿದ್ದಾರೆ. ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆ ಸಭೆ ನಡೆಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಸಭೆಯಲ್ಲಿ ಬಿ.ಎಲ್. ಸಂತೋಷ್, ಸಚಿವ ನಿತಿನ್ ಗಡ್ಕರಿ, ಜೆಪಿ ನಡ್ಡಾ, ಅಮಿತ್ ಷಾ ಪಾಲ್ಗೊಂಡು ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಕಳೆದ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಿನ ಅವಧಿಗಿಂತಲೂ ಕಳಪೆಯಾಗಿ ಬೊಮ್ಮಾಯಿ ತಂಡ ವರ್ಚಸ್ಸು ಕಳಕೊಂಡಿದ್ದಾರೆ ಎನ್ನುವ ವರದಿಯನ್ನು ಬಿ.ಎಲ್. ಸಂತೋಷ್ ನೀಡಿದ್ದಾರೆ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ಮುಖ್ಯಮಂತ್ರಿ ಮತ್ತು ಇಡೀ ಮಂತ್ರಿಮಂಡಲವನ್ನು ಈ ಹೊತ್ತಿಗೆ ಬದಲಾವಣೆ ಮಾಡಿದರೆ, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬಹುದೇ ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಚುನಾವಣೆಗೆ ಒಂದು ವರ್ಷ ಇರುವಾಗ ಈ ರೀತಿ ಮಾಡಿದರೆ, ರಾಜ್ಯಾಡಳಿತ ವರ್ಚಸ್ಸು ಬದಲಾಗಬಹುದೇ ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

K'taka BJP Prez post: It's now B S Yeddyurappa Vs Nalin Kumar Kateel -  Oneindia News

ವಿಶೇಷ ಅಂದ್ರೆ, ಇದೇ ಸಮಯದಲ್ಲಿ ಬೆಂಗಳೂರಿನಲ್ಲಿಯೂ ರಾಜ್ಯದ ಪ್ರಮುಖ ನಾಯಕರು ರಹಸ್ಯವಾಗಿ ಸಭೆ ನಡೆಸಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಸಿಟಿ ರವಿ, ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್, ನಳಿನ್ ಕುಮಾರ್ ಕಟೀಲ್ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಯಾವೆಲ್ಲ ವಿಚಾರಗಳು ಚರ್ಚೆಗೆ ಬಂದಿವೆ ಎನ್ನುವ ಮಾಹಿತಿಯಿಲ್ಲ. ಆದರೆ, ಈಗಾಗ್ಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲವೆಂದೇ ಯಡಿಯೂರಪ್ಪ ಹೇಳಿಕೊಂಡು ಬಂದಿದ್ದರು. ಬೊಮ್ಮಾಯಿ ಅವರು ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡು ಬಂದವರಾಗಿದ್ದರಿಂದ ಮತ್ತು ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಬದಲಾವಣೆಯೂ ಅಷ್ಟು ಸುಲಭದ ಮಾತಲ್ಲ. ಆದರೆ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಇಂತಹ ಪ್ರಯೋಗಗಳಿಂದಲೇ ಗೆದ್ದು ಬೀಗಿರುವ ಬಿಜೆಪಿ ವರಿಷ್ಠರು ಯಾವುದಕ್ಕೂ ಹಿಂಜರಿಯುವ ಮಾತಿಲ್ಲ ಎನ್ನುವ ಆತುರದಲ್ಲಿದ್ದಾರೆ.

CT Ravi: Karnataka's Controversial Hindutva Man is Guiding BJP in Tamil Nadu

ಮಂಗಳವಾರ ಇಡೀ ದಿನ ಅಮಿತ್ ಷಾ ಬೆಂಗಳೂರಿನಲ್ಲಿ ಸರಣಿ ಸಭೆಗಳನ್ನು ನಡೆಸಲಿದ್ದು ಬುಧವಾರದ ಹೊತ್ತಿಗೆ ಏನೇನು ಬದಲಾವಣೆ ಆಗಲಿದೆ ಅನ್ನೋದು ನಿರ್ಧಾರವಾಗಲಿದೆ. ಈಗಾಗಲೇ ರಾಜ್ಯಾಧ್ಯಕ್ಷರ ಬದಲಾವಣೆ ಆಗಲಿದೆ ಎನ್ನುವ ಮಾಹಿತಿಗಳಿವೆ. ಆ ಸ್ಥಾನಕ್ಕೆ ಒಕ್ಕಲಿಗರಾದ ಶೋಭಾ ಕರಂದ್ಲಾಜೆ ಅಥವಾ ಸಿಟಿ ರವಿ ಅವರನ್ನು ಕೂರಿಸಲಿದ್ದಾರೆ ಎನ್ನುವ ಮಾತುಗಳಿವೆ. ಇದರ ನಡುವೆಯೇ, ರಾಜ್ಯಾಧ್ಯಕ್ಷರು ಮತ್ತು ಮುಖ್ಯಮಂತ್ರಿ ಎರಡು ಸ್ಥಾನವನ್ನೂ ಬದಲಾಯಿಸಲಿದ್ದಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಹರಡಿದೆ.

Nine months after he took charge, Karnataka Chief Minister Basavaraj Bommai is fielding rumours of his replacement following a string of controversies that the ruling BJP fears may impact the party in the 2023 state polls. BJP sources have ruled out any dramatic change for now.