ಕರ್ನಾಟಕ ವಿವಿಯಲ್ಲೂ ನೇಮಕಾತಿ ಅಕ್ರಮ ; ಯುಜಿಸಿ ನಿಮಯ ಮೀರಿ 2010-14ರ ಅವಧಿಯಲ್ಲಿ ನೇಮಕಾತಿ, ಹೈಕೋರ್ಟ್ ಆದೇಶದ ಬಳಿಕ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯಿಂದ ವಜಾ   

13-05-22 10:34 pm       Bangalore Correspondent   ಕರ್ನಾಟಕ

ಯುಜಿಸಿ ನಿಮಯಗಳ ಪ್ರಕಾರ ನೇಮಕಾತಿ ನಡೆದಿಲ್ಲ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಇತ್ತೀಚೆಗೆ ವಿಭಾಗೀಯ ಪೀಠವೂ ಎತ್ತಿಹಿಡಿದಿದ್ದರಿಂದ ಧಾರವಾಡದ ಕರ್ನಾಟಕ ವಿವಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದ ಪಿ.ಜಿ.ಶ್ರೀದೇವಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು, ಮೇ 13: ಯುಜಿಸಿ ನಿಮಯಗಳ ಪ್ರಕಾರ ನೇಮಕಾತಿ ನಡೆದಿಲ್ಲ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಇತ್ತೀಚೆಗೆ ವಿಭಾಗೀಯ ಪೀಠವೂ ಎತ್ತಿಹಿಡಿದಿದ್ದರಿಂದ ಧಾರವಾಡದ ಕರ್ನಾಟಕ ವಿವಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದ ಪಿ.ಜಿ.ಶ್ರೀದೇವಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ವಿವಿ ರಿಜಿಸ್ಟ್ರಾರ್ ಯಶ್ಪಾಲ್ ಕ್ಷೀರಸಾಗರ್ ಈ ಬಗ್ಗೆ ದೃಢಪಡಿಸಿದ್ದು, ಇಂಗ್ಲಿಷ್ ಸ್ನಾತಕೋತ್ತರ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಸಹಾಯಕ ಪ್ರಾಧ್ಯಾಪಕಿ ಪಿ.ಜಿ.ಶ್ರೀದೇವಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಆದರೆ ಅವರಿಗೆ ಈ ಬಗ್ಗೆ ಮೇಲ್ಮನವಿ ಹೋಗಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಶ್ರೀದೇವಿಯವರು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಹೋಗಲಿದ್ದಾರೆ ಎಂದು ತಿಳಿದುಬಂದಿದೆ.

20% of Karnataka high court judges' posts vacant | Bengaluru News - Times  of India

2010-14ರ ಅಕ್ರಮ ನೇಮಕಾತಿ ಪ್ರಶ್ನಿಸಿ ಅರ್ಜಿ

2010-2014ರ ನಡುವೆ ಕರ್ನಾಟಕ ವಿವಿಗೆ ನಡೆದಿದ್ದ ನೇಮಕಾತಿಗಳನ್ನು ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹಿರೇಮಠ್ 2016ರಲ್ಲಿ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠವು 2021ರ ಸೆಪ್ಟಂಬರ್ ತಿಂಗಳಲ್ಲಿ ಇಂಗ್ಲಿಷ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀದೇವಿ ನೇಮಕವನ್ನು ರದ್ದುಪಡಿಸಿತ್ತು. ಹಾಗಿದ್ದರೂ, ಅವರನ್ನು ಹುದ್ದೆಯಿಂದ ತೆಗೆದುಹಾಕದೆ ವಿವಿಯ ಸಿಂಡಿಕೇಟ್ ಸದಸ್ಯರು ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಿದ್ದರು. ಅಲ್ಲದೆ, ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಸಿಂಡಿಕೇಟ್ ಮತ್ತು ವಿವಿಯ ಆಡಳಿತ ಅವಕಾಶ ನೀಡಿತ್ತು.

ಆನಂತರ ಹುದ್ದೆಯಲ್ಲಿದ್ದುಕೊಂಡೇ ಪ್ರೊಫೆಸರ್ ಪಿ.ಜಿ.ಶ್ರೀದೇವಿ ಏಕಸದಸ್ಯ ಪೀಠದ ನಿರ್ಣಯವನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು 2022ರ ಎಪ್ರಿಲ್ 13ರಂದು ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿತ್ತು. ಇದರ ನಡುವೆಯೇ ಸೇವ್ ಯೂನಿವರ್ಸಿಟಿ ಹೆಸರಲ್ಲಿ ಕೆಲವು ಸಾಮಾಜಿಕ ಕಾರ್ಯಕರ್ತರು ವಿವಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿಯ ವಿರುದ್ಧ ಆಂದೋಲನ ಆರಂಭಿಸಿದ್ದರು. ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಹಿರೇಮಠ್, ಹೈಕೋರ್ಟ್ ನೇಮಕಾತಿ ರದ್ದುಪಡಿಸಿ ತೀರ್ಪು ನೀಡಿದ್ದರೂ, ವಿವಿಯ ಆಡಳಿತ ಶ್ರೀದೇವಿ ಅವರಿಗೆ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಿದ್ದನ್ನು ಪ್ರಶ್ನೆ ಮಾಡಿದ್ದರು. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ, ಮೇ 8ರಂದು ಶ್ರೀದೇವಿ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿರುವ ಮಾಹಿತಿಯನ್ನು ವಿವಿಯ ರಿಜಿಸ್ಟ್ರಾರ್ ನೀಡಿದ್ದಾರೆ.

ಸೇವ್ ಯೂನಿವರ್ಸಿಟಿ ಅಭಿಯಾನ

ಕರ್ನಾಟಕ ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಕೆ.ಎಸ್.ಜಯಂತ್, ಸಾಮಾಜಿಕ ಕಾರ್ಯಕರ್ತರು ನಡೆಸುತ್ತಿರುವ ಸೇವ್ ಯೂನಿವರ್ಸಿಟಿ ಅಭಿಯಾನಕ್ಕೆ ಬೆಂಬಲ ನೀಡಿದ್ದು, 2010-14ರ ನಡುವೆ ಮಾಡಲಾಗಿದ್ದ ನೇಮಕಾತಿಯನ್ನು ಹೈಕೋರ್ಟ್ ಒಂದೊಂದಾಗಿಯೇ ರದ್ದುಪಡಿಸಲಿದೆ. ಇದಲ್ಲದೆ, ಈ ಅವಧಿಯಲ್ಲಿ ನಡೆದಿದ್ದ ಎಲ್ಲ ನೇಮಕಾತಿಗಳ ಬಗ್ಗೆ ಈಗಿನ ಸಿಂಡಿಕೇಟ್ ಸದಸ್ಯರು ಪರಿಶೀಲನೆ ನಡೆಸಬೇಕು. ಸಿಂಡಿಕೇಟ್ ಮಂಡಳಿ ಈ ಬಗ್ಗೆ ಪರಿಶೀಲನೆ ನಡೆಸಲು ಉಪ ಸಮಿತಿಯೊಂದನ್ನು ರಚಿಸಬೇಕು. ನಾಲ್ಕು ವರ್ಷದಲ್ಲಿ ಯಾರಿಗೆಲ್ಲ ನೇಮಕಾತಿ ಆಗಿದೆ, ಅವರ ಶಿಕ್ಷಣದ ಅರ್ಹತೆಗಳೇನು ಅನ್ನುವ ಬಗ್ಗೆ ಪರಿಶೀಲನೆ ನಡೆಸಬೇಕು. ಈ ರೀತಿಯ ಅಕ್ರಮಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕುಲಪತಿಯವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

CBSE Boards paper leak cases: How, where and by whom - Education Today News

ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಕ್ಕೆ ಸಂಬಂಧ ಇಲ್ಲ

ಇತ್ತೀಚೆಗೆ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದ ಪ್ರಕರಣಕ್ಕೂ, ಶ್ರೀದೇವಿ ಅವರನ್ನು ವಜಾ ಮಾಡಿದ್ದಕ್ಕೂ ತಾಳೆ ಹಾಕಿ ಸುದ್ದಿ ಪ್ರಸಾರಗೊಂಡಿತ್ತು. ಆದರೆ, ಸೋರಿಕೆ ಪ್ರಕರಣಕ್ಕೂ ಮೇಲಿನ ಪ್ರಕರಣಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಕರ್ನಾಟಕ ವಿವಿಯಲ್ಲಿ ಪ್ರಭಾರ ರಿಜಿಸ್ಟ್ರಾರ್ ಆಗಿದ್ದ ಮೈಸೂರು ಮೂಲದ ನಾಗರಾಜ್ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಒಂದಕ್ಕೊಂದು ಸುದ್ದಿ ಮಿಸ್ ಆಗಿ ಎಡವಟ್ಟು ಆಗಿತ್ತು. ಕರ್ನಾಟಕ ವಿವಿಯ ಆಡಳಿತ ನಿರ್ಲಕ್ಷ್ಯ ಎಷ್ಟಿದೆ ಎಂದರೆ, ನಾಗರಾಜ್ ಅವರನ್ನು ಬಂಧಿಸಿ ಎರಡು ವಾರ ಕಳೆದರೂ, ಆ ಹುದ್ದೆಯಿಂದ ವಜಾ ಮಾಡಿರಲಿಲ್ಲ. ಇತ್ತೀಚೆಗೆ ಹುದ್ದೆಯಿಂದ ಅಮಾನತು ಅಷ್ಟೇ ಮಾಡಲಾಗಿತ್ತು.

Karnatak University issued the relieving order for PG Shride from the post of assistant professor on Saturday after the high court quashed her appointment.