ನಂಬರ್ ಪ್ಲೇಟ್ ಮೇಲೆ ಲೋಗೊ, ಹೆಸರು ಇರುವಂತಿಲ್ಲ ! ಸಹಕಾರಿ ಸಂಸ್ಥೆ, ನಿಗಮ, ಮಂಡಳಿ ಅಧ್ಯಕ್ಷರಿಗೂ ನಿಯಮ ಅನ್ವಯ ! ನಾಮಫಲಕ ತೆರವಿಗೆ ಸರಕಾರದ ಸುತ್ತೋಲೆ 

23-05-22 11:58 am       Bengalore Correspondent   ಕರ್ನಾಟಕ

ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆ ಜಾರಿಗೊಳಿಸಿರುವ ಮೋಟಾರು ವಾಹನ ನಿಯಮಗಳನ್ನು ರಾಜ್ಯದಲ್ಲಿ ಯಥಾವತ್ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರದ ನಿರ್ಧರಿಸಿದೆ.

ಬೆಂಗಳೂರು, ಮೇ 23: ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆ ಜಾರಿಗೊಳಿಸಿರುವ ಮೋಟಾರು ವಾಹನ ನಿಯಮಗಳನ್ನು ರಾಜ್ಯದಲ್ಲಿ ಯಥಾವತ್ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರದ ನಿರ್ಧರಿಸಿದೆ. ಅದರಂತೆ ನಂಬರ್ ಪ್ಲೇಟ್‌ ಮೇಲೆ ಯಾವುದೇ ಹೆಸರು, ಸರ್ಕಾರಿ ಲಾಂಛನ, ಇತರ ಲೋಗೋ ಸೇರಿದಂತೆ ಯಾವುದೂ ಇರುವಂತಿಲ್ಲ. ಕೇವಲ ವಾಹನ ನೋಂದಣಿ ಸಂಖ್ಯೆ ಮಾತ್ರ ಇರಬೇಕು ಎಂಬುದಾಗಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. 

1989 ರ ಮೋಟಾರು ವಾಹನ ನಿಯಮದಲ್ಲಿರುವ ಮಾನದಂಡಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಇದಕ್ಕೆ ಸರ್ಕಾರಿ ನೌಕರರು, ನಿಗಮ ಮಂಡಳಿ, ಸಹಕಾರಿ ಸಂಘದ ಅಧ್ಯಕ್ಷರು ಹೊರತಲ್ಲ. ನಂಬರ್ ಪ್ಲೇಟ್ ಮೇಲೆ ಸಂಘ ಸಂಸ್ಥೆಗಳ ಹೆಸರು, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಯಾವುದೇ ಲೋಗೋ ಕೂಡ ಇರಬಾರದು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ. 

Tamper-proof registration plates from 2019 | Deccan Herald

ನಂಬರ್ ಪ್ಲೇಟ್ ಕೆಳಭಾಗದಲ್ಲಿ ಅಥವಾ ಮೇಲ್ಬಾಗದಲ್ಲಿ ಸರ್ಕಾರಿ ಲೋಗೋ, ಸರ್ಕಾರಿ ಸಂಸ್ಥೆಗಳ ಹೆಸರು ಬಳಕೆ ಮಾಡುವುದಿದ್ದರೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ವಾಹನಗಳ ನಂಬರ್ ಪ್ಲೇಟ್ ಮೇಲೆ ಯಾವುದೇ ಬರಹ, ಸ್ಟಿಕ್ಕರ್ ಇರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಕರ್ನಾಟಕ ರಾಜ್ಯಪತ್ರದಲ್ಲಿ ಎರಡು ದಿನಗಳ ಹಿಂದೆ ಸುತ್ತೋಲೆ ಹೊರಡಿಸಿದ್ದಾರೆ. ವಾಹನಗಳ ನೋಂದಣಿ ಫಲಕಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮದ ಮಾನದಂಡಗಳಿಗೆ ಅನುಗುಣವಾಗಿ ಅಳವಡಿಸಬೇಕು ಎಂದು ತಿಳಿಸಿದ್ದಾರೆ.

Karnataka Vehicle registration plates should not have any stickers and logo orders state government.