ಪಿಎಸ್ಐ ಅಕ್ರಮ ; ನೇಮಕಾತಿ ವಿಭಾಗದ 12 ಮಂದಿಗೆ ಎತ್ತಂಗಡಿ ಶಿಕ್ಷೆ , ಸಿಐಡಿ ನೋಟೀಸಿಗೆ ಪ್ರಿಯಾಂಕ ಖರ್ಗೆ ಲಿಖಿತ ಉತ್ತರ, ವಿಚಾರಣೆಗೆ ಹಾಜರಾಗಲು ನಕಾರ 

07-05-22 05:49 pm       Bangalore Correspondent   ಕರ್ನಾಟಕ

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಆರೋಪಕ್ಕೀಡಾಗಿರುವ ನೇಮಕಾತಿ ವಿಭಾಗದ ಕಸ ಗುಡಿಸುವ ಆಯಾ ಸೇರಿದಂತೆ ಎಲ್ಲ ಪೊಲೀಸ್ ಸಿಬಂದಿಯನ್ನೂ ಎತ್ತಂಗಡಿ ಮಾಡಲು ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸದ್ಯಕ್ಕೆ 12 ಜನರ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. 

ಬೆಂಗಳೂರು, ಮೇ 7 : ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಆರೋಪಕ್ಕೀಡಾಗಿರುವ ನೇಮಕಾತಿ ವಿಭಾಗದ ಕಸ ಗುಡಿಸುವ ಆಯಾ ಸೇರಿದಂತೆ ಎಲ್ಲ ಪೊಲೀಸ್ ಸಿಬಂದಿಯನ್ನೂ ಎತ್ತಂಗಡಿ ಮಾಡಲು ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸದ್ಯಕ್ಕೆ 12 ಜನರ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. 

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕಾರಣಕ್ಕೆ ಸಿಬಂದಿಯನ್ನು ಬದಲಾವಣೆ ಮಾಡಲಾಗುತ್ತಿದ್ದು, ನೇಮಕಾತಿ ವಿಭಾಗದಲ್ಲಿದ್ದ 17 ಮಂದಿ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದರಲ್ಲಿ 12 ಜನರನ್ನು ಬೇರೆ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ಸದ್ಯಕ್ಕೆ ಕಚೇರಿ ಕರ್ತವ್ಯ ನಿರ್ವಹಣೆಗಾಗಿ 5 ಜನರನ್ನು ಉಳಿಸಿಕೊಳ್ಳಲಾಗಿದೆ. ಖಾಲಿ ಇರುವ 12 ಸ್ಥಾನಕ್ಕೆ ಹೊಸಬರು ಬಂದ ಬಳಿಕ ಉಳಿದ ಐವರ ಬದಲಾವಣೆ ಮಾಡಲಾಗುತ್ತದೆ.

ನೇಮಕಾತಿ ವಿಭಾಗಕ್ಕೆ ಪೂರ್ತಿ ಹೊಸ ಅಧಿಕಾರಿ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ. ಓರ್ವ ಆಡಳಿತಾಧಿಕಾರಿ, ತಾಂತ್ರಿಕ ವಿಭಾಗಕ್ಕೆ ಡಿವೈಎಸ್‌ಪಿ ಮತ್ತು ಇನ್ಸ್‌ಪೆಕ್ಟರ್ ಉಳಿದಂತೆ ಎಫ್‌ಡಿಎ, ಎಸ್‌ಡಿಎ ಸಿಬ್ಬಂದಿ ನೇಮಕಾತಿ ವಿಭಾಗದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. 

KPSC FDA SDA Recruitment: FDA, SDA ಹುದ್ದೆಗಳಿಗೆ ದಾಖಲಾತಿ ಪರಿಶೀಲನೆಯಾದ  ಅಭ್ಯರ್ಥಿಗಳು ಇಲಾಖಾ ಆದ್ಯತೆ ನೀಡಲು ಲಿಂಕ್ ಇಲ್ಲಿದೆ - kpsc updated link for  department preferences for sda, fda posts who ...

ನೇಮಕಾತಿ ಸಮಯದಲ್ಲಿ ಒಟ್ಟು ನಲವತ್ತೆರಡು ಜನರು ಕೆಲಸ ಮಾಡುತ್ತಿದ್ದು ಆ ಪೈಕಿ ಹದಿನೇಳು ಜನರು ಮಾತ್ರ ನೇರವಾಗಿ ಕೆಲಸ ಮಾಡುತ್ತಿದ್ದರು. ಉಳಿದವರನ್ನು ಅವಶ್ಯಕತೆಗೆ ತಕ್ಕಂತೆ ಒಒಡಿ ಮೂಲಕ ಹಾಗು ಸ್ಪೆಷಲ್ ಡ್ಯೂಟಿ ಅನ್ವಯ ಕೆಲಸಕ್ಕೆ ಬಳಸಿಕೊಳ್ಳಲಾಗುತಿತ್ತು.

