ಬಿಜೆಪಿ ಪದಾಧಿಕಾರಿಗಳ ಸಭೆಯೇ ರದ್ದು ; ಬಿಎಸ್ವೈ ಗುಟುರಿಗೆ ಬೆದರಿದ್ರಾ ಹೈಕಮಾಂಡ್ ನಾಯಕರು ! ಬಂದ ಪುಟ್ಟ ಹೋದ ಪುಟ್ಟ ಅಮಿತ್ ಷಾ ; ಮತ್ತೆ ದೆಹಲಿ ಅಂಗಳಕ್ಕೆ ಚೆಂಡು !   

03-05-22 07:30 pm       Bangalore Correspondent   ಕರ್ನಾಟಕ

ನಾಯಕತ್ವ ಬದಲಾವಣೆ ಮಾಡಿಯೇ ತೀರುತ್ತೇವೆ, ಮುಂದಿನ ಚುನಾವಣೆಗೆ ಹೊಸ ತಂಡ ಕಟ್ಟುತ್ತೇವೆ ಎಂದು ಹೊರಟಿದ್ದ ಕೇಂದ್ರ ನಾಯಕರು ಮತ್ತು ರಾಜ್ಯದ ಒಂದಷ್ಟು ಅಸಂತೋಷಿಗಳು ಮತ್ತೆ ಠುಸ್ ಆಗಿದ್ದಾರೆ.

ಬೆಂಗಳೂರು, ಮೇ 3: ನಾಯಕತ್ವ ಬದಲಾವಣೆ ಮಾಡಿಯೇ ತೀರುತ್ತೇವೆ, ಮುಂದಿನ ಚುನಾವಣೆಗೆ ಹೊಸ ತಂಡ ಕಟ್ಟುತ್ತೇವೆ ಎಂದು ಹೊರಟಿದ್ದ ಕೇಂದ್ರ ನಾಯಕರು ಮತ್ತು ರಾಜ್ಯದ ಒಂದಷ್ಟು ಅಸಂತೋಷಿಗಳು ಮತ್ತೆ ಠುಸ್ ಆಗಿದ್ದಾರೆ. ಅಮಿತ್ ಷಾ ರಾಜ್ಯಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಬದಲಾವಣೆ ಆಗುತ್ತೆ ಎಂದು ದಟ್ಟ ವದಂತಿ ಬಿಜೆಪಿ ವಲಯದಲ್ಲಿ ಹಬ್ಬಿತ್ತು. ಇದಕ್ಕೆ ಪೂರಕ ಎನ್ನುವಂತೆ ದೆಹಲಿಯಲ್ಲಿ ಅಮಿತ್ ಷಾ ಬರುವುದಕ್ಕೂ ಮುನ್ನ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರ ಮನೆಯಲ್ಲೇ ತುರ್ತು ಸಭೆ ನಡೆಸಿದ್ದರು. ಆದರೆ ಬೆಂಗಳೂರಿಗೆ ಬರುತ್ತಲೇ ಚೆಂಡು ಮತ್ತೆ ರಿಬೌಂಡ್ ಆಗಿದ್ದು ದೆಹಲಿ ನಾಯಕರ ಹುಮ್ಮಸ್ಸು ಅಷ್ಟೇ ವೇಗದಲ್ಲಿ ಇಳಿದು ಹೋಗಿದೆ. ಅಷ್ಟೇ ಅಲ್ಲ, ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಸಭೆಯನ್ನೂ ರದ್ದು ಪಡಿಸಲಾಗಿದೆ.

