ಬ್ರೇಕಿಂಗ್ ನ್ಯೂಸ್
06-05-22 10:14 am HK Desk News ಕರ್ನಾಟಕ
ಪುತ್ತೂರು, ಮೇ 5 : ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಪೇರಡ್ಕ ಎಂಬಲ್ಲಿ ಕ್ರೈಸ್ತರ ಪ್ರಾರ್ಥನಾ ಕೇಂದ್ರಕ್ಕೆ ನುಗ್ಗಿದ ಕಿಡಿಗೇಡಿಗಳು ಶಿಲುಬೆಯ ಜಾಗದಲ್ಲಿ ಕೇಸರಿ ಧ್ವಜ ನೆಟ್ಟು ಪ್ರಾರ್ಥನಾ ಕೇಂದ್ರದೊಳಗೆ ಹನುಮಾನ್ ಫೋಟೊ ಇಟ್ಟಿರುವ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಾನಿಗೊಳಗಾದ ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್, ಪೇರಡ್ಕ ಇದರ ಫಾದರ್ ಜೋಸ್ ವರ್ಗಿಸ್ ಕಡಬ ಠಾಣೆಗೆ ದೂರು ನೀಡಿದ್ದಾರೆ. ಮೇ 1 ರಂದು ರಾತ್ರಿ 10 ಗಂಟೆಯಿಂದ 12 ಗಂಟೆ ಸಮಯಕ್ಕೆ ಕಿಡಿಗೇಡಿಗಳು ಕೃತ್ಯ ನಡೆಸಿದ್ದು ಚರ್ಚ್ ಕಟ್ಟಡದ ಬಾಗಿಲನ್ನು ಒಡೆದು ನುಗ್ಗಿದ್ದು ಅಲ್ಲಿ ಕೇಸರಿ ಧ್ವಜವನ್ನು ಅಳವಡಿಸಿದ್ದಾರೆ. ಅಲ್ಲದೆ, ಕಟ್ಟಡದ ಒಳಭಾಗದಲ್ಲಿದ್ದ ಹನುಮಂತನ ಫೋಟೋವನ್ನು ಇರಿಸಿದ್ದಾರೆ. ಅಲ್ಲದೆ, ಚರ್ಚ್ ಒಳಭಾಗದಲ್ಲಿ ವಿದ್ಯುತ್ ಸಂಪರ್ಕದ ಉದ್ದೇಶಕ್ಕೆ ಅಳವಡಿಸಿದ ಮೀಟರ್‌ನ್ನು ಕಿತ್ತುಕೊಂಡು ಹೋಗಿ, ಕಪಾಟನ್ನು ಒಡೆದು ಹಾಕಿದ್ದಾರೆ.
ಚರ್ಚ್ ನಲ್ಲಿ ನೀರಾವರಿ ಉದ್ದೇಶಕ್ಕಾಗಿ ತೆರೆದ ಬಾವಿಗೆ ಅಳವಡಿಸಿಕೊಂಡಿದ್ದ ನೀರಿನ ಪಂಪ್ ಮತ್ತು ಪೈಪ್‌ಗಳನ್ನು ಕಿಡಿಗೇಡಿಗಳು ಕಿತ್ತುಕೊಂಡು ಹೋಗಿದ್ದಾರೆ. ಮೇ 4ರಂದು ರಾತ್ರಿ ಕಟ್ಟಡಕ್ಕೆ ಅಳವಡಿಸಿದ್ದ ವಿದ್ಯುತ್ ಕಂಬದ ಸರ್ವಿಸ್ ವಯರ್‌ಗಳನ್ನು ಕಟ್ ಮಾಡಿ ಮೀಟರ್ ಬಾಕ್ಸ್ ಕೂಡ ಕಿತ್ತೊಯ್ದಿದ್ದಾರೆ. ಸದ್ರಿ ಚರ್ಚ್ ಕಟ್ಟಡಕ್ಕೆ ಕಳೆದ 30 ವರ್ಷಗಳ ಹಿಂದಿನಿಂದಲೂ ಕಟ್ಟಡ ತೆರಿಗೆ ಪಾವತಿಸಿಕೊಂಡು ಬಂದಿದ್ದು ಕಟ್ಟಡ ನಂಬ್ರ:1/107 ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್ ಪೇರಡ್ಕ ಕ್ರೈಸ್ತ ಪ್ರಾರ್ಥನಾ ಮಂದಿರವಾಗಿರುತ್ತದೆ ಎಂದು ಫಾದರ್ ದೂರಿನಲ್ಲಿ ತಿಳಿಸಿದ್ದಾರೆ.