ಅಸಿಸ್ಟೆಂಟ್​ ಕಮಾಂಡೆಂಟ್ ವೈಜನಾಥ್ 7 ದಿನ ಸಿಐಡಿ ವಶಕ್ಕೆ

karnataka cid: Latest News & Videos, Photos about karnataka cid | The  Economic Times - Page 1

ಪಿಎಸ್​ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಅಸಿಸ್ಟೆಂಟ್​ ಕಮಾಂಡೆಂಟ್ ವೈಜನಾಥ್ ಅವರನ್ನು 7 ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಕಲಬುರಗಿ 3ನೇ ಜೆಎಂಎಫ್​ಸಿ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. ಕೆಎಸ್ ಆರ್ ಪಿ ವಿಭಾಗದ ಅಸಿಸ್ಟೆಂಟ್​ ಕಮಾಂಡೆಂಟ್​​​ ವೈಜನಾಥ್​​​​​​ ರೇವೂರ್​ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.

ಸಿಐಡಿ ನೋಟಿಸ್​ಗೆ ಪ್ರಿಯಾಂಕ್ ಖರ್ಗೆ ಲಿಖಿತ ಉತ್ತರ 

Congress MLA Priyank Kharge gets 3rd notice in Karnataka ​PSI scam, says  hes not obligated to depose- The New Indian Express

ಅಕ್ರಮ ನೇಮಕಾತಿ ಪ್ರಕರಣದಲ್ಲಿ ಆಡಿಯೋ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ಮೂರನೇ ಬಾರಿಗೆ ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಆದರೆ ಪ್ರಿಯಾಂಕ್ ಖರ್ಗೆ ಸಿಐಡಿ ವಿಚಾರಣೆಗೆ ಬಾರದೆ 3ನೇ ನೋಟಿಸ್‌ಗೂ ಲಿಖಿತ ಉತ್ತರ ನೀಡಿದ್ದಾರೆ. 6 ಪುಟಗಳ ಸುದೀರ್ಘ ಉತ್ತರವನ್ನು ಆಪ್ತ ಸಹಾಯಕನ ಮೂಲಕ ರವಾನಿಸಿದ್ದಾರೆ. 

ಆಡಿಯೋ ಬಿಡುಗಡೆ ಬಳಿಕ ಹೆಚ್ಚಿನ ಮಾಹಿತಿ ನೀಡುವಂತೆ ಸಿಐಡಿ ನೋಟಿಸ್ ನೀಡಿತ್ತು. ಮೊದಲ ನೋಟಿಸ್​ಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದರು. 2ನೇ ನೋಟಿಸ್ ಸ್ವೀಕರಿಸದೆ ವಾಪಸ್ ಕಳುಹಿಸಿದ್ದರು. ಖುದ್ದು ಹಾಜರಾಗುವಂತೆ ಸಿಐಡಿ 3ನೇ ನೋಟಿಸ್ ನೀಡಿತ್ತು. ಆದರೆ ಶಾಸಕರು ಹಾಜರಾಗದೆ ಲಿಖಿತ ಉತ್ತರ ಕೊಟ್ಟಿದ್ದಾರೆ. 

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು. ಸರ್ಕಾರದಲ್ಲಿ‌ ದುಡ್ಡು ಎಲ್ಲಿ ಹೋಗ್ತಿದೆ ಎಂದು ಬಾಯಿ ಬಿಡುತ್ತಿಲ್ಲ. ಈವರೆಗೂ ಅರೆಸ್ಟ್ ಮಾಡಿರೋದು 20ಜ ಜನರನ್ನ ಮಾತ್ರ. ಉಳಿದವರು ಎಲ್ಲಿ ಹೋಗಿದ್ದಾರೆ. ಸಿಐಡಿ ನೋಟಿಸ್​ಗೆ ಲಿಖಿತ ರೂಪದಲ್ಲಿ ದಾಖಲೆ ಕೊಟ್ಟಿದ್ದೀನಿ. ಇದು ಅರ್ಥ ಆಗಲಿಲ್ಲ ಅಂದರೆ ಗೃಹ ಸಚಿವರಾಗಲು ನಾಲಾಯಕ್ ಎಂದು ಹೇಳಿದ್ದಾರೆ.

Senior officials have decided to uplift all the police personnel, including the recruiter's garbage dispatcher, in the PSI illegal recruitment case. Currently 12 people have been transferred and ordered.