15 ಡಿಸಿಸಿ ಬ್ಯಾಂಕುಗಳಿಗೆ ರಮೇಶ್ ಜಾರಕಿಹೊಳಿ 600 ಕೋಟಿ ವಂಚನೆ, ಆಸ್ತಿ ಜಪ್ತಿಗೆ ಆದೇಶ ಇದ್ದರೂ ಅಮಿತ್ ಶಾ ಇವರನ್ನು ರಕ್ಷಿಸುತ್ತಿದ್ದಾರೆ ! 

08-05-22 05:48 pm       Bangalore Correspondent   ಕರ್ನಾಟಕ

ನೀರವ್ ಮೋದಿ, ವಿಜಯ್ ಮಲ್ಯ ಹೇಗೆ ಹಗರಣ ಮಾಡಿ ದೇಶವನ್ನು ತೊರೆದು ಹೋಗಿದ್ದಾರೋ ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಮಹಾ ವಂಚನೆಯನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸಗಿದ್ದಾರೆ.

ಬೆಂಗಳೂರು, ಮೇ 8 : ನೀರವ್ ಮೋದಿ, ವಿಜಯ್ ಮಲ್ಯ ಹೇಗೆ ಹಗರಣ ಮಾಡಿ ದೇಶವನ್ನು ತೊರೆದು ಹೋಗಿದ್ದಾರೋ ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಮಹಾ ವಂಚನೆಯನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸಗಿದ್ದಾರೆ. 15 ಬ್ಯಾಂಕ್ ಗಳಿಂದ 600 ಕೋಟಿಗೂ ಹೆಚ್ಚು ಸಾಲ ಮಾಡಿ ದಿವಾಳಿ ಆಗಿರುವ ಜಾರಕಿಹೊಳಿಯನ್ನು ಬಿಜೆಪಿ ನಾಯಕರು ರಕ್ಷಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ. 

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ 'ಸೌಭಾಗ್ಯ ಲಕ್ಷ್ಮಿ ಶುಗರ್ ಲಿಮಿಟೆಡ್' ಎಂಬ ಸಕ್ಕರೆ ಕಾರ್ಖಾನೆ ಇದ್ದು, ಇದರ ಮಾಲೀಕ ರಮೇಶ್ ಜಾರಕಿಹೊಳಿ ಅಪೆಕ್ಸ್ ಬ್ಯಾಂಕ್​​ಗಳಡಿ ಬರುವ ಸುಮಾರು 15 ಬ್ಯಾಂಕ್​​ಗಳಿಂದ 366 ಕೋಟಿ ಸಾಲ ಮಾಡಿದ್ದಾರೆ. ಯೂನಿಯನ್ ಬ್ಯಾಂಕ್​​ನಿಂದ 20 ಕೋಟಿ, ತೆರಿಗೆ ಇಲಾಖೆಯಿಂದ 200 ಕೋಟಿ ಬಾಕಿ ಉಳಿಸಿಕೊಂಡಿದ್ದು, ಹರಿಯಂತ್ ಸಹಕಾರಿ ಬ್ಯಾಂಕ್​​ನಿಂದ 20 ಕೋಟಿ ಸೇರಿ ಒಟ್ಟು 660 ಕೋಟಿ ಸಾಲ ಪಡೆದಿದ್ದಾರೆ. 

PM Narendra Modi's address to nation key points: 100 crore Covid vaccine  dose landmark not merely statistics, it's a new chapter in history, says PM  | India News - Times of India

2017ರಲ್ಲಿ ಅಪೆಕ್ಸ್ ಬ್ಯಾಂಕ್​​ನವರು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯನ್ನು ಎನ್​​ಪಿಎ ಎಂದು ಘೋಷಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಸುಮಾರು 11 ಲಕ್ಷ ಕೋಟಿ ಸಾಲವನ್ನು ಎನ್​ಪಿಎ ಎಂದು ಘೋಷಣೆ ಮಾಡಿ ಮನ್ನಾ ಮಾಡಲಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಮೊತ್ತದ ಎನ್​ಪಿಎ ಆಗಿರುವ ಕಂಪನಿ ಸೌಭಾಗ್ಯ ಲಕ್ಷ್ಮಿ ಶುಗರ್ಸ್. ನಂತರ ಬ್ಯಾಂಕಿನವರು ನಿಮ್ಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ನೊಟೀಸ್ ಜಾರಿಗೊಳಿಸುತ್ತಾರೆ. ಆದರೆ 2019ರ ವರೆಗೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.

M.lakshman Archives - ANDOLANA

ಬಳಿಕ ಮುಟ್ಟುಗೋಲಿಗೆ ತಡೆ ನೀಡುವಂತೆ ಕೋರಿ ಧಾರವಾಡ ಹೈಕೋರ್ಟ್ ನಲ್ಲಿರುವ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸುತ್ತಾರೆ. ನ್ಯಾಯಾಲಯ 28-11-2019ರಲ್ಲಿ ಮಧ್ಯಂತರ ತೀರ್ಪು ನೀಡಿ, 'ನೀವು ಆರು ವಾರಗಳ ಒಳಗಾಗಿ 366 ಕೋಟಿ ಸಾಲದಲ್ಲಿ ಅರ್ಧದಷ್ಟು ಹಣವನ್ನು ಪಾವತಿಸಿ ನಂತರ ನ್ಯಾಯಾಲಯಕ್ಕೆ ಬನ್ನಿ' ಎಂದು ಸೂಚಿಸುತ್ತದೆ. 

ನ್ಯಾಯಾಲಯದ ಆದೇಶದ ಬಗ್ಗೆ ವಿವರ ನೀಡಿದ ಲಕ್ಷ್ಮಣ್, ಕೋರ್ಟ್​ಗೆ ಸರ್ಕಾರ ಇಲ್ಲಿಯ ವರೆಗೂ ಯಾವುದೇ ಆಕ್ಷೇಪ ಸಲ್ಲಿಸಿಲ್ಲ. ಈ ಷಡ್ಯಂತ್ರದ ಹಿಂದೆ ರಾಜ್ಯ ಸರ್ಕಾರ, ಕೇಂದ್ರದ ಸಹಕಾರ ಸಚಿವಾಲಯದ ಮಂತ್ರಿಗಳು ಅಂದರೆ ಅಮಿತ್ ಶಾ ಇದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಅವರು ಕಳೆದ 10 ತಿಂಗಳಲ್ಲಿ 8 ಬಾರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಅವರು ಭೇಟಿ ಮಾಡಿರುವುದೇನಕ್ಕೆ ಎಂಬುದು ಅರ್ಥವಾಗುತ್ತದೆ ಎಂದರು.

Nagaland Firing a Case of Mistaken Identity, Says Amit Shah in Parliament;  SIT Formed to Probe Case

ಜನಸಾಮಾನ್ಯರು ಸಾಲ ಮಾಡಿ ವಾಹನ ಖರೀದಿ ಮಾಡಿದಾಗ ಒಂದು ತಿಂಗಳು ಇಎಂಐ ಕಟ್ಟಲಿಲ್ಲ ಎಂದರೆ ವಾಹನ ಜಪ್ತಿ ಮಾಡುತ್ತಾರೆ. ಆದರೆ ಈ ಕಂಪನಿಯನ್ನು ನೀವು 2017ರಲ್ಲೇ ಎನ್​ಪಿಎ ಎಂದು ಘೋಷಣೆ ಮಾಡುತ್ತೀರಿ. ಆದರೆ ಅದೇ ಕಂಪನಿ 2022ರ ಮಾ.31ಕ್ಕೆ ಅವರ ಆಡಿಟೆಡ್ ಖಾತೆ ಪರಿಶೀಲಿಸಿದರೆ ಆ ಕಂಪನಿ ಸುಮಾರು 60 ಕೋಟಿ ಲಾಭ ಮಾಡಿದೆ. ಇದೆಲ್ಲವನ್ನು ನೋಡಿಕೊಂಡು ಸರ್ಕಾರ ಸುಮ್ಮನೆ ಕೂತಿರುವುದೇಕೆ? ಎಸ್.ಟಿ ಸೋಮಶೇಖರ್ ಅವರು ಸಹಕಾರ ಮಂತ್ರಿಯಾಗಿದ್ದು, ಅವರು ಏನು ಮಾಡುತ್ತಿದ್ದಾರೆ? ಬೊಮ್ಮಾಯಿ ಅವರು ಏನು ಮಾಡುತ್ತಿದ್ದಾರೆ ? ಎಂದು ಪ್ರಶ್ನಿಸಿದರು.

ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಂತೆ ವರ್ತಿಸುವ ಸಿ.ಟಿ.ರವಿ ಅವರೇ ಮುಂದಿನ ವಾರ ನಿಮ್ಮ ದಾಖಲೆಗಳನ್ನು ಬಹಿರಂಗಪಡಿಸುತ್ತೇನೆ. ನಾನು ಈ ವಿಚಾರವಾಗಿ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ನನಗೆ ಲೀಗಲ್ ನೋಟಿಸ್​​ ನೀಡುತ್ತಾರೆ. ಅಲ್ಲಿನ ಪೊಲೀಸ್ ಠಾಣೆಗಳಲ್ಲಿ ನನ್ನ ವಿರುದ್ಧ ಕೇಸ್ ಹಾಕಿಸುತ್ತಾರೆ. ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇ? ಎಂದು ಕಿಡಿ ಕಾರಿದರು. 

Will bring in uniform civil code: C T Ravi | Deccan Herald

ಬಿಜೆಪಿಯವರು ಮಾತೆತ್ತಿದರೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾರೆ. ಬಿಜೆಪಿಯವರ ಕುಟುಂಬದಲ್ಲಿ ಏನೇ ಆದರೂ ಅದಕ್ಕೆ ಕಾಂಗ್ರೆಸ್ ಹೊಣೆ ಎನ್ನುತ್ತಾರೆ. ಇದು ಎಂತಹ ದುರಂತ. ಸಿ.ಟಿ.ರವಿ ಅವರೇ, ನಾನು ನಿಮ್ಮ ಬಿಜೆಪಿ ಕಚೇರಿಗೆ ಈ ದಾಖಲೆಗಳನ್ನೆಲ್ಲ ತೆಗೆದುಕೊಂಡು ಬರುತ್ತೇನೆ. ನೀವು ನಿಮ್ಮ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಕೂರಿಸಿಕೊಂಡು ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ.

Ramesh Jarkiholi has cheated more than 600 crores in 15 Banks of DCC slams KPCC Lakshman. BJP party has been rescuing his crimes from behind.