ಬ್ರೇಕಿಂಗ್ ನ್ಯೂಸ್
20-05-22 10:07 pm HK Desk News ಕರ್ನಾಟಕ
ಕಾರವಾರ, ಮೇ 20 : ನಕಲಿ ನೋಟು ಮುದ್ರಿಸಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಪೂರೈಕೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸದಸ್ಯರಿದ್ದ ಕುಟುಂಬವನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ಕಾರವಾರದ ಕೋಡಿಬಾಗದ ಮುಸ್ತಾಕ್ ಬೇಗ್ (43), ಆತನ ಪತ್ನಿ ಸೀಮಾ ಮುಸ್ತಾಕ್ (40), ಅಪ್ಜಲ್ ಬೇಗ್ (45) ಮತ್ತು ಈತನ ಪತ್ನಿ ಆಸ್ಮಾ ಬೇಗ್ ಬಂಧಿತ ಆರೋಪಿಗಳು. ಮುಸ್ತಾಕ್ ಮತ್ತು ಅಪ್ಜಲ್ ಇಬ್ಬರೂ ಸಹೋದರರಾಗಿದ್ದು ಚಾಲಕ ವೃತ್ತಿ ಮಾಡುತ್ತಿದ್ದರು. ಇವರು ಮನೆಯಲ್ಲಿಯೇ ನಕಲಿ ನೋಟು ಮುದ್ರಿಸಿ ಹುಬ್ಬಳ್ಳಿ ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಪೂರೈಕೆ ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆ ವೇಳೆ ಪತ್ತೆಯಾಗಿದೆ.
ಬಂಧಿತರಿಂದ ನಕಲಿ ನೋಟು ಮುದ್ರಿಸಲು ಬಳಸುತ್ತಿದ್ದ ಪ್ರಿಂಟರ್, ಲ್ಯಾಪ್‌ಟಾಪ್, 500 ಮುಖಬೆಲೆಯ ನೋಟುಗಳು ಮತ್ತು ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಂದ ಪಡೆದು ನಕಲಿ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರನ್ನು ಕಾರವಾರ ಪೊಲೀಸರು ಮೇ 5ರಂದು ಬಂಧಿಸಿದ್ದರು. ಕಾರವಾರದ ಪ್ರವೀಣ ನಾಯರ್, ಗೋವಾ ರಾಜ್ಯದ ಮಡಗಾಂವ್‌ನ ಲೋಯ್ಡ್ ಲಾರೆನ್ಸ್ ಸ್ಟೇವಿಸ್, ಲಾರ್ಸನ್ ಸಿಲ್ವಾ, ಪ್ರಣಯ್ ಫೆರ್ನಾಂಡಿಸ್ ಅರೆಸ್ಟ್ ಆಗಿದ್ದರು. ಆ ವೇಳೆ ಅಪ್ಜಲ್ ಬೇಗ್ ತಪ್ಪಿಸಿಕೊಂಡಿದ್ದನು. ವಿಶೇಷ ತಂಡ ರಚಿಸಿ ಪತ್ತೆಗಿಳಿದ ಪೊಲೀಸರು ಆರೋಪಿಗಳ ಮೊಬೈಲ್ ಸಂಪರ್ಕ ಮತ್ತು ವಿವಿಧ ಮೂಲಗಳ ಮಾಹಿತಿ ಆಧರಿಸಿ ಗೋವಾದಲ್ಲಿ ಬಂಧಿಸಿದ್ದಾರೆ. ಇದರಲ್ಲಿ ಅಪ್ಜಲ್ ಮತ್ತು ಮುಸ್ತಾಕ್ ನಕಲಿ ನೋಟು ಮುದ್ರಿಸುವಲ್ಲಿ ಕೌಶಲ ಹೊಂದಿದ್ದರು ಎಂದು ವಿಚಾರಣೆ ವೇಳೆ ಪತ್ತೆಯಾಗಿದೆ.
ಆರೋಪಿಗಳು ಕಾರವಾರದಲ್ಲೇ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು. ಆದರೆ, ನೋಟುಗಳನ್ನು ಹೆಚ್ಚಾಗಿ ಬೇರೆ ಜಿಲ್ಲೆಗಳಲ್ಲಿಯೇ ಚಲಾವಣೆ ಮಾಡುತ್ತಿದ್ದರು. ಗೋವಾ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ತಮ್ಮ ಪರಿಚಯಸ್ಥರಿಗೆ ನಕಲಿ ನೋಟುಗಳನ್ನು ಪೂರೈಸುತ್ತಿದ್ದರು. ಸ್ಥಳೀಯವಾಗಿ ಹೆಚ್ಚು ವ್ಯವಹಾರ ಮಾಡುತ್ತಿರಲಿಲ್ಲ. 7 - 8 ತಿಂಗಳಿಂದ ಈ ದಂಧೆ ನಡೆಸುತ್ತಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.
Two prime accused in the inter-state fake currency racket busted by Karwar police earlier this month were arrested from Margao on Thursday.
Police gave the names of those arrested as Mushtaq Hasan Beg, 43, and Afzal Hasan Beg, 45.Two of their family members, Seema Mushtaq Beg, 40, and Asma Afzal Beg, who were also involved in the racket have been arrested, police sources said.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm