ಬ್ರೇಕಿಂಗ್ ನ್ಯೂಸ್
06-05-22 06:08 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 6 : ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಆಯ್ಕೆಯಾಗಿದ್ದ ಒಂದೇ ಗ್ರಾಮದ ಮೂವರು ಯುವಕರು ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಆರೋಪಿಗಳಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಬೆಂಗಳೂರು ಹೊರವಲಯದ ಕಗ್ಗಲೀಪುರ ಸಮೀಪದ ಚಿನ್ನಕುರ್ತಿ ಗ್ರಾಮದ ಸಿ.ಜಿ.ರಾಘವೇಂದ್ರ, ಸಿ.ಎಂ.ನಾಗರಾಜ್ ಹಾಗೂ ಆತನ ಸೋದರ ಸಿ.ಎಂ.ನಾರಾಯಣ ಎಂಬ ಮೂವರು ಅಭ್ಯರ್ಥಿಗಳ ವಿರುದ್ಧ ಅಕ್ರಮ ಆರೋಪ ಕೇಳಿಬಂದಿದ್ದು, ಈ ಪೈಕಿ ರಾಘವೇಂದ್ರ ಹಾಗೂ ನಾಗರಾಜ ಸಿಐಡಿಗೆ ಸೆರೆ ಸಿಕ್ಕಿದ್ದಾರೆ. ನಾರಾಯಣ ತಪ್ಪಿಸಿಕೊಂಡಿದ್ದು ಪೊಲೀಸರು ಜಾಲ ಬೀಸಿದ್ದಾರೆ.
ಈ ಮೂವರು ಕೂಡ ಬೆಂಗಳೂರಿನಲ್ಲಿ ಪಿಎಸ್ಐ ಹುದ್ದೆಗೆ ಮೂವರು ಪರೀಕ್ಷೆ ಬರೆದಿದ್ದರು. ಇದರಲ್ಲಿ ಸಾಮಾನ್ಯ ವರ್ಗದಲ್ಲಿ ಸಿ.ಎಂ. ನಾರಾಯಣ ರಾಜ್ಯಕ್ಕೆ 9ನೇ ರ್ಯಾಂಕ್ ( ಅಂಕಗಳು 157.5), ಆತನ ಸೋದರ ಸಿ.ಎಂ.ನಾಗರಾಜ್ 11ನೇ ರ್ಯಾಂಕ್ (ಅಂಕಗಳು 157) ಹಾಗೂ ರಾಘವೇಂದ್ರ 62ನೇ ರ್ಯಾಂಕ್ (ಅಂಕಗಳು 144) ಪಡೆದಿದ್ದರು. ಮೂವರು ಕೂಡ ಮೊದಲ ಪತ್ರಿಕೆಯಲ್ಲಿ ಕಡಿಮೆ ಅಂಕ ಗಳಿಸಿದ್ದು ಎರಡನೇ ಪತ್ರಿಕೆಯಲ್ಲಿ ಹೆಚ್ಚಿನ ಅಂಕ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿತ್ತು.
ನಾರಾಯಣನಿಗೆ ಮೊದಲ ಪತ್ರಿಕೆಯಲ್ಲಿ 24, ಎರಡನೇ ಪತ್ರಿಕೆಯಲ್ಲಿ 133.5 ಅಂಕಗಳು, ನಾಗರಾಜ್‌ಗೆ ಮೊದಲ ಪತ್ರಿಕೆಯಲ್ಲಿ 31 ಹಾಗೂ ಎರಡನೇ ಪತ್ರಿಕೆಯಲ್ಲಿ 126 ಅಂಕ ಹಾಗೂ ರಾಘವೇಂದ್ರನಿಗೆ ಮೊದಲ ಪತ್ರಿಕೆಯಲ್ಲಿ 18 ಹಾಗೂ ಎರಡನೇ ಪತ್ರಿಕೆಯಲ್ಲಿ 126 ಅಂಕಗಳು ಬಂದಿದ್ದವು. ಒಂದೇ ಗ್ರಾಮದ ಮೂವರು ಒಂದೇ ರೀತಿ ಆಯ್ಕೆಯಾಗಿದ್ದು ಅಚ್ಚರಿಯಾಗಿತ್ತು. ಹೀಗಾಗಿ ಸಿಐಡಿ ಅಧಿಕಾರಿಗಳು ಸಂಶಯದ ನೆಲೆಯಲ್ಲಿ ತನಿಖೆ ನಡೆಸಿದಾಗ, ಅಕ್ರಮ ನಡೆಸಿರುವುದು ಕಂಡುಬಂದಿದೆ.
ಎಡಿಜಿಪಿ ಸಹಾಯಕ, ಇಬ್ಬರು ಇನ್ಸ್‌ಪೆಕ್ಟರ್‌ಗಳಿಗೆ ಡ್ರಿಲ್ !
ಇದೇ ವೇಳೆ, ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಧಿಕಾರಿಯ ಆಪ್ತ ಸಹಾಯಕ ಹಾಗೂ ಇಬ್ಬರು ಇನ್ಸ್‌ಪೆಕ್ಟರ್‌ಗಳನ್ನು ಸಿಐಡಿ ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ. ಎಡಿಜಿಪಿ ಅಮೃತ್ ಪಾಲ್ ಅವರ ಆಪ್ತ ಸಹಾಯಕನೊಬ್ಬ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಆರಂಭದ ದಿನದಿಂದಲೂ ಜೊತೆಗೇ ಕಾರ್ಯ ನಿರ್ವಹಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಆಪ್ತ ಸಹಾಯಕನನನ್ನು ಸಿಐಡಿ ವಿಚಾರಣೆಗೊಳಪಡಿಸಿದೆ. ಅದೇ ರೀತಿ ಪರೀಕ್ಷೆ ನಿರ್ವಹಣೆ ಹೊತ್ತಿದ್ದ ಇಬ್ಬರು ಇನ್ಸ್‌ಪೆಕ್ಟರ್‌ಗಳಿಗೆ ಸಹ ತನಿಖೆ ಬಿಸಿ ತಟ್ಟಿದೆ.
ಆರ್.ಡಿ ಪಾಟೀಲ - ಸಿಪಿಐ ನಡುವೆ 2 ಕೋಟಿ ಡೀಲ್ !
ಪಿಎಸ್ಐ ಪರೀಕ್ಷೆ ಅಕ್ರಮದ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಬಂಧಿತ ಸಿಪಿಐ ಆನಂದ ಮೇತ್ರೆ ಹಾಗೂ ಕಿಂಗ್‌ಪಿನ್ ಆರ್.ಡಿ. ಪಾಟೀಲ ನಡುವೆ 2 ಕೋಟಿ ರೂಪಾಯಿ ಒಪ್ಪಂದ ನಡೆದಿತ್ತು. ಅದರಂತೆ ಆರ್.ಡಿ. ಪಾಟೀಲಗೆ ಮೇತ್ರಿ 25 ಲಕ್ಷ ನೀಡೋದು ಬಾಕಿ ಇತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಬೆಳೆದಿತ್ತು ಎಂಬ ವಿಚಾರ ಬಹಿರಂಗವಾಗಿದೆ.
Interesting facts have emerged that three candidates from the same city who had been selected for the Police Sub Inspector Recruitment Exam (REC) have now been convicted of illegal examinations.CG Raghavendra, CM Nagaraj and his brother CM Narayana of Chinnakurthi village near Kaggalipura on the outskirts of Bengaluru have come under investigation and are among those arrested. The investigation into the missing Narayana detective is underway.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm