ಪಿಎಸ್ಐ ಹಗರಣದಲ್ಲಿ ಪ್ರಭಾವಿ ವ್ಯಕ್ತಿಯ ಮಗನೇ ಕಿಂಗ್ ಪಿನ್ ; ಸಿದ್ದರಾಮಯ್ಯ ಜೈಲಿಗೆ ಎನ್ನುವ ಕಟೀಲನಿಗೆ ನಾಚಿಕೆಯಾಗಲ್ವಾ..? ಅರ್ಕಾವತಿ ವರದಿಗೆ ಪೂಜೆ ಮಾಡ್ತಿದಾರೆಯೇ ? 

10-05-22 12:49 pm       HK Desk News   ಕರ್ನಾಟಕ

ಪಿಎಸ್‌ಐ ಹಗರಣದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಮಗನೇ ಭಾಗಿಯಾಗಿರುವ ಮಾಹಿತಿಗಳಿದ್ದು ಆತನ ಹೆಸರು ಹೇಳುವ ಕಾಲ ಬರುತ್ತದೆ. ಆದರೆ, ಆ ಮಾಹಿತಿಗಳ ಬಿದ್ದು ಹೇಳಿ ಏನು ಉಪಯೋಗವಿದೆ? ಅದನ್ನು ಸರಿಪಡಿಸುವ ತಾಕತ್ತು ಗೃಹಸಚಿವರಿಗೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. 

ಬಾಗಲಕೋಟ, ಮೇ 10: ಪಿಎಸ್‌ಐ ಹಗರಣದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರ ಮಗನೇ ಭಾಗಿಯಾಗಿರುವ ಮಾಹಿತಿಗಳಿದ್ದು ಆತನ ಹೆಸರು ಹೇಳುವ ಕಾಲ ಬರುತ್ತದೆ. ಆದರೆ, ಆ ಮಾಹಿತಿಗಳ ಬಿದ್ದು ಹೇಳಿ ಏನು ಉಪಯೋಗವಿದೆ? ಅದನ್ನು ಸರಿಪಡಿಸುವ ತಾಕತ್ತು ಗೃಹಸಚಿವರಿಗೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. 

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮಾತನಾಡಿದ ಅವರು, ಆ ಪ್ರಭಾವಿಯೊಬ್ಬರ ಮಗನ ಹೆಸರು ಬಹಿರಂಗವಾದರೆ ಸರ್ಕಾರವೇ ಬೀಳುತ್ತದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಆತನೇ ಕಿಂಗ್‌ಪಿನ್‌. ಆತನನ್ನು ಬಂಧಿಸುವ ತಾಕತ್ತು ಈ ಸರ್ಕಾರಕ್ಕಿಲ್ಲ. ಹೀಗಾಗಿ, ಆತನ ಹೆಸರು ಹೇಳಿ ಏನೂ ಪ್ರಯೋಜನವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ನಡೆದ ಹಗರಣ ಮತ್ತು ಅಕ್ರಮಗಳ ಕುರಿತು ಈ ಸರ್ಕಾರ ಎಷ್ಟು ಪ್ರಾಮಾಣಿಕವಾಗಿ ತನಿಖೆ ಮಾಡಿದೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಈಗ ಪಿಎಸ್‌ಐ ನೇಮಕಾತಿ ಹಗರಣದ ಪ್ರಕರಣದಲ್ಲಿಯೂ ಕೆಲವರ ಅಮಾನತು, ಕೆಲವರನ್ನು ಬಂಧಿಸಿ ಮುಖ್ಯ ಸೂತ್ರಧಾರರನ್ನು ರಕ್ಷಿಸಿ ತನಿಖೆ ಮುಗಿಸುವ ಉದ್ದೇಶ ಈ ಸರ್ಕಾರದ್ದಿದೆ. ಈ ಹಿಂದೆ ಡ್ರಗ್ಸ್ ಹಾಗೂ ರೇವ್‌ ಪಾರ್ಟಿ ವಿಚಾರದಲ್ಲಿ ಇವರು ಯಾವ ರೀತಿ ತನಿಖೆ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲವೇ ಎಂದು ಹೇಳಿದರು. 

Not even one MLA is unhappy with B S Yediyurappa: Nalin Kumar Kateel |  Deccan Herald

Karnataka: Bommai Got CM Post in Exchange For Money, Alleges Siddaramaiah

ನಳಿನ್ ಕಟೀಲನಿಗೆ ನಾಚಿಕೆ ಆಗಲ್ವಾ? 

ಅರ್ಕಾವತಿ ಪ್ರಕರಣದ ವರದಿಯನ್ನು ಇಟ್ಟರೆ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಈ ರೀತಿ ಹೇಳಲು ಆ ಮನುಷ್ಯನಿಗೆ ನಾಚಿಕೆ ಆಗಬೇಕು. ವರದಿಯನ್ನು ಇಟ್ಟುಕೊಂಡು ಪೂಜೆ ಮಾಡುವ ಬದಲು ಅದನ್ನು ಬಿಡುಗಡೆ ಮಾಡಬೇಕು. ಪ್ರತಿನಿತ್ಯ ಸಿದ್ದರಾಮಯ್ಯ ಬಿಜೆಪಿಯವರು ಭ್ರಷ್ಟರು ಎಂದು ಬಯ್ಯುತ್ತಾ ತಿರುಗುತ್ತಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್‌ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ನಾನು ಯಾವಾಗಲೂ ಹೇಳುತ್ತೇನೆ ಎಂದು ಛೇಡಿಸಿದರು.

India News | Karnataka May Opt for Unlock in Phases From Next Week: State  Revenue Minister R Ashoka | 🇮🇳 LatestLY

Karnataka BJP MLA Basangouda Patil Yatnal alleges he was asked to pay Rs  2,500 crore to become CM | Deccan Herald

ಮೊದಲಿನಿಂದಲೂ ರಾಜ್ಯದ ಖಜಾನೆ ಲೂಟಿ ಮಾಡಿ ದೆಹಲಿಯ ಹೈಕಮಾಂಡ್‌ಗೆ ಸಂದಾಯ ಮಾಡುವುದು ಕಾಂಗ್ರೆಸ್‌ ಸಂಪ್ರದಾಯ. ಈಗ ಬಿಜೆಪಿಯವರೂ ಇದೇ ಕೆಲಸ ಮಾಡುತ್ತಿದ್ದಾರೆ. ಅವರ ಪಕ್ಷದವರೇ ಆದ ಸಚಿವ ಆರ್‌.ಅಶೋಕ ಹೇಳಿರುವಂತೆ ಚುನಾವಣೆ ಮಾಡಲೆಂದು ಬರುವ ದೊಡ್ಡ ನಾಯಕರಿಗೆ ಕಾಣಿಕೆ ಸಂದಾಯ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಅಲ್ಲದೆ, ಜವಾಬ್ದಾರಿಯುತ ಶಾಸಕರಾಗಿರುವ ಯತ್ನಾಳ ಅವರು ಮಾಡಿರುವ ಆರೋಪವನ್ನು ಗಮನಿಸಿದರೆ ಕೇಂದ್ರದಲ್ಲಿರುವ ಬಿಜೆಪಿಯ ಕೆಲ ದಲ್ಲಾಳಿಗಳು ಹಣದ ಆಧಾರದ ಮೇಲೆ ಅಧಿ​ಕಾರ ಕೊಡುವುದು ನಿಜ ಎಂದು ಸಾಬೀತಾಗಿದೆ.

Opposition slams Union Minister Pralhad Joshi over NEET remark amid Ukraine  crisis

We have to live together, says former CM Yediyurappa as communal flare-ups  rock Karnataka - India News

ಪಾಪದ ಹಣದ ಮೂಲಕ ಕೆಲ ಶಾಸಕರನ್ನು ಖರೀದಿಸಿ, ಈ ಸರ್ಕಾರ ಮಾಡಿದ್ದಾರೆ. ಇದು ಪರಿಶುದ್ಧ ಸರ್ಕಾರವೇ? ಇದು ಅಲಿಬಾಬಾ ಮತ್ತು 40 ಮಂದಿ ಕಳ್ಳರ ಸಚಿವ ಸಂಪುಟವಾಗಿದೆ ಎಂದು ಜರೆದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಎಲ್ಲದಕ್ಕೂ ದಾಖಲೆ ಕೇಳುತ್ತಾರೆ. ನಾನು 2008ರಿಂದ ಟನ್‌ಗಟ್ಟಲೇ ದಾಖಲೆಗಳನ್ನು ಇಟ್ಟಿದ್ದೇನೆ. ಆ ದಾಖಲೆಗಳನ್ನು ಇಟ್ಟುಕೊಂಡು ಯಾರ್ಯಾರೋ ದುಡ್ಡು ಮಾಡಿಕೊಂಡರು. ಅಂದು ನಾನು ದಾಖಲೆ ಬಿಡುಗಡೆ ಮಾಡಿದ್ದರ ಪರಿಣಾಮವೇ ಯಡಿಯೂರಪ್ಪ ಸಿಎಂ ಹುದ್ದೆಗೆ ರಾಜೀನಾಮೆ ಕೊಡಬೇಕಾಯಿತು ಎಂದು ಹೇಳಿದರು. 

Karnataka: Pramod Muthalik, chief of Sri Ram Sene, demands demolition of  masjid in Gadag

ರಾಜ್ಯದಲ್ಲಿ ಆಜಾನ್‌ ವಿರುದ್ಧ ಸುಪ್ರಭಾತ ಅಭಿಯಾನ ವಿಷಯದ ಕುರಿತ ಪ್ರಶ್ನೆಗೆ ಕೆಂಡಾಮಂಡಲವಾದ ಕುಮಾರಸ್ವಾಮಿ, ರಾಜ್ಯದಲ್ಲಿ ಸರ್ವ ಜನರು ಶಾಂತಿಯಲ್ಲಿ ಬಾಳಬೇಕಿದ್ದರೆ ಮುತಾಲಿಕನಂಥವರನ್ನು ಒದ್ದು ಒಳಗಡೆ ಹಾಕಬೇಕು ಎಂದು ಆಗ್ರಹಿಸಿದರು. ಅವರದ್ದು ರಾಮಸೇನೆಯೋ, ರಾವಣಸೇನೆಯೋ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇಂತಹ ವಿಷಯಗಳನ್ನು ಬೃಹದಾಕಾರವಾಗಿ ಬೆಳೆಯಲು ಸರ್ಕಾರವೇ ಮೌನವಾಗಿ ಒಪ್ಪಿಗೆ ಸೂಚಿಸಿದಂತಿದೆ. ಕೂಡಲೇ ಇದನ್ನು ನಿಲ್ಲಿಸಬೇಕು, ಸಮಾಜದಲ್ಲಿ ಒಮ್ಮೆ ಸಾಮರಸ್ಯ ಕದಡಿದರೆ, ಅದನ್ನು ಸುಲಭವಾಗಿ ಮರುಸ್ಥಾಪನೆ ಮಾಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಧ್ವನಿ ಪ್ರಮಾಣದ ಮಿತಿಯಲ್ಲಿ ಸರ್ಕಾರ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಬೇಕು. ಇದಕ್ಕೆ ಪ್ರಚಾರದ ಅವಶ್ಯಕತೆ ಬೇಕಿಲ್ಲ ಎಂದರು.

The time will come when the son of an influential person is also involved in the PSI Recruitment Scam. But what is the use of mentioning their names? Former Chief Minister H D Kumaraswamy challenged the Home Minister whether he has the capacity to rectify it. Speaking to reporters at Badami in Bagalkot district on Monday, Hegde said the government will fall if the name of the son of that influential person is revealed. He is the kingpin in the PSI recruitment scam. This government has no capacity to arrest him.