ಸಿಎಂ ಸ್ಥಾನಕ್ಕಾಗಿ 2500 ಕೋಟಿ ಹಣ ಕೇಳಿದ್ದು ಯಾರು? ಅಮಿತ್ ಷಾ ಕೇಳಿದ್ದಾ? ನಡ್ಡಾ ಕೇಳಿದ್ದಾ? ಭಾಗ್ವತ್ ಕೇಳಿದ್ದಾ..? ತನಿಖೆ ಆಗ್ರಹಿಸಿದ ಬಿ.ಕೆ.ಹರಿಪ್ರಸಾದ್ 

06-05-22 08:34 pm       Bangalore Correspondent   ಕರ್ನಾಟಕ

ಸಿಎಂ ಸ್ಥಾನಕ್ಕಾಗಿ ಎರಡೂವರೆ ಸಾವಿರ ಕೋಟಿ ಕೇಳಿದ್ದಾರೆ ಎನ್ನುವ ವಿಚಾರ ಇಡೀ ಕರ್ನಾಟಕ ರಾಜ್ಯ ತಲೆ ತಗ್ಗಿಸುವಂಥದ್ದು. ಮಾತ್ರವಲ್ಲ, ಸಂವಿಧಾನ, ಪ್ರಜಾಪ್ರಭುತ್ವ ಗಾಳಿಗೆ ತೂರಿ ಬಿಜೆಪಿಯವರು ಹಣದ ಮೇಲೆ ರಾಜಕಾರಣ ಮಾಡ್ತಿದಾರೆ ಎನ್ನೋದಕ್ಕೆ ಸ್ಪಷ್ಟ ನಿದರ್ಶನ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು, ಮೇ 7 : ಸಿಎಂ ಸ್ಥಾನಕ್ಕಾಗಿ ಎರಡೂವರೆ ಸಾವಿರ ಕೋಟಿ ಕೇಳಿದ್ದಾರೆ ಎನ್ನುವ ವಿಚಾರ ಇಡೀ ಕರ್ನಾಟಕ ರಾಜ್ಯ ತಲೆ ತಗ್ಗಿಸುವಂಥದ್ದು. ಮಾತ್ರವಲ್ಲ, ಸಂವಿಧಾನ, ಪ್ರಜಾಪ್ರಭುತ್ವ ಗಾಳಿಗೆ ತೂರಿ ಬಿಜೆಪಿಯವರು ಹಣದ ಮೇಲೆ ರಾಜಕಾರಣ ಮಾಡ್ತಿದಾರೆ ಎನ್ನೋದಕ್ಕೆ ಸ್ಪಷ್ಟ ನಿದರ್ಶನ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. 

ಶಾಸಕ ಬಸವನಗೌಡ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಹರಿಪ್ರಸಾದ್ ಅವರು, ಸಿಎಂ ಮಾಡಲು ಕೇಂದ್ರದ ನಾಯಕರು 2500 ಕೋಟಿ ಕೊಡಿ ಎಂದಿದ್ದನ್ನು ಯತ್ನಾಳ್ ಹೇಳಿದ್ದಾರೆ. ಈಗ ಯತ್ನಾಳ್ ಅವರೇ ಅಷ್ಟು ಹಣವನ್ನು ಕೇಳಿದ ವ್ಯಕ್ತಿ ಯಾರೆಂದು ಸ್ಪಷ್ಟಪಡಿಸಬೇಕು. ಈ ಮಾತಿನ ಹಿನ್ನೆಲೆ ಏನೆಂದರೆ, ಈ ಹಿಂದೆ ಅಮಿತ್ ಶಾ ಚುನಾವಣೆಗಳು ನಮಗೆ ವ್ಯವಹಾರ ಇದ್ದಂತೆ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಸಾಕ್ಷಿ ಎನ್ನುವಂತೆ ಯತ್ನಾಳ್ ಅವರಿಗೆ ಎರಡುವರೆ ಸಾವಿರ ಕೋಟಿ ಹಣ ಕೇಂದ್ರದ ನಾಯಕರು ಕೇಳಿರಬೇಕು. ಈ ವಿಷಯದಲ್ಲಿ ಯತ್ನಾಳ್ ಜವಾಬ್ದಾರಿಯಿಂದ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು. 

Home Minister Amit Shah On Two-day Visit To West Bengal From Tomorrow | Mint

ಧರ್ಮದ ಮೇಲೆ, ಹಣದ ಮೇಲೆ ರಾಜಕೀಯ ನಡೆಸುವುದು ಬಿಜೆಪಿಯ ಚುನಾವಣಾ ತಂತ್ರವಾಗಿದ್ದು, ಹಣ ಕೇಳಿದ್ದು ಯಾರು ಎಂದು ಕೂಡಲೇ ಯತ್ನಾಳ್ ಸ್ಪಷ್ಟಪಡಿಸಬೇಕು. ಅಮಿತ್ ಶಾ ಕೇಳಿದ್ದಾ? ಮೋಹನ್ ಭಾಗವತ್ ಕೇಳಿದ್ದಾ? ನಡ್ಡಾ ಕೇಳಿದ್ದಾ? ಇಲ್ಲ ಮೋದಿ ಅವ್ರು ಕೇಳಿದ್ದಾ? ಎಂದು ಬಿಜೆಪಿ ಕೇಂದ್ರದ ನಾಯಕರ ಮೇಲೆ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

Horatti must immediately resign as head of K'taka Legislative Council:  Hariprasad | udayavani

ಈ ವಿಚಾರವನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿ, ಯತ್ನಾಳ್ ಹೇಳಿಕೆ ಕುರಿತು ತನಿಖೆಗೆ ಆದೇಶಿಸಬೇಕು ಎಂದವರು ಒತ್ತಾಯಿಸಿದರು.

BJP leader Basanagouda Patil Yatnal on Friday has flared up a major political controversy in Karnataka, alleging that he was asked him to pay a Rs 2,500 crore bribe to become Chief Minister.While addressing a rally of Panchamasali community in Ramdurg of Belagavi district on Friday, the BJP MLA said, “A few people from Delhi, who said that they were close to Congress President and BJP President asked me to pay Rs 2,500 crore to become Chief Minister.