ಕಮಿಷನ್ ದಂಧೆಯ ದುಡ್ಡಲ್ಲಿ ಬೆಳ್ಳಿತಟ್ಟೆಯ ಊಟವೇ? ಕಮಿಷನ್ ದಂಧೆಯ ಪಾಲು ಪಡೆಯುವುದಕ್ಕೆ ಅಮಿತ್ ಷಾ ಬಂದ್ರಾ? ಜೆಪಿ ನಡ್ಡಾರನ್ನು ಸೈಡ್ ಲೈನ್ ಮಾಡೋದಕ್ಕೆ ಬಂದ್ರಾ..? 

04-05-22 11:18 am       Bangalore Correspondent   ಕರ್ನಾಟಕ

ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿ ಇರುವಾಗಲೇ ಕೆಪಿಸಿಸಿಯ ಐಟಿ ಘಟಕ ಬೊಮ್ಮಾಯಿ ಸರಕಾರದ ಕಮಿಷನ್ ದಂಧೆಯ ವಿಚಾರದಲ್ಲಿ ಸಾಲು ಸಾಲು ಟ್ವೀಟ್ ಮಾಡಿದೆ. ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡಿರುವುದು ಕಮಿಷನ್‌ ದಂಧೆಯಲ್ಲಿ ಪಾಲು ಪಡೆಯುವುದಕ್ಕಾ..

ಬೆಂಗಳೂರು, ಮೇ 4 : ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿ ಇರುವಾಗಲೇ ಕೆಪಿಸಿಸಿಯ ಐಟಿ ಘಟಕ ಬೊಮ್ಮಾಯಿ ಸರಕಾರದ ಕಮಿಷನ್ ದಂಧೆಯ ವಿಚಾರದಲ್ಲಿ ಸಾಲು ಸಾಲು ಟ್ವೀಟ್ ಮಾಡಿದೆ. ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡಿರುವುದು ಕಮಿಷನ್‌ ದಂಧೆಯಲ್ಲಿ ಪಾಲು ಪಡೆಯುವುದಕ್ಕಾ.. ಬೆಳ್ಳಿ ತಟ್ಟೆಯಲ್ಲಿ ಊಟ ಕೊಟ್ಟಿದ್ದು ಕಮಿಷನ್ ದುಡ್ಡಿನಲ್ಲಿಯಾ ಎಂದು ಲೇವಡಿ ಮಾಡಿದೆ. 

ಕೇಂದ್ರ ಗೃಹಸಚಿವರ ರಾಜ್ಯದ ಭೇಟಿ ಕೆಟ್ಟು ನಿಂತ ಡಬಲ್ ಇಂಜಿನ್‌ ಸರ್ಕಾರವನ್ನು ತಳ್ಳಿ ಸ್ಟಾರ್ಟ್ ಮಾಡುವುದಕ್ಕಲ್ಲ, ಬದಲಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸೈಡ್ ಲೈನ್ ಮಾಡುವುದಕ್ಕೆ! ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿ ಆಗುಹೋಗುಗಳನ್ನು ಚರ್ಚಿಸುವ ಬದಲು ಪಕ್ಷದ ಸಭೆ ಮಾಡುತ್ತಿದ್ದಾರೆ. ಅವರ ಭೇಟಿಯಿಂದ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲ" ಎಂದು ಕೆಪಿಸಿಸಿ ಐಟಿ ಘಟಕ ಟ್ವೀಟ್ ಮಾಡಿದೆ.

The rise of JP Nadda

"ಅಮಿತ್ ಶಾ ಅವರೇ, ಪ್ರಧಾನಿ ಕಚೇರಿಗೆ ಗುತ್ತಿಗೆದಾರರು ಬರೆದ ಪತ್ರ ತಲುಪಿದವೇ? ನಿಮ್ಮ ಬಿಜೆಪಿ ಸರ್ಕಾರ 40% ಕಮಿಶನ್ ಹಗರಣದಲ್ಲಿ ಮಿಂದೇಳುತ್ತಿದೆ, ಈ ಬಗ್ಗೆ ತನಿಖೆ ಮಾಡುವುದಿಲ್ಲವೇ?. ನಿಮ್ಮ ಈಶ್ವರಪ್ಪನವರು ಒಂದು ಜೀವ ಬಲಿ ಪಡೆದಿದ್ದಾರೆ, ಅವರ ಬಂಧನ ಆಗದಿರುವುದೇಕೆ ಎಂದು ಉತ್ತರಿಸುವಿರಾ? ಅಥವಾ 40% ನಲ್ಲಿ ಪಾಲು ಪಡೆಯಲು ಬಂದಿರುವಿರಾ?' ಎಂದು ಕೆಪಿಸಿಸಿ ಪ್ರಶ್ನಿಸಿದೆ. 

Karnataka Minister Eshwarappa Forced To Resign After 40% Kickback  Allegations By Contractor Before Dying With Suicide

"ಪ್ರತಿ ಸರ್ಕಾರಿ ನೇಮಕಾತಿ, ಪ್ರತಿ ಸರ್ಕಾರಿ ವರ್ಗಾವಣೆಯಲ್ಲಿ, ಪ್ರತಿ ಸರ್ಕಾರಿ ಗುತ್ತಿಗೆಯಲ್ಲಿ 40% ಕಮಿಷನ್ ಪಡೆದು, ಇಡೀ ರಾಜ್ಯವನ್ನ ಲೂಟಿ ಮಾಡಿ, ರಾಜ್ಯದ ಸಂಪನ್ಮೂಲಗಳನ್ನ ಗುಡಿಸಿ ಗುಂಡಾಂತರ ಮಾಡಿದ ಆದಾಯದಲ್ಲಿ ಬೆಳ್ಳಿ ತಟ್ಟೆಯಲ್ಲಿ ಭೋಜನ ಸವಿಯುವವರಿಗೆ, ಭಾರತ ಹಸಿವು ಸೂಚಂಕ್ಯದಲ್ಲಿ 117ನೇ ಸ್ಥಾನಕ್ಕೆ ಕುಸಿದಿರೋದು ಕಾಣೋದು ಹೇಗೆ?" ಎಂದು ಕೆಪಿಸಿಸಿ ಲೇವಡಿ ಮಾಡಿದೆ.

Conspiracy being hatched to unseat Yediyurappa, alleges rebel BJP MLA Yatnal  - Oneindia News

"ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಅವರ ಮುನ್ಸೂಚನೆ ನಿಜವೇ @BJP4Karnataka? ನಿಜವಲ್ಲ ಎಂದಾದರೆ, ಇತರ ಪಕ್ಷಗಳ ನಾಯಕರಿಗೆ ನೋಟಿಸ್ ಸಲಹೆ ಕೊಡುವ ತಾವು ಯತ್ನಾಳ್ ಅವರಿಗೆ ನೋಟಿಸ್ ಏಕೆ ನೀಡಿಲ್ಲ? ಬಿಜೆಪಿ ನಾಯಕತ್ವವಿಲ್ಲದೆ ಒದ್ದಾಡುವ ಸ್ಥಿತಿ ಬಂದಿದೆ, ಅದೆಷ್ಟೇ ಬದಲಾವಣೆಯ ಸರ್ಕಸ್ ಮಾಡಿದರೂ ನಾಯಕತ್ವ ಸೃಷ್ಟಿಸಲು ಸಾಧ್ಯವಿಲ್ಲ" ಎಂದು ಕೆಪಿಸಿಸಿ ಆಪಾದಿಸಿದೆ.

ಕರ್ನಾಟಕದಲ್ಲಿ ಬೊಮ್ಮಾಯಿಯವರ 40% ಕಮಿಷನ್ ಸರ್ಕಾರ ಭ್ರಷ್ಟಾಚಾರದ ಉತ್ತುಂಗಕ್ಕೆ ತಲುಪಿದೆ, ಪ್ರತಿ ಇಲಾಖೆಯಲ್ಲೂ 'ಕಮಿಷನ್' ಸಾಮಾನ್ಯ ಸಂಗತಿಯಾಗಿದೆ.

PSI ನೇಮಕಾತಿ ಅಕ್ರಮದಲ್ಲಿ ಗೃಹಸಚಿವರ ಪಾತ್ರವೂ ಹೊರಬರುತ್ತಿದೆ, ಹೀಗಿದ್ದೂ ಅವರನ್ನು ಹುದ್ದೆಯಲ್ಲಿ ಮುಂದುವರೆಸುವ ಮೂಲಕ ಭ್ರಷ್ಟರ ರಕ್ಷಣೆ ಮಾಡಲಾಗುತ್ತಿದೆ.
-@rssurjewala pic.twitter.com/70DYSEPFPG

— Karnataka Congress (@INCKarnataka) May 3, 2022

40% ಬಿಜೆಪಿಯ ಹಗರಣಗಳ ಸಾಲಿಗೆ ಮತ್ತೊಂದು ಅಕ್ರಮ ಸೇರ್ಪಡೆಯಾಗಿದೆ.

ರಮೇಶ್ ಜಾರಕಿಹೊಳಿಯವರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪೆನಿ ಹೆಸರಲ್ಲಿ ನಡೆಯುತ್ತಿರುವ 600 ಕೋಟಿ ವಂಚನೆಗೆ ಇಡೀ ಸರ್ಕಾರವೇ ಬೆಂಬಲವಾಗಿ ನಿಂತಿದೆ.

ಅವರ ಸಾಲವನ್ನು NPA ಎಂದು ಪರಿಗಣಿಸುವಲ್ಲಿ ರಾಜ್ಯ ಸರ್ಕಾರ ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ಸಹಬಾಗಿತ್ವವೂ ಇದೆ. pic.twitter.com/3pL43FQ4Zs

— Karnataka Congress (@INCKarnataka) May 3, 2022

Kpcc slams Amith Shah on Twitter twrleets if he has come to take commission.