ಸ್ವಲ್ಪದರಲ್ಲಿ ತಪ್ಪಿದ ಅನಾಹುತ ; ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿ ಕಾಂಗ್ರೆಸ್, ಬಿಜೆಪಿ ನಾಯಕರಿದ್ದ ವೇದಿಕೆಗೆ ಕುಸಿದು ಬಿದ್ದ ಬೃಹತ್ ಲೈಟಿಂಗ್ಸ್ ಕಂಬ !

13-05-22 12:41 pm       HK Desk News   ಕರ್ನಾಟಕ

ಗ್ರಾಮದೇವಿ ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದಾಗ ಏಕಾಏಕಿ ಗಾಳಿಗೆ ಲೈಟಿಂಗ್ ಸೆಟ್ ಕಂಬ ಕುಸಿದು ಬಿದ್ದ ಘಟನೆ ನಡೆದಿದ್ದು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ವೇದಿಕೆಯಲ್ಲಿದ್ದವರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿ, ಮೇ 13: ಗ್ರಾಮದೇವಿ ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದಾಗ ಏಕಾಏಕಿ ಗಾಳಿಗೆ ಲೈಟಿಂಗ್ ಸೆಟ್ ಕಂಬ ಕುಸಿದು ಬಿದ್ದ ಘಟನೆ ನಡೆದಿದ್ದು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ವೇದಿಕೆಯಲ್ಲಿದ್ದವರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಗುರುವಾರ ರಾತ್ರಿ ಗ್ರಾಮದೇವಿ ಜಾತ್ರೆಯ ನಿಮಿತ್ತ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದಾಗ ಅಲ್ಲಿಯೇ ಹಾಕಿದ್ದ ಬೃಹತ್ ಲೈಟ್ ಕಂಬ ಕುಸಿದು ವೇದಿಕೆ ಮೇಲೆ ಬಿದ್ದಿದೆ. ವೇದಿಕೆಯಲ್ಲಿ ಈರಣ್ಣ ಕಡಾಡಿ ಸೇರಿದಂತೆ 20ಕ್ಕೂ ಅಧಿಕ ಮಂದಿ ಕುಳಿತುಕೊಂಡಿದ್ದರು. ಕಾರ್ಯಕ್ರಮ ಆರಂಭಗೊಂಡ ಕೆಲವೇ ಹೊತ್ತಿನಲ್ಲಿ ಲೈಟ್ ಕಂಬ ಕುಸಿದು ಬಿದ್ದಿದ್ದು, ವೇದಿಕೆಯಲ್ಲಿ ಮಾತನಾಡುತ್ತಿದ್ದವರು ಲೈಟ್ ಕಂಬ ಬೀಳುತ್ತಿರುವುದನ್ನು ನೋಡಿ ಓಡಿ ತಪ್ಪಿಸಿಕೊಂಡಿದ್ದಾರೆ.

Elections for 57 Rajya Sabha seats on June 10 - Elections News

ನೇರವಾಗಿ ಲೈಟಿಂಗ್ಸ್ ಬಲ್ಬ್ ಗಳ ಸಹಿತ ಕಂಬವು ವೇದಿಕೆಯ ಮೇಲೆ ಅಡ್ಡಲಾಗಿ ಬಿದ್ದಿದ್ದು ವೇದಿಕೆಯಲ್ಲಿದ್ದ ಗಣ್ಯರು ಕೈಯಿಂದ ರಕ್ಷಿಸಿಕೊಳ್ಳಲು ಯತ್ನಿಸಿದ್ದಾರೆ. ಲೈಟಿಂಗ್ ಕಂಬ ಕುಸಿದು ಬೀಳುತ್ತಿದ್ದಂತೆ ಕರೆಟ್ ಆಫ್ ಆಗಿದ್ದರಿಂದ ಭಾರೀ ಅನಾಹುತ ತಪ್ಪಿದೆ. ನೋಡ ನೋಡುತ್ತಲೇ ದುರಂತ ಸಂಭವಿಸಿದ್ದು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಸ್ಥಳೀಯ ಬಿಜೆಪಿ, ಕಾಂಗ್ರೆಸ್ ನಾಯಕರು ಸಭೆಯಲ್ಲಿ ಸೇರಿದ್ದರು. ಎದುರಿನಲ್ಲಿ ನೂರಾರು ಸಾರ್ವಜನಿಕರು ಸೇರಿದ್ದರು.

ಇಂತಹ ಸಂದರ್ಭದಲ್ಲಿಯೇ ದುರಂತ ನಡೆದಿದ್ದು, ಗಾಳಿಯ ರಭಸಕ್ಕೆ ಲೈಟಿಂಗ್ಸ್ ಹಾಕಿದ್ದ ಕಂಬವೇ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ. ಕಂಬ ಬೀಳುತ್ತಿದ್ದಾಗ ಯಾರು ಕೂಡ ಅಡಿಗೆ ಬೀಳದೇ ಇದ್ದುದು ಮತ್ತು ವಿದ್ಯುತ್ ಸಂಪರ್ಕ ಕಡಿತವಾಗಿದ್ದರಿಂದ ಅಪಾಯ ಆಗಿಲ್ಲ ಎನ್ನಲಾಗುತ್ತಿದೆ. ಕಂಬ ಕುಸಿದು ಬೀಳುತ್ತಲೇ ವೇದಿಕೆಯಲ್ಲಿದ್ದ ಗಣ್ಯರು ಹೊರಕ್ಕೆ ಓಡುವ ವಿಡಿಯೋ ಬೆಳಗಾವಿಯಲ್ಲಿ ವೈರಲ್ ಆಗಿದೆ.

The Chunammadevi fair is being held in Rajapur village of Moodalagi Taluk in Belagavi district. BJP Rajya Sabha member Iranna Kadadi was among the participants for the inauguration of the program. The Lighting Truss fitted for the Rasamzanri program fell down as the program was inaugurated. The lighting truss fell on the platform where Rajya Sabha member and 20 dignitaries were sitting.