K'taka's BL Santhosh elevated to BJP General Secretary, party's 2nd most  powerful role | The News Minute

ಎರಡು ದಿನಗಳ ಹಿಂದೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮೈಸೂರಿಗೆ ಬಂದಿದ್ದಾಗ, ನಾಯಕತ್ವ ಬದಲಾವಣೆಯೇ ಬಿಜೆಪಿ ಶಕ್ತಿ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಸಂಚಲನ ಎಬ್ಬಿಸಿದ್ದರು. ಸಂತೋಷ್ ಮಾತಿನ ಕಾರಣಕ್ಕೆ ಸೋಮವಾರ ರಾತ್ರಿ ಅಮಿತ್ ಷಾ ಬರುತ್ತಿದ್ದಾರೆ ಎನ್ನುತ್ತಿರುವಾಗಲೇ ನಾಯಕತ್ವ ಬದಲಾವಣೆಯ ಸುದ್ದಿ ತೀವ್ರ ಗತಿಯಲ್ಲಿ ಹಬ್ಬಿತ್ತು. ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷ ಸ್ಥಾನ ಎರಡೂ ಬದಲಾಗಲಿದೆ ಎನ್ನುವ ಸುದ್ದಿಯನ್ನೂ ತೇಲಿ ಬಿಡಲಾಗಿತ್ತು. ಈ ಸುದ್ದಿಗೆ ರೆಕ್ಕೆ ಪುಕ್ಕ ಸಿಕ್ಕಿಕೊಳ್ಳಲು ಕಾರಣವಾಗಿದ್ದು ಬೆಂಗಳೂರಿನಲ್ಲಿ ಅನೌಪಚಾರಿಕ ನೆಲೆಯಲ್ಲಿ ಕರೆದಿದ್ದ ಶಾಸಕಾಂಗ ಸಭೆ. ಮತ್ತು ಸಿಎಂ ಬೊಮ್ಮಾಯಿ ಅವರ ಗೃಹ ಕಚೇರಿಯಲ್ಲಿ ಏರ್ಪಡಿಸಿದ್ದ ಭೋಜನ ಕಾರ್ಯಕ್ರಮ. ಸಭೆಯಲ್ಲಿ ಬೊಮ್ಮಾಯಿ ವಿದಾಯ ಭಾಷಣ ಮಾಡಲಿದ್ದಾರೆಂದೂ ಸುದ್ದಿ ಹಬ್ಬಿತ್ತು.

Govt focus on Bengaluru suburbs, says CM Basavaraj Bommai- The New Indian  Express

ಕೋರ್ ಕಮಿಟಿ ಸಭೆ ಮತ್ತು ಪದಾಧಿಕಾರಿಗಳ ಸಭೆಯನ್ನು ಮೊದಲು ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದರೂ ಕೊನೆಕ್ಷಣದಲ್ಲಿ ಭದ್ರತೆ ನೆಪದಲ್ಲಿ ತಾಜ್ ವೆಸ್ಟ್ ಎಂಡ್ ಸ್ಟಾರ್ ಹೊಟೇಲಿಗೆ ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ ಮಂಗಳವಾರ ಬೆಳಗ್ಗಿನಿಂದ ಅಮಿತ್ ಷಾ ಮೀಟಿಂಗನ್ನು ಬಿಝಿ ಷೆಡ್ಯೂಲ್ ಇರುವಂತೆ ತೋರಿಸಲಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ ಆಗುತ್ತಲೇ ಅಮಿತ್ ಷಾ ಸೇರಿದಂತೆ ನಾಯಕತ್ವ ಬದಲಾವಣೆಯ ಸುದ್ದಿ ಹಬ್ಬಿಸಿದ ಅಸಂತೋಷಿ ನಾಯಕರು ಯು ಟರ್ನ್ ಹೊಡೆದಿದ್ದರು. ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಪ್ರಮುಖ ಸಚಿವರು, ಶಾಸಕರು, ಪ್ರಮುಖ ನಾಯಕರೆಲ್ಲ ತಾಜ್ ವೆಸ್ಟ್ ಎಂಡ್ ಹೊಟೇಲಿನತ್ತ ಆಗಮಿಸಿದ್ದರು. ಯಾರಿಗೂ ಸಭೆ ರದ್ದಾಗಿರುವ ಬಗ್ಗೆ ಮಾಹಿತಿ ಇರಲಿಲ್ಲ. ಮಧ್ಯಾಹ್ನ ಸಿಎಂ ಮನೆಯಲ್ಲಿ ಭೋಜನ ಏರ್ಪಡಿಸಲಾಗಿತ್ತು. ಅದೇ ಸಂದರ್ಭದಲ್ಲಿ ಮಧ್ಯಾಹ್ನ 2 ಗಂಟೆಗಿದ್ದ ಮಹತ್ವದ ಸಭೆ ರದ್ದಾಗಿರುವ ಮಾಹಿತಿಯನ್ನೂ ರವಾನಿಸಲಾಗಿತ್ತು.  

ಬಿಎಸ್ವೈ ಗುಟುರು ಹಾಕಿದ್ದಕ್ಕೇ ಬೆದರಿದ್ರಾ ?

Have To Live Together": BJP's BS Yediyurappa On Communal Flare-Ups

ಸೋಮವಾರ ನಾಯಕತ್ವ ಬದಲಾವಣೆ ಆಗಲಿದೆ ಎನ್ನುವ ಸುದ್ದಿ ಹಬ್ಬಿದಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಟುರು ಹಾಕಿದ್ದರು. ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ. ಸಿಎಂ ಆಗಿ ಬೊಮ್ಮಾಯಿ ಅವರೇ ಇರುತ್ತಾರೆ. ಬದಲಾವಣೆ ಸುದ್ದಿಗಳು ಊಹಾಪೋಹ ಅಷ್ಟೇ ಎಂದಿದ್ದರು. ಅಲ್ಲದೆ, ಅಮಿತ್ ಷಾ ಜೊತೆಗೆ ನಾನೇ ಈ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿ ರಾಜ್ಯದ ಅತೃಪ್ತ ನಾಯಕರಿಗೆ ಬಿಸಿ ಮುಟ್ಟಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಬರುತ್ತಾರೆ, ರಾಜ್ಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ಸುದ್ದಿ ಹಬ್ಬಿರುವಾಗಲೇ ಯಡಿಯೂರಪ್ಪ ಮಾತ್ರ ಕಡ್ಡಿ ಮುರಿದ ರೀತಿಯಲ್ಲಿ ಮಾತನಾಡಿದ್ದಲ್ಲದೆ, ತನ್ನ ಅಸಮ್ಮತಿ ವ್ಯಕ್ತಪಡಿಸಿದ್ದು ಕೇಂದ್ರ ನಾಯಕರಿಗೆ ಬೇರೆಯದೇ ರೀತಿಯ ಸಂದೇಶ ರವಾನೆಯಾಗಿತ್ತು.

ಬದಲಿಸಲು ಬರ್ತಿರೋದು ಎಷ್ಟನೇ ಬಾರಿ ?

ಹಾಗೆ ನೋಡಿದರೆ, ಮುಖ್ಯಮಂತ್ರಿ ಬದಲಾವಣೆಯ ಮಾತು ಕೇಳಿಬರುತ್ತಿರುವುದು ಇದು ಮೊದಲೇನಲ್ಲ. ಇದೇ ಆಶಯ ಇಟ್ಟುಕೊಂಡು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ಇತರ ಕೇಂದ್ರದ ಪ್ರತಿನಿಧಿಗಳು ಹಲವು ಬಾರಿ ಬಂದು ಹೋಗಿದ್ದಾರೆ. ರಾಜ್ಯದ ಬೆಳವಣಿಗೆ ಬಗ್ಗೆ ಅಮಿತ್ ಷಾ ವರದಿಗಳನ್ನು ತರಿಸಿಕೊಂಡಿದ್ದೂ ಆಗಿತ್ತು. ಕಳೆದ ಎಪ್ರಿಲ್ 1ರಂದು ಅಮಿತ್ ಷಾ ಬೆಂಗಳೂರಿಗೆ ಬಂದಿದ್ದಾಗಲೂ ನಾಯಕತ್ವ ಬದಲಾವಣೆ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಆಗ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದ್ದ ಷಾ, ಮುಂದಿನ ಬಾರಿ 150 ಸ್ಥಾನ ಗೆಲ್ಲಲು ಟಾಸ್ಕ್ ನೀಡಿ ಮರಳಿದ್ದರು. ಅದಕ್ಕೂ ಹಿಂದೆ ಜನವರಿ ಆರಂಭದಲ್ಲಿಯೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಭಾರೀ ವದಂತಿಗಳು ಹರಡಿದ್ದವು. ಜನವರಿ 14ರ ಸಂಕ್ರಾಂತಿ ವೇಳೆಗೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆನಂತರ, ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದರಿಂದ ಫಲಿತಾಂಶದ ಬಳಿಕವೇ ಕರ್ನಾಟಕದ ರಾಜಕೀಯ ನಿರ್ಧಾರ ಎನ್ನುವ ಮಾತುಗಳು ಬಂದಿದ್ದವು. ಮಾರ್ಚ್ ಹತ್ತಕ್ಕೆ ಫಲಿತಾಂಶ ಬಂದ ಬಳಿಕ ಅದೇ ತಿಂಗಳ ಕೊನೆಯಲ್ಲಿ ಬದಲಾವಣೆ ಎನ್ನಲಾಗಿತ್ತು. ಎಪ್ರಿಲ್ ಆರಂಭದಲ್ಲಿ ಅಮಿತ್ ಷಾ ಬರುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಂದೇ ಸುದ್ದಿ ಹಬ್ಬಿತ್ತು. ಆದರೆ ಎಪ್ರಿಲ್ ಕಳೆದು ಈಗ ಮೇನಲ್ಲಿ ಅದೇ ಕಾರಣಕ್ಕೆ ಅಮಿತ್ ಷಾ ಬಂದರೂ, ತಮ್ಮ ದಾಳ ಉರುಳಿಸಲು ಚಾಣಕ್ಯ ವಿಫಲವಾಗಿದ್ದಾರೆ.

Would have intellectuals shot if I were Home Minister: BJP MLA Basanagouda  Patil Yatnal | Karnataka News | Zee News

ಇದೀಗ ಕರ್ನಾಟಕ ರಾಜಕೀಯದ ಚೆಂಡು ದೆಹಲಿ ಅಂಗಳಕ್ಕೆ ಹೋಗಿದೆ. ನಾಯಕತ್ವ ಬದಲಾವಣೆ ಅಗತ್ಯವಿದೆಯೇ, ಸಂಪುಟ ಪುನಾರಚನೆಯಷ್ಟೇ ಸಾಕೇ ಎನ್ನುವ ಬಗ್ಗೆ ದೆಹಲಿಯಲ್ಲೇ ಸಭೆ ನಡೆಸುವುದು ಮತ್ತು ಅಲ್ಲಿಂದಲೇ ಸಂದೇಶ ರವಾನಿಸುವ ಬಗ್ಗೆ ನಿರ್ಧಾರಕ್ಕೆ ಬರಲಾಗಿದೆ. ಇದಕ್ಕಾಗಿ ರಾಜ್ಯದ ಪ್ರಮುಖ ನಾಯಕರನ್ನು ದೆಹಲಿಗೆ ಕರೆಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿದ್ದು, ಅವರು ಬಂದ ಬಳಿಕವೇ ಮೇ 9ರ ಸುಮಾರಿಗೆ ನಾಯಕತ್ವ ಬದಲಾವಣೆಯ ನಿರ್ಧಾರ ಹೊರಬೀಳಬಹುದು ಎಂದು ರೆಬಲ್ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.

ನಾಯಕತ್ವ ಬದಲಾವಣೆ ಊಹಾಪೋಹ ಅಷ್ಟೇ!  

ವಿಶೇಷ ಅಂದ್ರೆ, ಇತ್ತ ಅಮಿತ್ ಷಾ ಜೊತೆಗಿನ ಮಹತ್ವದ ಸಭೆಗಳು ರದ್ದಾಗುತ್ತಿದ್ದಂತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಬೊಮ್ಮಾಯಿ ಉತ್ತಮವಾಗಿ ಸರಕಾರ ನಡೆಸುತ್ತಿದ್ದಾರೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ. ಅದೇ ಸಂದರ್ಭದಲ್ಲಿ ಮಾಧ್ಯಮದ ಪ್ರಶ್ನೆಗುತ್ತರಿಸಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ನಾಯಕತ್ವ ಬದಲಾವಣೆ ಊಹಾಪೋಹ ಅಷ್ಟೇ. ಯಾವುದೇ ಬದಲಾವಣೆ ಇಲ್ಲ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಮಾರ್ಗದರ್ಶನದಲ್ಲಿ ಮುಂದಿನ ಬಾರಿ 150 ಸ್ಥಾನ ಗೆಲ್ಲುತ್ತೇವೆ. ನಾಯಕತ್ವ ಬದಲಾವಣೆಯ ಭ್ರಮೆ ಯಾರಿಗಾದರೂ ಇದ್ದರೆ ಅದನ್ನು ಬಿಟ್ಟುಬಿಡಿ ಎಂದು ಹೇಳಿ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಇತರ ನಾಯಕರು ಕೂಡ ಇದೇ ಮಾತನ್ನು ಹೇಳತೊಡಗಿದ್ದಾರೆ.

ಬದಲಾವಣೆ ಸುದ್ದಿಯಿಂದ ನೆಗೆಟಿವ್ ಸಂದೇಶ !

h.m Aluminium 3D Flag Bharatiya Janata Party BJP National Car Decor with  Double Side Print (Without Rod) : Amazon.in: Garden & Outdoors

ಏನಿದ್ದರೂ, ಅಮಿತ್ ಷಾ ಮತ್ತು ಬಿಎಲ್ ಸಂತೋಷ್ ಆಗಾಗ ರಾಜ್ಯಕ್ಕೆ ಬಂದು ಚುನಾವಣೆ ವರ್ಷದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳನ್ನಾಡುವುದು, ರಾಜ್ಯ ರಾಜಕೀಯದಲ್ಲಿ ಕುತೂಹಲ ಎಬ್ಬಿಸುವುದು  ಜನತೆಗೆ ನಕಾರಾತ್ಮಕ ಸಂದೇಶವನ್ನೇ ನೀಡುವಂತಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ, ಪ್ರತಿ ಬಾರಿ ನಾಯಕತ್ವ ಬದಲಾವಣೆಯೇ ಚರ್ಚೆಗೀಡಾಗುವುದು ರಾಜ್ಯ ಬಿಜೆಪಿ ನಾಯಕತ್ವ ಇಲ್ಲದೆ ಹೆಣಗುತ್ತಿದೆಯಾ ಅನ್ನುವ ಅನುಮಾನ ಮೂಡುವಂತಿದೆ. ಆಡಳಿತ ಪಕ್ಷದ ಈ ರೀತಿಯ ನಡೆಗಳು ಪ್ರತಿಪಕ್ಷಗಳಿಗೆ ಆಹಾರ ಆಗುತ್ತಿರುವುದೂ ಸುಳ್ಳಲ್ಲ. ಇದಲ್ಲದೆ, ಯಡಿಯೂರಪ್ಪ ಮತ್ತು ತಂಡವನ್ನು ಹತೋಟಿಗೆ ತೆಗೆದುಕೊಳ್ಳಬೇಕೆಂಬ ಎದುರಾಳಿ ತಂಡದ ಹಠದಲ್ಲಿ ರಾಜ್ಯಾಡಳಿತದ ಬಗ್ಗೆ ಕಾರ್ಯಕರ್ತರಲ್ಲಿಯೇ ಅಸಹನೆ ಮೂಡಲು ಕಾರಣವಾಗುತ್ತಿದೆ. ನಾಯಕತ್ವ ಬದಲಾವಣೆ ಎನ್ನುವುದನ್ನೇ ಗುಮ್ಮನಂತೆ ಇಟ್ಟುಕೊಂಡು ರಾಜ್ಯಾಡಳಿತವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಕೆಲವರು ಹವಣಿಸುತ್ತಿದ್ದಾರೆಯೇ ಎನ್ನುವ ಸಂಶಯಕ್ಕೂ ಕಾರಣವಾಗಿದೆ.

With Union Home Minister Amit Shah’s arrival in the city on Monday night, there are str­ong rumours that BJP government in Karnataka might see yet another change of gua­rd in less than a year’s time. According to sources, BJP national organising secretary BL Santhosh’ comments during a meeting of BJP leaders in Mysuru last weekend hinting at the party’s central leadership’s courage and strength to implement big changes in leadership in the states have once again spurred the buzz around the change of guard in Karnataka.