ಅಕ್ರಮ ಕಟ್ಟಡ; ಹಿಂದು ಸಂಘಟನೆಗಳ ಆಕ್ಷೇಪ
ಆದರೆ, ಹಿಂದು ಸಂಘಟನೆಗಳು ಸದ್ರಿ ದೂರನ್ನು ವಿರೋಧಿಸಿದ್ದು ವಿಶ್ವನಾಥ ಗೌಡ ಎಂಬವರಿಗೆ ಸೇರಿದ ಖಾಸಗಿ ಜಾಗವಾಗಿರುತ್ತದೆ. ಸದ್ರಿ ಕಟ್ಟಡವನ್ನು ಬಾಡಿಗೆ ಕೊಟ್ಟಿದ್ದು ಅದರ ಆರ್ ಟಿಸಿ ದಾಖಲೆಗಳು ಇವರ ಬಳಿಯಲ್ಲೇ ಇದೆ. 18 ವರ್ಷಗಳಿಂದ ಕೇರಳದ ಕ್ರಿಸ್ತಿಯನ್ ಕುಟುಂಬಕ್ಕೆ ಬಾಡಿಗೆ ಕೊಟ್ಟಿದ್ದಾರೆ. ಆದರೆ ಈಗ ಕಟ್ಟಡ ಇರುವ ಜಾಗದಲ್ಲಿ ಚರ್ಚ್ ಕಟ್ಟಲು ಮುಂದಾಗಿದ್ದಾರೆ. ಇಲ್ಲಿ ಹಿಂದು ವ್ಯಕ್ತಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಅಕ್ರಮ ಕಟ್ಟಡದ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಬೇಕು. ಇಲ್ಲಿ ಕೇಸರಿ ಧ್ವಜ ಹಾಕಿದ್ದರಲ್ಲಿ ನಮ್ಮ ಕೈವಾಡ ಇರುವುದಿಲ್ಲ. ಬೇಕೆಂದೇ ವಿವಾದ ಎಬ್ಬಿಸಲು ಈ ರೀತಿ ಮಾಡಿದ್ದಾರೆ. ಶಿಲುಬೆಗೆ ಹಾನಿಯನ್ನೂ ಮಾಡಿಲ್ಲ ಎಂದು ಹಿಂದು ಸಂಘಟನೆ ಮುಖಂಡ ಮುರಲಿಕೃಷ್ಣ ಹಸಂತಡ್ಕ ಹೇಳಿದ್ದಾರೆ.
Kadaba police have registered a case after a priest of a prayer center lodged a complaint that miscreants broke open the door of a church and destroyed a cross and placed a saffron flag in Peradka.In the complaint, priest Fr Jose Varghese of Assembly of God Peradka church that the miscreants illegally entered the centre on May 1 at midnight and also placed a portrait of Hanuman.
06-02-25 07:55 pm
Bangalore Correspondent
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
Santosh Lad, PM Modi: ಪ್ರಧಾನಿ ಮೋದಿ ಒಬ್ಬ ಮನುಷ್...
05-02-25 04:44 pm
ಮೈಕ್ರೋ ಫೈನಾನ್ಸ್ ಕಿರುಕುಳ ; ರಾಜ್ಯದಲ್ಲಿ ಒಂದೇ ದಿನ...
05-02-25 12:29 pm
Haveri Nurse, Feviquick; ಬಾಲಕನ ಕೆನ್ನೆಯ ಗಾಯಕ್ಕ...
04-02-25 11:32 pm
06-02-25 05:37 pm
HK News Desk
ಅಮೆರಿಕದಲ್ಲಿ ಅಕ್ರಮ ವಲಸಿಗರ ಗಡೀಪಾರು ; ಪ್ರಧಾನಿ ಮೋ...
06-02-25 02:21 pm
Kerala Suicide, Ragging: ಕೇರಳದಲ್ಲಿ 15ರ ಬಾಲಕ ಮ...
04-02-25 10:49 pm
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
06-02-25 10:16 pm
Mangalore Correspondent
Prasad Attavar, Saloon Attack, Mangalore: ಮಸಾ...
05-02-25 10:51 pm
SKG Bank robbery, Kinnigoli, Kotekar Robbery,...
05-02-25 10:43 pm
Musical program Swara Sanidhya, Mangalore; ಫೆ...
05-02-25 07:32 pm
Puttur News, Demolish, Ashok Rai: ಬಿಜೆಪಿ ಮುಖಂ...
05-02-25 06:46 pm
06-02-25 09:32 pm
HK News Desk
Kalaburagi, Reels,weapons, Crime: ಕಲಬುರಗಿ ; ಶ...
06-02-25 04:35 pm
Raichur Rape, Crime: ರಾಯಚೂರಿನಲ್ಲಿ ಎರಡನೇ ಕ್ಲಾಸ...
06-02-25 12:00 pm
Bangalore crime, Illicit affair: ಶೀಲ ಶಂಕಿಸಿ ನ...
05-02-25 04:29 pm
Ullal Police Station, Mangalore, Crime: ಪಿಎಸ್...
03-02-25 05:46 pm