ಜಾಮಿಯಾ ಮಸೀದಿಗಾಗಿ ಹೈಕೋರ್ಟ್ ಮೆಟ್ಟಿಲೇರಲು ಭಜರಂಗ ಸೇನೆ ಸಿದ್ಧತೆ ; 1001 ಹನುಮ ಭಕ್ತರಿಂದ ಪ್ರತ್ಯೇಕ ದಾವೆ 

16-05-22 02:32 pm       HK Desk News   ಕರ್ನಾಟಕ

ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯಲ್ಲಿ ಉತ್ಖನನ ಕೈಗೊಂಡಿರುವ ಬೆನ್ನಲ್ಲೇ ನಂಜನಗೂಡಿನ ಜಾಮಿಯಾ ಮಸೀದಿ ಬಗ್ಗೆಯೂ ಉತ್ಖನನ ಆಗಬೇಕೆಂಬ ಅಭಿಯಾನ ಶುರುವಾಗಿದೆ.‌

ಮಂಡ್ಯ, ಮೇ 16: ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿಯಲ್ಲಿ ಉತ್ಖನನ ಕೈಗೊಂಡಿರುವ ಬೆನ್ನಲ್ಲೇ ನಂಜನಗೂಡಿನ ಜಾಮಿಯಾ ಮಸೀದಿ ಬಗ್ಗೆಯೂ ಉತ್ಖನನ ಆಗಬೇಕೆಂಬ ಅಭಿಯಾನ ಶುರುವಾಗಿದೆ.‌ ಜಾಮಿಯಾ ಮಸೀದಿ ಕುರಿತಾಗಿ 1001 ಹನುಮ ಭಕ್ತರು ಸೇರಿ ಹೈಕೋರ್ಟ್‌ನಲ್ಲಿ ದಾವೆ ಹೂಡಲು ಸಿದ್ಧತೆ ನಡೆಸಿದ್ದಾರೆ. 

ಜಾಮಿಯಾ ಮಸೀದಿ ಹಿಂದೆ ಆಂಜನೇಯ ದೇವಸ್ಥಾನ ಆಗಿತ್ತು. ಮಸೀದಿಯ ಗೋಡೆಗಳು, ಅಲ್ಲಿ ಕಂಡುಬರುವ ಕುರುಹುಗಳು ದೇವಸ್ಥಾನವನ್ನು ಹೋಲುತ್ತಿವೆ. ಅದಕ್ಕೇನು ಉತ್ಖನನವೇ ಆಗಬೇಕಿಲ್ಲ. ಈ ಬಗ್ಗೆ ಅಧ್ಯಯನ ಕೈಗೊಳ್ಳಲು ಪುರಾತತ್ವ ಇಲಾಖೆ ಮತ್ತು ಸಂಬಂಧಪಟ್ಟ ಸಚಿವರಿಗೆ ಮೊದಲು ದೂರು ನೀಡಲಾಗುವುದು. ಸರ್ಕಾರದಿಂದ ನ್ಯಾಯ ಸಿಗುವುದಿಲ್ಲ ಎಂದಾದಲ್ಲಿ ನಾವು ಕೋರ್ಟ್ ಮೆಟ್ಟಿಲು ಏರುತ್ತೇವೆ ಎಂದು ಭಜರಂಗ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ್ ಹೇಳಿದ್ದಾರೆ. ‌

No Outdoor Ads in Bengaluru as Karnataka High Court Stays Its Own Order

ಈಗಾಗಲೇ ಹೈಕೋರ್ಟ್ ಮೆಟ್ಟಿಲೇರುವ ಬಗ್ಗೆ ವಕೀಲರೊಂದಿಗೆ ಚರ್ಚೆ ನಡೆಸಲಾಗಿದೆ. ಮುಂದಿನ ತಿಂಗಳು ಹೈಕೋರ್ಟ್‌ನಲ್ಲಿ ದಾವೆ ಹೂಡಲಿದ್ದೇವೆ. ಕಾನೂನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಪ್ರಕರಣಕ್ಕೆ ಸಂಬಂಧಿಸಿ 1001 ಮಂದಿ ದಾವೆ ಹೂಡುತ್ತಿದ್ದೇವೆ ಎಂದು ಹೇಳಿದ್ದಾರೆ. 

ಜಾಮಿಯಾ ಮಸೀದಿ ಹಿಂದೆ ಆಂಜನೇಯಸ್ವಾಮಿ ದೇವಸ್ಥಾನ ಆಗಿತ್ತು. ಇಲ್ಲಿ ಸಾಕಷ್ಟು ಕುರುಗಳು ಇವೆ. ಬಾಬ್ರಿ ಮಸೀದಿ ಮತ್ತು ಜ್ಞಾನವಾಪಿ ಮಸೀದಿಗಿಂತಲೂ ಹೆಚ್ಚು ಕುರುಹು ಇಲ್ಲಿದೆ. ಹೀಗಾಗಿ ಇದನ್ನು ಹಿಂದೂಗಳಿಗೆ ಬಿಟ್ಟು ಕೊಡಬೇಕು ಎಂದು ಮಂಜುನಾಥ್ ಹೇಳಿದ್ದಾರೆ.

Weeks after staging a protest in front of Jamia Masjid in Srirangapatna, 18km from Mysuru and the capital of erstwhile ruler Tipu Sultan, urging the Karnataka government to stop the ASI site from being used as a prayer hall, a group of activists have submitted a petition to the Mandya deputy commissioner seeking permission to offer pooja at the mosque.