ವ್ಯಕ್ತಿ ಶವವನ್ನು ಕೊಳೆಯದೆ ಇಡಬಲ್ಲ ಸಂಶೋಧನೆ ; ಬೆಂಗಳೂರಿನಲ್ಲಿ ವೈದ್ಯಲೋಕದ ಅಚ್ಚರಿ ಪ್ರಯೋಗ ! 

08-05-22 07:46 pm       Bangalore Correspondent   ಕರ್ನಾಟಕ

ಇಂಥದ್ದೊಂದು ಅಪರೂಪದ ಸಂಶೋಧನೆಯನ್ನು ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಮಾಡಿದ್ದಾರೆ. 

ಬೆಂಗಳೂರು, ಮೇ 8: ವ್ಯಕ್ತಿಯ ಶವವನ್ನು ಹಾಗೇ ಇಟ್ಟರೆ ಕೊಳೆಯಲು ಆರಂಭವಾಗುತ್ತದೆ. ಆದರೆ, ಕೆಲವು ರಾಸಾಯನಿಕ ಬಳಸಿ ನೂರಾರು ವರ್ಷಗಳ ಕಾಲ ಸುರಕ್ಷಿತವಾಗಿಡಲು ಸಾಧ್ಯವಿದೆ. ಇಂಥದ್ದೊಂದು ಅಪರೂಪದ ಸಂಶೋಧನೆಯನ್ನು ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಮಾಡಿದ್ದಾರೆ. 

ವೈದ್ಯಲೋಕ ಅಚ್ಚರಿ ಪಡುವ ರೀತಿ ಬೆಂಗಳೂರಿನಲ್ಲಿ ವಿಶೇಷವಾದ ಪ್ರಯೋಗ ನಡೆದಿದೆ. ರಾಸಾಯನಿಕ ಬಳಸಿ ನೂರಾರು ವರ್ಷ ಸುರಕ್ಷಿತವಾಗಿಡುವ ಸಂಶೋಧನೆಯನ್ನು ಮಾಡಲಾಗಿದೆ. ಈ ವಿಚಾರ ಬೆಳಕಿಗೆ ತಂದಿದ್ದು ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್. 

ವ್ಯಕ್ತಿ ಮರಣಿಸಿದ ನಂತರ ಕೆಲವು ರಾಸಾಯನಿಕಗಳನ್ನು ಬಳಸಿ ಜೀವಂತವಾಗಿ ಕಾಣುವ ರೀತಿಯಲ್ಲೇ ಮೃತದೇಹಗಳನ್ನು ಇಡಲಾಗಿದೆ. ಈ ಶವಗಳು ಕೊಳೆಯುವುದಿಲ್ಲ ಅಥವಾ ದುರ್ವಾಸನೆಯನ್ನೂ ಬೀರುವುದಿಲ್ಲ. ಹೀಗೆ ನಾಲ್ವರ ಶವಗಳನ್ನು ಒಂದೆಡೆ ಇಟ್ಟು ಪ್ರಾಯೋಗಿಕವಾಗಿ ಡಾ. ರಾವ್‌ ತೋರಿಸಿದ್ದಾರೆ. ಶವವನ್ನು ಕೊಳೆಯಲು ಬಿಡದೆ, ವಾಸನೆ ಬಾರದಂತೆಯೂ ಮಾಡುವ ವಿಶ್ವದ ಮೊಟ್ಟಮೊದಲ ಸಂಶೋಧನೆ ಇದು ಎನ್ನಲಾಗಿದೆ. 

ಆನೇಕಲ್ ತಾಲೂಕಿನ ಆಕ್ಸ್‌ಫರ್ಡ್ ವೈದ್ಯಕೀಯ ಕಾಲೇಜಿನಲ್ಲಿ ಪುಟ್ಟ ಮಗುವಿನ ಶವ ಹಾಗೂ ಇತರೆ ಮೂವರು ವ್ಯಕ್ತಿಗಳ ಶವಗಳನ್ನು ಪ್ರದರ್ಶಿಸುವ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಮೈಲುಗಲ್ಲು ಸಾಧಿಸಿರುವುದನ್ನು ಡಾ. ದಿನೇಶ್ ರಾವ್‌ ಪ್ರಸ್ತುತಪಡಿಸಿದ್ದಾರೆ.

Bangalore Oxford college students invent chemical that can keep dead body without being decayed.