ಬ್ರೇಕಿಂಗ್ ನ್ಯೂಸ್
15-05-22 06:48 pm Bangalore Correspondent ಕರ್ನಾಟಕ
Photo credits : Representative
ಬೆಂಗಳೂರು, ಮೇ 15: ಇತ್ತೀಚೆಗೆ ಎರಡೆರಡು ಬಾರಿ ರಾಜ್ಯಕ್ಕೆ ಬಂದು ಹೋಗಿದ್ದ ಕೇಂದ್ರ ಗೃಹ ಸಚಿವ ಅಮಿತಾ ಷಾ ಏನೋ ರಾಜ್ಯ ಬಿಜೆಪಿಗೆ 150 ಪ್ಲಸ್ ಟಾಸ್ಕ್ ಕೊಟ್ಟಿದ್ದರು. ಆದರೆ, ಅವರು ಎರಡನೇ ಬಾರಿ ಬಂದು ಹೋದ ವಾರದಲ್ಲೇ ಬಿಜೆಪಿ ಒಳಗಿನ ಸಮೀಕ್ಷೆಯಲ್ಲಿ ವ್ಯತಿರಿಕ್ತ ವೃತ್ತಾಂತ ಹೊರಬಿದ್ದಿದೆ. ಬಿಜೆಪಿ ಪಾಲಿನ 150 ಮಿಷನ್ ಸಾಧ್ಯವಾಗದ ಕನಸು ಅನ್ನುವ ನೆಗೆಟಿವ್ ವರದಿ ಬಿಜೆಪಿ ನಾಯಕರ ಮುಖಕ್ಕೆ ಹೊಡೆದು ಬಿಟ್ಟಿದೆ.
ಶನಿವಾರ ಕೋರ್ ಕಮಿಟಿ ನಡೆಯೋ ಮೊದಲೇ ಈ ಸಮೀಕ್ಷೆಯ ವರದಿ ರಾಜ್ಯ ಬಿಜೆಪಿ ಮತ್ತು ಅದೇ ಸಮಯಕ್ಕೆ ಅಮಿತ್ ಷಾಗೂ ರವಾನೆಯಾಗಿತ್ತು. ಇತ್ತ ರಾಜ್ಯ ನಾಯಕರು ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಫೈನಲ್ ಮಾಡಿ, ಕೇಂದ್ರಕ್ಕೆ ಕಳಿಸಿಕೊಟ್ಟಿದ್ದಾರೆ. ಆದರೆ ಪಕ್ಷದ ಒಳಗಿನ ಸಮೀಕ್ಷೆಯಲ್ಲೇ ನೆಗೆಟಿವ್ ವರದಿ ಬಂದಿರೋದ್ರಿಂದ ಇವರು ಕಳಿಸಿಕೊಟ್ಟಿರೋ ಪಟ್ಟಿಗೆ ಕೇಂದ್ರದ ನಾಯಕರು ಮುದ್ರೆ ಒತ್ತುತ್ತಾರೆ ಅನ್ನುವುದಕ್ಕೆ ಯಾವ ಖಾತ್ರಿಯೂ ಇಲ್ಲ. ಯಾಕಂದ್ರೆ, ಕಳೆದ ಬಾರಿಯೂ ರಾಜ್ಯಸಭೆ ಚುನಾವಣೆಗೆ ಕೇಂದ್ರದಿಂದ ಬೇರೆಯದೇ ಹೆಸರು ಫೈನಲ್ ಆಗಿತ್ತು.
ಇಷ್ಟಕ್ಕೂ, ರಾಜ್ಯ ಬಿಜೆಪಿಗೆ ಮೈನಸ್ ಆಗಿದ್ದು ಸ್ವಯಂಕೃತ ಅಪರಾಧಗಳೇ ಅನ್ನುವುದು ವಿಶೇಷ. ರಾಜ್ಯದಲ್ಲಿ ನಡೆದಿರುವ ಇತ್ತೀಚಿನ ಬೆಳವಣಿಗೆಗಳೇ ಬಿಜೆಪಿ ಪಾಲಿಗೆ ಮೈನಸ್ ಆಗಿವೆ ಎನ್ನಲಾಗುತ್ತಿದೆ. ಗುತ್ತಿಗೆದಾರರು ಸರಕಾರದ ಪ್ರತೀ ಹಂತದ ಕಾಮಗಾರಿಗಳಲ್ಲಿ ನಲ್ವತ್ತು ಪರ್ಸೆಂಟ್ ಆರೋಪ ಮಾಡಿದ್ದು, ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್, ರಾಜ್ಯದ ಪ್ರಭಾವಿ ಸಚಿವ ಈಶ್ವರಪ್ಪ ಹೆಸರೇಳಿ ಸಾವಿಗೆ ಶರಣಾಗಿದ್ದು, ಆನಂತರ ಎದುರಾದ ಪಿಎಸ್ಐ ನೇಮಕಾತಿಯ ಹಗರಣಗಳು ಬಿಜೆಪಿ ಪಾಲಿಗೆ ದೊಡ್ಡ ಹಿನ್ನಡೆಯಾಗಿವೆ. ಇದರ ಜೊತೆ ಜೊತೆಗೇ ಬಿಜೆಪಿಗೆ ವಲಸೆ ಬಂದು ಅಧಿಕಾರ ಹಿಡಿದ ಸಚಿವರು ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮನಸ್ಸು ಗೆಲ್ಲುವುದರಲ್ಲಿ ಸೋತಿರುವುದು, ಮೂಲ ಬಿಜೆಪಿ ನಾಯಕರು ರಾಜ್ಯದ ಈಗಿನ ರಾಜಕಾರಣದ ಶೈಲಿಗೆ ಅಸಮಾಧಾನ ಹೊಂದಿರುವುದು, ಮತ್ತೊಂದು ಕಡೆ ಸಂಪುಟ ವಿಸ್ತರಣೆ ಎನ್ನುತ್ತಲೇ ಸಮಯ ದೂಡಿದ ನಾಯಕರ ಬಗ್ಗೆ ಶಾಸಕರು ಮನಸ್ತಾಪ ಹೊಂದಿರುವುದು, ಲೂಸ್ ಟಾಕ್ ಗಳಿಂದಲೇ ವರ್ಚಸ್ಸು ಕಳಕೊಂಡ ರಾಜ್ಯಾಧ್ಯಕ್ಷ ಇತ್ಯಾದಿ ಕಾರಣದಿಂದ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂಬ ಇಚ್ಛೆಯಿಂದ ಕಾರ್ಯಕರ್ತರೇ ವಿಮುಖರಾಗಿದ್ದಾರೆ.
ಬಿಜೆಪಿ ಹೇಳಿ ಕೇಳಿ ಕಾರ್ಯಕರ್ತರ ಪಕ್ಷ. ಕಾಂಗ್ರೆಸಿನ ರೀತಿ ನಾಯಕರ ಕಾರಣದಿಂದ ಪಕ್ಷ ಬೆಳೆದು ನಿಂತಿದ್ದಲ್ಲ. ನಾಯಕರ ಗೋಣನ್ನು ಮಾತ್ರ ನೆಚ್ಚಿಕೊಳ್ಳದೆ ತಳಮಟ್ಟದಲ್ಲಿ ಆರೆಸ್ಸೆಸ್ ಬೆನ್ನಿಗೆ ನಿಂತು ಪಕ್ಷವನ್ನು ಅಧಿಕಾರಕ್ಕೆ ತಂದಿರುವುದು ಬಿಜೆಪಿ ಪ್ಲಸ್ ಪಾಯಿಂಟ್. ಆದರೆ ಕಳೆದ ಬಾರಿ ಜೆಡಿಎಸ್, ಕಾಂಗ್ರೆಸಿನ ಶಾಸಕರನ್ನು ಸೆಳೆದು ಅಧಿಕಾರಕ್ಕೆ ಬಂದ ಬಿಜೆಪಿ ರಾಜ್ಯದಲ್ಲಿ ಮೂರು ವರ್ಷಗಳಿಂದ ಆಡಳಿತ ನಡೆಸಿದರೂ ಜನಮನ ಗೆಲ್ಲುವಂತೆ ಆಡಳಿತ ನಡೆಸಿಲ್ಲ ಅನ್ನುವ ನೋವು ಕಾರ್ಯಕರ್ತರಲ್ಲಿದೆ. ಇದೇ ಕಾರಣಕ್ಕಾಗಿಯೋ ಏನೋ, ಬಿಜೆಪಿ ಒಳಗಡೆಯೇ ಗೆಲ್ಲಬಹುದಾದ 150 ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದಾಗ ವ್ಯತಿರಿಕ್ತ ಸಂದೇಶ ಬಂದಿದೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಕೇಂದ್ರ ವರಿಷ್ಠರು ಮತ್ತೆ ಮುನಿಸಿಕೊಂಡಿದ್ದಾರೆ ಎನ್ನುವ ಮಾಹಿತಿಗಳಿವೆ.
ಇದೇ ವೇಳೆ, ಉತ್ತರ ಪ್ರದೇಶ ಮಾದರಿಯಲ್ಲಿ ನೂರು ಕ್ಷೇತ್ರಗಳಲ್ಲಿ ಸಂಘಟನೆಯ ಹಿನ್ನೆಲೆಯುಳ್ಳ ಕಾರ್ಯಕರ್ತರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಬೇಕೆಂಬ ಇರಾದೆಯೂ ಆರೆಸ್ಸೆಸ್ ಮತ್ತು ಕೇಂದ್ರದ ನಾಯಕರಲ್ಲಿದೆ. ಆದರೆ, ಆ ರೀತಿಯ ಪ್ರಯೋಗ ಕರ್ನಾಟಕದಲ್ಲಿ ಬೇಳೆ ಬೇಯಿಸಬಹುದಾ, ಜಾತಿ ಪ್ರಭಾವದ ರಾಜಕಾರಣವೇ ಉತ್ತುಂಗದಲ್ಲಿರುವ ಕರ್ನಾಟಕದಲ್ಲಿ ಹಾಲಿ ನಾಯಕರನ್ನು ಬದಿಗೊತ್ತಿ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಛಾತಿಗೆ ಬಲ ಸಿಕ್ಕೀತೇ ಅನ್ನುವ ಪ್ರಶ್ನೆಗೆ ಭವಿಷ್ಯವೇ ಉತ್ತರ ಹೇಳಬೇಕಷ್ಟೆ.
BJP’s Mission 150 plus Amit Shahs get negative report of his own leaders in party.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm