ಡಿಕೆಶಿ ಮತ್ತು 40 ಡೀಲುಗಳು ! ನಿಮ್ಮ ಅವ್ಯವಹಾರಗಳು ದೊಡ್ಡ ದೊಡ್ಡ ಬ್ಯಾರಲ್ ನಲ್ಲಿ ಅಡಗಿಕೊಂಡಿವೆ ; ಬಿಜೆಪಿ ಸರಣಿ ಟ್ವೀಟ್ ದಾಳಿ 

06-05-22 08:04 pm       Bangalore Correspondent   ಕರ್ನಾಟಕ

ಕೆಪಿಸಿಸಿ ಅಧ‍್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಟ್ವಿಟರ್ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, 'ಡಿಕೆಶಿ ಮತ್ತು 40 ಡೀಲುಗಳು!' ಎಂದು ಸರಣಿ ಟ್ವೀಟ್ ಮಾಡಿದೆ. 'ಡೀಲ್ ಡಿಕೆ ಮನೆ ಮೇಲೆ ಐಟಿ ದಾಳಿ ನಡೆದಾಗ 317 ಬ್ಯಾಂಕ್ ಖಾತೆಗಳು ಪತ್ತೆಯಾದವು.

ಬೆಂಗಳೂರು, ಮೇ 6 : ಕೆಪಿಸಿಸಿ ಅಧ‍್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಟ್ವಿಟರ್ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, 'ಡಿಕೆಶಿ ಮತ್ತು 40 ಡೀಲುಗಳು!' ಎಂದು ಸರಣಿ ಟ್ವೀಟ್ ಮಾಡಿದೆ. 'ಡೀಲ್ ಡಿಕೆ ಮನೆ ಮೇಲೆ ಐಟಿ ದಾಳಿ ನಡೆದಾಗ 317 ಬ್ಯಾಂಕ್ ಖಾತೆಗಳು ಪತ್ತೆಯಾದವು. ಇವುಗಳೇನು #DealDK ಕುಟುಂಬದ ಜನ್ ಧನ್ ಖಾತೆಯಾಗಿರಲಿಲ್ಲ, 200 ಕೋಟಿಗೂ ಅಧಿಕ ಬೇನಾಮಿ ಆಸ್ತಿಯ ಕಳ್ಳಗಂಟಿನ ಖಾತೆಯಾಗಿತ್ತು. ಇದೆಲ್ಲವೂ ದೊಡ್ಡಾಲಹಳ್ಳಿ ಕೆಂಪೇಗೌಡರ ಮಗನ ಪಿತ್ರಾರ್ಜಿತ ಆಸ್ತಿ ಆಗಿರಲು ಹೇಗೆ ಸಾಧ್ಯ?' ಎಂದು ಟೀಕಿಸಿದೆ.

'ಡಿ.ಕೆ.ಶಿವಕುಮಾರ್ ಅವರೇ ನೀವು ಮಾಡಿದ ಹಗರಣ, ಡೀಲು ಹಾಗೂ ಇನ್ನಿತರ ಅವ್ಯವಹಾರಗಳು ದೊಡ್ಡ ದೊಡ್ಡ ಬ್ಯಾರಲ್‌ನಲ್ಲಿ ಅಡಗಿಕೊಂಡಿವೆ. ಪೊಲೀಸರ ತನಿಖೆ ಕಾದ ಎಣ್ಣೆ ಸುರಿದಂತೆ ಆಗುತ್ತಿದೆಯೇ? ದೆಹಲಿಯ ಅಪಾರ್ಟ್‌ಮೆಂಟನ್ನು ಅಕ್ರಮ ಹಣ ಸಂಗ್ರಹದ ಗೋದಾಮು ಮಾಡಿಕೊಂಡದ್ದನ್ನು ರಾಜ್ಯದ ಜನೆ ಮರೆತಿಲ್ಲ ಎಂದು ಬಿಜೆಪಿ ಕುಟುಕಿದೆ. 

Hubolt watch row settled, no use flogging a dead horse: Siddaramaiah

ಸಿದ್ದರಾಮಯ್ಯ ಸರ್ಕಾರದಲ್ಲಿ ತಡವಾಗಿ ಸಂಪುಟ ಸೇರಿದ ಡಿಕೆಶಿ ಭ್ರಷ್ಟಾಚಾರ ಎಸಗಬಹುದೆಂಬ ಸೂಚನೆ ಇತ್ತು. ಅದಕ್ಕಾಗಿಯೇ ಶಾಂತಿ ನಗರ ಹೌಸಿಂಗ್ ಸಹಕಾರ ಸಂಘದ ಅವ್ಯವಹಾರದ ಕಡತವನ್ನು ಸಿದ್ದರಾಮಯ್ಯ ಭದ್ರವಾಗಿಟ್ಟುಕೊಂಡಿದ್ದರು. ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರದ ಕಲೆ ಕಾಂಗ್ರೆಸ್‌ ನಾಯಕರಿಗೂ ಹಿಡಿಸುತ್ತಿರಲಿಲ್ಲ ಎಂಬುದು ನಿಜವಲ್ವೇ?' ಎಂದು ಪ್ರಶ್ನಿಸಿದೆ. 

'ಡಿಕೆಶಿ ಇಂಧನ ಸಚಿವರಾಗಿದ್ದಾಗ ಸೋಲಾರ್ ಗೋಲ್ ಮಾಲ್ ನಡೆದಿತ್ತು. ಬೆಳಗಾವಿಯಲ್ಲಿ ಹೊಡೆದ ಒಂದು ಕುಕ್ಕರ್ ವಿಷಲ್‌ಗೆ 50 ಎಕರೆ ಸೋಲಾರ್ ಪ್ಲ್ಯಾಂಟ್ ಮಂಜೂರುಗೊಂಡದ್ದು ಸುಳ್ಳೇ? ಇದರಿಂದ ಯಾರಿಗೆ ʼಲಕ್ಷ್ಮಿ ಕೃಪೆʼಯಾಯಿತು?' ಎಂದು ಬಿಜೆಪಿ ಟ್ವೀಟ್ ಮಾಡಿ ಪ್ರಶ್ನಿಸಿದೆ.  

'ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಡಿಕೆಶಿ ವಿರುದ್ಧ 200 ದೂರುಗಳು ಜಾರಿ ನಿರ್ದೇಶನಾಲಯ ಸಂಸ್ಥೆಯಲ್ಲಿ ದಾಖಲಾಗಿದ್ದವು. ಸತ್ಯ ಹರಿಶ್ಚಂದ್ರನ ಎರಡನೇ ಅವತಾರದಂತೆ ವರ್ತಿಸುವ ಡಿ.ಕೆ.ಶಿವಕುಮಾರ್ ಅವರೇ, ಈ ದೂರುಗಳೆಲ್ಲಾ ಸುಖಾಸುಮ್ಮನೆ ದಾಖಲಾಗಿದ್ದೇ? ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಪುತ್ರಿಯ ಖಾತೆಗೂ ಹಣ ವರ್ಗಾವಣೆಯಾಗಿದ್ದು ಸುಳ್ಳೇ?' ಎಂದು ಬಿಜೆಪಿ ಪ್ರಶ್ನಿಸಿದೆ.

BJP has held a fierce fight against KPCC vice-president DK Shivakumar saying, "DKshi and 40 deals!" The series tweeted. '317 bank accounts were discovered during an IT raid on the Deal DK home. These were not the Jan Dhan accounts of the #DealDK family, but more than 200 crores of benami property. How can all this be the legacy of the son of Valiyalahalli Kempegowda?