ಬ್ರೇಕಿಂಗ್ ನ್ಯೂಸ್
22-05-22 08:35 pm HK News Desk ಕರ್ನಾಟಕ
Photo credits : Viaya Karnataka
ಮೈಸೂರು, ಮೇ 22 : ಇನ್ನೇನು ಅತ್ತ ಗಟ್ಟಿಮೇಳ ಬಾರಿಸಬೇಕು, ವರ ವಧುವಿನ ಕೊರಳಿಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ದಿಢೀರ್ ಆಗಿ ವಧುವಿನ ರೂಪದಲ್ಲಿ ಅಲಂಕರಿಸಿದ್ದ ಯುವತಿ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವಿಚಿತ್ರ ಹೈಡ್ರಾಮಾ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಮಧ್ಯಾಹ್ನ ಹೈಡ್ರಾಮಾ ನಡೆದಿದ್ದು, ಮದುವೆಗೆ ಬಂದಿದ್ದ ಸಂಬಂಧಿಕರು, ಸ್ನೇಹಿತರನ್ನೆಲ್ಲ ಗೊಂದಲಕ್ಕೀಡು ಮಾಡಿತ್ತು. ಮೈಸೂರಿನ ಸುಣ್ಣದಕೇರಿ ನಿವಾಸಿಯಾದ ವಧು ಸಿಂಚನಾ ನಾಟಕದಿಂದಾಗಿ ಕೊನೆ ಕ್ಷಣದಲ್ಲಿ ಮದುವೆಯೇ ಮುರಿದು ಬಿತ್ತು.
ಸಿಂಚನಾ ಜೊತೆಗೆ ಎಚ್.ಡಿ ಕೋಟೆ ತಾಲ್ಲೂಕಿನ ಗ್ರಾಮದ ಯುವಕ ಮದುವೆ ಆಗಬೇಕಿತ್ತು. ಆದರೆ, ಸುಣ್ಣದ ಕೇರಿಯಲ್ಲಿ ತನ್ನ ಪಕ್ಕದ ಮನೆಯ ಯುವಕನನ್ನು ಸಿಂಚನಾ ಪ್ರೀತಿಸುತ್ತಿದ್ದಳು. ಆದರೆ ಯುವತಿಗೆ ಮತ್ತೊಬ್ಬ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿದ್ದರಿಂದ ಪ್ರಿಯಕರ ಸಿಟ್ಟಾಗಿದ್ದ. ಅಲ್ಲದೆ, ಸಿಂಚನಾಳನ್ನು ಮದುವೆ ಆಗಬೇಡ ಎಂದು ವರನಿಗೇ ಮೆಸೇಜ್ ಹಾಕಿ ಆವಾಜ್ ಹಾಕಿದ್ದ. ಈ ಬಗ್ಗೆ ವರನ ಕಡೆಯವರು ಸಿಂಚನಾಗೆ ಕೇಳಿದಾಗ, ಆ ಯುವಕನ ಜೊತೆ ತನಗೆ ಯಾವುದೇ ಸಂಬಂಧ ಇಲ್ಲ ಎಂದಿದ್ದಳು. ಅಷ್ಟೇ ಅಲ್ಲ, ಆತನ ಮೆಸೇಜ್‌ಗೂ ನನಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಳು. ಆದರೆ, ಮದುವೆ ದಿನ ಹತ್ತಿರ ಬಂದು ಮುನ್ನಾದಿನದ ಸಡಗರ ಎಲ್ಲ ಮುಗಿದು ಮದುವೆ ಮಂಟಪದಲ್ಲಿ ಇದ್ದಕ್ಕಿದ್ದಂತೆಯೇ ಸಿಂಚನಾ ನಾಟಕ ಮಾಡಿದ್ದು ಸೇರಿದ್ದ ಎಲ್ಲರನ್ನೂ ಅಚ್ಚರಿಗೀಡು ಮಾಡಿದಳು.
ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ಮದುವೆ ಮುರಿದುಬಿದ್ದ ಕಾರಣ ವರನ ಪೋಷಕರು ವಧುವಿನ ಪೋಷಕರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ನಾವು ಮದುವೆಗಾಗಿ 5 ಲಕ್ಷ ರೂ. ಖರ್ಚು ಮಾಡಿದ್ದೇವೆ. ವಧುವಿಗೆ ಚಿನ್ನ ಹಾಗೂ ರೇಷ್ಮೆ ಸೀರೆಗಾಗಿ ಲಕ್ಷಾಂತರ ರೂ. ಖರ್ಚಾಗಿದೆ. ಕೊನೇ ಕ್ಷಣದಲ್ಲಿ ಮದುವೆ ಬೇಡವೆಂದರೆ ಹೇಗೆ ಎಂದು ಪ್ರಶ್ನಿಸಿದ ವರನ ಪೋಷಕರು ಪ್ರಶ್ನೆ ಮಾಡಿದ್ದು ನಮಗಾದ ಖರ್ಚಿನ ಹಣವನ್ನು ನೀವೇ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ಎರಡೂ ಕಡೆಯ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಅಲ್ಲಿ ಇತ್ಯರ್ಥವಾಗಲು ಜಟಾಪಟಿ ನಡೆದಿದೆ.
Mysuru wedding stopped by Bride as she is in love with another boy, Grooms parents file complaint, bride arrested by Police.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm