ಬ್ರೇಕಿಂಗ್ ನ್ಯೂಸ್
21-05-22 10:11 pm Bengalore Correspondent ಕರ್ನಾಟಕ
ಬೆಂಗಳೂರು, ಮೇ 21: ಅಲ್ಲಿನ ಕಟ್ಟಡದ ಎಡವಟ್ಟು ಕಾರಣವೋ, ಯುವಕ- ಯುವತಿ ಕಟ್ಟಡದ ಮೂಲೆಯಲ್ಲಿ ತಳ್ಳಾಡಿದ್ದು ಕಾರಣವೋ ಗೊತ್ತಿಲ್ಲ. ಬೆಂಗಳೂರಿನಲ್ಲಿ ಅತ್ಯಂತ ಹೃದಯ ವಿದ್ರಾವಕ ಘಟನೆ ನಡೆದಿದ್ದು ಬ್ರಿಗೇಡ್ ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್ ಬಂದಿದ್ದ ಯುವ ಪ್ರೇಮಿಗಳಿಬ್ಬರು ಕಟ್ಟಡದ ನಾಲ್ಕನೇ ಮಹಡಿಯ ಮೂಲೆಯಿಂದ ಕೆಳಕ್ಕೆ ಬಿದ್ದು ಯುವತಿ ದುರಂತ ಸಾವು ಕಂಡಿದ್ದಾಳೆ.
ಮೆಟ್ಟಿಲು ಹತ್ತಿ ಹೋಗುವ ಮೂಲೆಯಲ್ಲಿ ಗ್ಲಾಸ್ ಮುಚ್ಚಿರುವ ಜಾಗದಿಂದ ಯುವಕ- ಯುವತಿ ಹೊರಕ್ಕೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಮೃತ ಯುವತಿಯನ್ನು ಫ್ರೇಸರ್ ಟೌನ್ ನಿವಾಸಿ ಲಿಯಾ(20) ಎಂದು ಗುರುತಿಸಲಾಗಿದೆ. ಯುವಕನನ್ನು ಮೂಲತಃ ಆಂಧ್ರಪ್ರದೇಶದ ಕ್ರಿಸ್ ಪೀಟರ್ (18) ಎಂದು ಗುರುತಿಸಿದ್ದು ಆಸ್ಪತ್ರೆಗೆ ದಾಖಲಾಗಿದ್ದು ಅಪಾಯದಿಂದ ಪಾರಾಗಿದ್ದಾನೆ. ಯುವತಿ ನೆಲಕ್ಕೆ ಬೀಳುತ್ತಲೇ ತಲೆಯ ಭಾಗ ಒಡೆದು ಹೋಗಿದ್ದು, ಗಂಭೀರ ಸ್ಥಿತಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಷ್ಟರಲ್ಲೇ ಆಕೆ ಸಾವು ಕಂಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹುಡುಗ ಬೆಂಗಳೂರಿನ ಎಚ್‌ಎಎಲ್ ನಿವಾಸಿಯಾಗಿದ್ದು, ಇಬ್ಬರೂ ಸೆಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಲಿಯಾ ಮತ್ತು ಕ್ರಿಸ್ ಪೀಟರ್ ಇಬ್ಬರೂ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದವರು. ಇಂದು ಮದ್ಯಾಹ್ನ ಊಟಕ್ಕೆಂದು ಬ್ರಿಗೇಡ್ ರಸ್ತೆಯ ಶಾಪಿಂಗ್ ಕಾಂಪ್ಲೆಕ್ಸ್ ಒಂದಕ್ಕೆ ಬಂದಿದ್ದಾರೆ. ಅಲ್ಲಿ ಊಟ ಮುಗಿಸಿ, ವಾಶ್‌ರೂಂಗೆ ತೆರಳಿ ಕೆಳಕ್ಕೆ ಇಳಿಯುವಾಗ ಏನೋ ಮಾತನಾಡಲೆಂದು ಮೂಲೆಯಲ್ಲಿ ನಿಂತಿದ್ದು ಈ ವೇಳೆ ಯುವತಿ ಆಯತಪ್ಪಿದ್ದು ಆಕೆಯನ್ನು ಹಿಡಿಯಲು ಹೋದ ಹುಡುಗ ಇಬ್ಬರೂ ಹೊರಕ್ಕೆ ಜಾರಿದ್ದಾರೆ. ಈ ವೇಳೆ, ಹುಡುಗಿ ನೇರವಾಗಿ ನೆಲಕ್ಕೆ ಅಪ್ಪಳಿಸಿದರೆ, ಯುವಕ ಆಕೆಯ ಮೇಲೆ ಬಿದ್ದಿದ್ದಾನೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ ಯುವತಿ ಮೊದಲು ಜಾರಿದ್ದಾಳೆ, ಅವಳನ್ನು ಹಿಡಿಯಲು ಹೋದ ಹುಡುಗ ಕೂಡ ಅವಳ ಜತೆಗೇ ಕೆಳಕ್ಕೆ ಬಿದ್ದಿದ್ದಾನೆ. ಕೆಳಗೆ ಬೀಳುವಾಗ ಯುವತಿಯ ಮೇಲೆ ಯುವಕ ಬಿದ್ದ ಕಾರಣ ಆತ ಜೀವಂತ ಉಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ ಪಬ್ ಹೋಗಲು ರೆಡಿಯಾಗ್ತಿದ್ದೆವು
ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಹುಡುಗ ಕ್ರಿಸ್ ಪೀಟರ್, ಲಿಯಾ ಮತ್ತು ತಾನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ. ಕಾಲೇಜಿಗೆ ರಜೆ ಇದ್ದುದರಿಂದ ಶಾಪಿಂಗ್ ಹೋಗಲು ಲಿಯಾ ಜೊತೆಗೆ ಬಂದಿದ್ದೆ. ಇಂದು ಸಂಜೆ ಸ್ನೇಹಿತನ ಹುಟ್ಟುಹಬ್ಬ ಆಚರಣೆ ಬ್ರಿಗೇಡ್ ರಸ್ತೆಯ ಪಬ್ ಒಂದರಲ್ಲಿ ಇಟ್ಟುಕೊಳ್ಳಲಾಗಿತ್ತು. ಶಾಪಿಂಗ್ ಹೋಗಿ ಅಲ್ಲೇ ಊಟ ಮಾಡಿ, ಸಂಜೆ ಪಬ್ ಗೆ ಹೋಗಲು ನಿರ್ಧಾರ ಮಾಡಿದ್ದೆವು ಎಂದು ಹೇಳಿದ್ದಾನೆ. ಹುಡುಗ ಹೆಚ್ಚಿನ ಅಪಾಯ ಇಲ್ಲದೆ ಪಾರಾಗಿದ್ದಾನೆ. ಯುವತಿ ಸ್ಥಳದಲ್ಲೇ ಸಾವು ಕಂಡಿದ್ದರೆ, ಯುವಕ ಅಲ್ಲಿಯೇ ಕುಳಿತು ಸಹಾಯ ಬೇಡುತ್ತಿದ್ದ ಫೋಟೋ ಪೊಲೀಸರಿಗೆ ಲಭಿಸಿದೆ. ಆದರೆ ಯುವತಿಯನ್ನು ದೂಡಿ ಹಾಕಿದ್ದನೇ, ಆಕೆಯೇ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ ಎನ್ನುವ ಶಂಕೆಯೂ ಇದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಟ್ಟಡದ ಮೆಟ್ಟಿಲ ಹಾದಿಯಲ್ಲಿ ಸರಳುಗಳಿಲ್ಲದೆ, ಓಪನ್ ಗ್ಲಾಸ್ ಕೊಟ್ಟಿರುವ ಕಟ್ಟಡ ನಿರ್ಮಾಣಕಾರರ ಬಗ್ಗೆಯೂ ಪೊಲೀಸರು ನಿರ್ಲಕ್ಷ್ಯದ ಬಗ್ಗೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
A 20-year-old woman succumbed to injuries after she accidentally fell from the window on the second floor of a shopping complex on Brigade Road on Saturday. Her male friend, who fell from the same place and sustained severe injuries, is undergoing treatment in a hospital.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm