ಸಾಹುಕಾರರುಗಳೆಲ್ಲ ಪಾಪರ್‌ಗಳಾಗುತ್ತಿದ್ದಾರೆ, ಮ್ಯಾಚ್ ಫಿಕ್ಸಿಂಗ್ ನಡೀತಿದೆ, ಡಿಸಿಸಿ ಬ್ಯಾಂಕಿನ 600 ಕೋಟಿ ಬಗ್ಗೆ ಸಿಎಂ ಏನು ಹೇಳ್ತಾರೆ ? 

07-05-22 09:52 pm       HK Desk News   ಕರ್ನಾಟಕ

ಸಾಹುಕಾರ್‌ಗಳೆಲ್ಲ ಪಾಪರ್‌ಗಳಾಗುತ್ತಿದ್ದಾರೆ. ನಮ್ಮನ್ನೆಲ್ಲ ಪಾಪರ್ ಮಾಡಿಕೊಳ್ಳಿ ಅಂತ ಮ್ಯಾಚ್ ಫಿಕ್ಸಿಂಗ್ ನಡೀತಿದೆ, ಯಾರೂ ಕೇಳವರಿಲ್ಲ, ಮಾಡೋರಿಲ್ಲ. ಸಿಎಂ, ಸಹಕಾರ ಸಚಿವರು ಏನ್ ಮಾಡುತ್ತಿದ್ದಾರೆ?ಬಿಡಿಸಿಸಿ ಬ್ಯಾಂಕ್‌ಗೆ 300 ಕೋಟಿನೋ, 600 ಕೋಟಿನೋ ಅದು ಎಷ್ಟು ಬರಬೇಕು ಗೊತ್ತಿಲ್ಲ... 

ಬೆಳಗಾವಿ, ಮೇ 7 : ಸಾಹುಕಾರ್‌ಗಳೆಲ್ಲ ಪಾಪರ್‌ಗಳಾಗುತ್ತಿದ್ದಾರೆ. ನಮ್ಮನ್ನೆಲ್ಲ ಪಾಪರ್ ಮಾಡಿಕೊಳ್ಳಿ ಅಂತ ಮ್ಯಾಚ್ ಫಿಕ್ಸಿಂಗ್ ನಡೀತಿದೆ,
ಯಾರೂ ಕೇಳವರಿಲ್ಲ, ಮಾಡೋರಿಲ್ಲ. ಸಿಎಂ, ಸಹಕಾರ ಸಚಿವರು ಏನ್ ಮಾಡುತ್ತಿದ್ದಾರೆ?ಬಿಡಿಸಿಸಿ ಬ್ಯಾಂಕ್‌ಗೆ 300 ಕೋಟಿನೋ, 600 ಕೋಟಿನೋ ಅದು ಎಷ್ಟು ಬರಬೇಕು ಗೊತ್ತಿಲ್ಲ... 

ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಸಹಕಾರಿ ಕಾರ್ಖಾನೆಯಲ್ಲಿ ಅವ್ಯವಹಾರವಾಗಿದೆ, 600 ಕೋಟಿ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಸಾಲ ಉಳಿಸಿಕೊಂಡಿದ್ದಾರೆ ಎಂಬ ಆರೋಪವನ್ನು ಮುಂದಿಟ್ಟು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಳಗಾವಿಯಲ್ಲೇ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಡಿಸಿಸಿ ಬ್ಯಾಂಕ್‌ ನೇಮಕಾತಿಗೆ ಹೈಕೋರ್ಟ್‌ ತಡೆಯಾಜ್ಞೆ - dcc bank oppiontment hold |  Vijaya Karnataka

BJP keeps Jarkiholi in the shadows- The New Indian Express

ಪೇಪರ್‌ನಲ್ಲಿ ಬಂದಿದ್ದ ಜಾಹೀರಾತು ನೋಡಿದೆ. ನಮ್ಮ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ದಾಖಲೆ ಕಳಿಸೋದಾಗಿ ಹೇಳಿದ್ದಾರೆ. ನೋಡ್ತೀನಿ, ಜಿಲ್ಲಾಧಿಕಾರಿ ಏನ್ ಮಾಡ್ತಾರೆ. ನಾನು ಆ ಪಾಪರ್ ಸಾಹುಕಾರ್ ಭಿಕ್ಷುಕ ಆಗಿದ್ದನ್ನ ನೋಡಬೇಕು. ಮೊದಲು ಸಚಿವ ಸೋಮಶೇಖರ್, ಸಿಎಂ ಉತ್ತರ ಕೊಡಲಿ ಆಮೇಲೆ ನಾನು ಮಾತನಾಡ್ತೀನಿ ಎಂದು ಡಿಕೆಶಿ ಹೇಳಿದ್ದಾರೆ. 

ಎಲ್ಲದಕ್ಕೂ ರೇಟ್ ಫಿಕ್ಸ್ ಆಗಿದೆ ! 

Karnataka BJP MLA Basangouda Patil Yatnal alleges he was asked to pay Rs  2,500 crore to become CM | Deccan Herald

ದೆಹಲಿಯಿಂದ ಬಂದವರು ಸಿಎಂ ಮಾಡಲು 2500 ಕೋಟಿ ನೀಡಬೇಕೆಂಬ ಯತ್ನಾಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಯತ್ನಾಳ ಸಾಮಾನ್ಯ ವ್ಯಕ್ತಿಯಲ್ಲ. ಕೇಂದ್ರದ ಮಾಜಿ ಮಂತ್ರಿ, ಹಾಲಿ ಶಾಸಕರು. ಮಂತ್ರಿ ಸ್ಥಾನಕ್ಕೆ 50 ರಿಂದ 100 ಕೋಟಿ ಫಿಕ್ಸ್ ಅಂತಾ ಹೇಳಿದ್ದಾರೆ. ಇಂಜಿನಿಯರ್‌, ಪಿಎಸ್ಐ  ಪೋಸ್ಟ್‌ಗೆ ರೇಟ್, ಪೋಸ್ಟಿಂಗ್‌ಗೆ ಎಷ್ಟು ರೇಟ್ ಫಿಕ್ಸ್ ಆಗಿದೆ ? ಸಿಎಂ ಹುದ್ದೆಯಿಂದ ಹಿಡಿದು ಜವಾನ್ ಕೆಲಸದ ವರೆಗೂ ರೇಟ್ ಫಿಕ್ಸ್ ಆಗಿದೆ. 40 ಪರ್ಸೆಂಟ್ ಕಮಿಷನ್ ಫಿಕ್ಸ್ ಆಗಿದೆ, ಇದಕ್ಕಿಂತ ಇನ್ನೇನು ಬೇಕು. 

ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ನಡೆಯುತ್ತಿರೋ ಭ್ರಷ್ಟಾಚಾರ ನಿಯಂತ್ರಿಸಲು ಆಗ್ತಿಲ್ಲ. ಯಾರ ಮೇಲೆಯೂ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಅಧಿಕಾರಿಗಳು, ಶಾಸಕರು, ಮಂತ್ರಿಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ತಿಲ್ಲ. ಅದಕ್ಕಾಗಿ ಈ ಪರಿಸ್ಥಿತಿ ಉದ್ಭವ ಆಗುತ್ತಿದೆ, ಮಿಕ್ಕಿದ್ದು ಅವರಿಗೆ ಬಿಟ್ಟಿದ್ದು. ಈಗ ಫಸ್ಟ್ ಏನೇನೂ ಈಚೆ ಬಂದಿದೆ ಅದಕ್ಕೆಲ್ಲ ಉತ್ತರ ಕೊಡಲಿ.

Have To Live Together": BJP's BS Yediyurappa On Communal Flare-Ups

ನನಗೂ ಜೈಲಿಗೆ ಹಾಕಿದ್ರು, ಯಡಿಯೂರಪ್ಪಗೂ ಜೈಲಿಗೆ ಹಾಕಿದ್ರು, ಅಮಿತ್ ಶಾಗೂ ಜೈಲಿಗೆ ಹಾಕಿದ್ರು. ಬೇಕಾದಷ್ಟು ಎಂಎಲ್‌ಎಗಳು, ಆನಂದ ಸಿಂಗ್‌ಗೂ ಜೈಲಿಗೆ ಹಾಕಿದ್ರು. ಆ ಸಂದರ್ಭದಲ್ಲಿ ಯಡಿಯೂರಪ್ಪನವರು ಹೀಗಾಗಬಾರದಿತ್ತು ಎಂದು ಹೇಳಿದ್ದು ನಿಜ. ಅವರೇ ಕೇಂದ್ರ ಸರ್ಕಾರದ ಒತ್ತಡದ ಮೇಲೆ ಸಿಬಿಐಗೆ ಕೊಟ್ಟಿರೋದು ನಿಜ. ಅವೇನೇನೋ ಬೇರೆ ವಿಚಾರಗಳು ಇವೆ, ಈಗ ಬೇಡ. ಹಾಗಂತ, ನಮ್ಮದು ಯಾವುದೂ ಹೊಂದಾಣಿಕೆ ಇಲ್ಲ. ನಾನು ಎಷ್ಟು ಕೋಟಿ ಟ್ಯಾಕ್ಸ್ ಕಟ್ಟಿದೀನಿ, ನಮ್ಮ ವ್ಯವಹಾರ ಏನು ವಹಿವಾಟು ಏನು ಅಂತ ಹೇಳಲಿ. ಅವನ್ಯಾವನೋ ಸ್ಟಿಂಗ್ ಆಪರೇಷನ್ ಮಾಡೋಕೆ ಬಂದವನಿಗೆ ಸ್ವಲ್ಪ ಗಿಫ್ಟ್ ಕೊಟ್ಟು ಕಳಿಸಿಬಿಟ್ಟಿದ್ದಾರೆ ಎಂದು ಟಾಂಗ್ ನೀಡಿದರು.

DK Shivakumar questions CM about 600 crores of DCC Bank, Slams Ramesh Jarkiholi.c