ನೀವು ಭಾರತದ ಅನ್ನ ತಿನ್ನುತ್ತೀರಿ, ದೇಶದ್ರೋಹಿ ಘೋಷಣೆ ಹಾಕ್ತೀರಿ, ಸಿಎಂ ಬೊಮ್ಮಾಯಿ ಗಂಡಸ್ತನ ತೋರಿಸಿ, ಕೌಲಂದೆ ಚಲೋಗೆ ಅವಕಾಶ ಕೊಡಬೇಡಿ ! 

05-05-22 04:09 pm       HK Desk News   ಕರ್ನಾಟಕ

ಮೈಸೂರು ತಾಲೂಕಿನಲ್ಲಿ ಕೌಲಂದೆ ಛೋಟಾ ಪಾಕಿಸ್ತಾನ ಅಂತಾ ಕೆಲವರು ಘೋಷಣೆ ಹಾಕಿದ್ದಾರೆ. ನೀವು ಭಾರತದ ಅನ್ನ ತಿನ್ನುತ್ತೀರಿ, ದೇಶದ್ರೋಹಿ ಘೋಷಣೆ ಹಾಕ್ತೀರಿ. ಸರ್ಕಾರ ತಕ್ಷಣವೇ ಅವರನ್ನ ಒದ್ದು ಒಳಗೆ ಹಾಕಬೇಕು.

ಬೆಳಗಾವಿ, ಮೇ 5 :  ಮೈಸೂರು ತಾಲೂಕಿನಲ್ಲಿ ಕೌಲಂದೆ ಛೋಟಾ ಪಾಕಿಸ್ತಾನ ಅಂತಾ ಕೆಲವರು ಘೋಷಣೆ ಹಾಕಿದ್ದಾರೆ. ನೀವು ಭಾರತದ ಅನ್ನ ತಿನ್ನುತ್ತೀರಿ, ದೇಶದ್ರೋಹಿ ಘೋಷಣೆ ಹಾಕ್ತೀರಿ. ಸರ್ಕಾರ ತಕ್ಷಣವೇ ಅವರನ್ನ ಒದ್ದು ಒಳಗೆ ಹಾಕಬೇಕು. ಇಲ್ಲವಾದ್ರೆ ಶ್ರೀರಾಮ ಸೇನೆ ಕೌಲಂದೆ ಚಲೋ ನಡೆಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಮಾಧ್ಯಮಕ್ಕೆ ಮಾತನಾಡಿದ ಮುತಾಲಿಕ್, ಹಲವಾರು ವರ್ಷಗಳಿಂದ ಆಜಾನ್ ಮೈಕಿನ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ಆಜ್ಞೆ ಉಲ್ಲಂಘನೆ ಆಗುತ್ತಿದ್ದು ನಾವು ತಹಸೀಲ್ದಾರ್, ಡಿಸಿ ಅವರಿಗೆ ಮೇ 1ರ ಗಡುವು ಕೊಟ್ಟಿದ್ದೆವು. ಆದ್ರು ಬರೀ ನೋಟಿಸ್ ಕೊಟ್ಟಿದ್ದಾರೆ ಹೊರತು ಆಜಾನ್ ನಿಲ್ಲಿಸಿಲ್ಲ. ಮೇ 9ರಂದು ಒಂದು ಸಾವಿರಕ್ಕೂ ಹೆಚ್ಚು ದೇವಸ್ಥಾನದಲ್ಲಿ ಬೆಳಗ್ಗೆ 5.30 ಗಂಟೆಗೆ ಸುಪ್ರಭಾತ, ಹನುಮಾನ್ ಚಾಲಿಸಾ ಅಭಿಯಾನ ಆರಂಭಿಸುತ್ತಿದ್ದೇವೆ. ಸಮಾಜದಲ್ಲಿ ಬೇರು ಬಿಟ್ಟಿರುವ ಮುಸ್ಲಿಂ ಮಾನಸಿಕತೆ ಹೋಗಬೇಕಿದೆ. ನೀವು ನಮ್ಮ ಹೋರಾಟದ ವಿರುದ್ಧ ಕ್ರಮಕ್ಕೆ ಮುಂದಾದ್ರೆ ಸಂಘರ್ಷ ಆಗಲಿದೆ ಎಂದು ಹೇಳಿದ್ದಾರೆ. 

Azaan Row: Karnataka Muslim clerics say will control loudspeaker sound,  follow SC directions

ನಮ್ಮ‌ ಹೋರಾಟ ಆಜಾನ್ ವಿರುದ್ಧ ಅಲ್ಲ, ಮೈಕಿನ ಧ್ವನಿಯಿಂದ ಆಗುತ್ತಿರುವ ಶಬ್ಧಮಾಲಿನ್ಯದ ವಿರುದ್ಧ ಅಷ್ಟೇ. ಹೇಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಜಾನ್ ಕೂಗುವ ಮೈಕ್ ಮೇಲೆ ಕ್ರಮ ಕೈಗೊಂಡರೋ ಅದೇ ರೀತಿ ಕ್ರಮ ಜರುಗಿಸಬೇಕು. ಮುಖ್ಯಮಂತ್ರಿಗಳೇ ಧೈರ್ಯ ತೋರಿಸಿ ಹೊರತು ಹೆದರಬೇಡಿ.‌ ಮುಂದಿನ ಬಾರಿ 150 ಸೀಟು ಬೇಕಂದ್ರೆ ಧೈರ್ಯ ತೋರಿಸಬೇಕು. ಯೋಗಿ ಅವರಂತೆ ಮುಖ್ಯಮಂತ್ರಿ ಬೊಮ್ಮಾಯಿ ಗಂಡಸ್ಥನ ತೋರಿಸಬೇಕು ಎಂದು ಮುತಾಲಿಕ್ ಹೇಳಿದರು. 

Karnataka CM Basavaraj Bommai finally allocates cabinet portfolios - The  Economic Times

Uttar Pradesh: Yogi Adityanath to make night stay in Bundelkhand for Har  Ghar Nal Yojana's spot inspection | Lucknow News - Times of India

ಎಂಡಿಎಫ್ ಬಗ್ಗೆ ತನಿಖೆ ನಡೆಸಿ 

ಮಂಗಳೂರಿನಲ್ಲಿ ಎಂಡಿಎಫ್ ಸಂಘಟನೆ ಸಕ್ರಿಯವಾಗಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ನನಗೆ ಮಾಧ್ಯಮಗಳ ಮೂಲಕ  ಗೊತ್ತಾಗಿದೆ. ಮುಸ್ಲಿಂ ಡಿಫೆನ್ಸ್ ಫೋರ್ಸ್ ಅಂತಾ ಮಾಡಿದ್ದಾರೆ. ಅದರಿಂದ ಖಟ್ಟರ್ ಮುಸ್ಲಿಮರನ್ನು ತಯಾರು ಮಾಡುವ ಪ್ರಕ್ರಿಯೆ ಆಗ್ತಾ ಇದೆ. ಒತ್ತಾಯದ ಮೂಲಕ ಮಾಡುವ ಮೂಲಭೂತವಾದಿಗಳ ತಯಾರಿಸುವ ಮಾಹಿತಿ ಇದೆ. ಪಿಎಫ್ಐ, ಸಿಎಫ್‌ಐ, ಎಸ್‌ಡಿಪಿಐ, ಎಐಎಂಐಎಂ ಸಂಘಟನೆಗಳ ಜೊತೆ ಎಂಡಿಎಫ್ ಸಂಘಟನೆ ಹುಟ್ಟುಹಾಕಿದ್ದಾರೆ. ಈ ಎಲ್ಲಾ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿಟ್ಟು ಕ್ರಮ ಕೈಗೊಳ್ಳಬೇಕು. ಎಂಡಿಎಫ್ ಚಟುವಟಿಕೆ ಗಮನಿಸಿ ಸರ್ಕಾರ ಹದ್ದುಬಸ್ತಿನಲ್ಲಿಡ‌ಬೇಕು.

ಎಂಡಿಎಫ್ ಚಿಹ್ನೆ, ಮೆಸೇಜ್ ನೋಡಿದ್ರೆ ಅಲ್‌ಖೈದಾ ಮಾದರಿ ವರ್ತನೆ, ಲಕ್ಷಣಗಳು ಕಾಣುತ್ತಿವೆ. ಈಗ ಹೊಸದಾಗಿ ಹುಟ್ಟು ಹಾಕಿದ್ದಾರೋ ಮೊದಲು ಇತ್ತೋ ಎಂಬ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

We have been fighting Azan Mike for many years. The Supreme Court order is being violated and we gave Tehsildar, DC a deadline of May 1. Azan does not stop, except that he has only issued notice.