ನೂಪುರ್ ಶರ್ಮಾ 'ಧೈರ್ಯಶಾಲಿ ಮಹಿಳೆ'ಯೆಂದು ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ; ಮುಸ್ಲಿಂ ಯುವಕನ ಬಂಧನ 

13-06-22 11:56 am       HK News Desk   ದೇಶ - ವಿದೇಶ

ಬಿಜೆಪಿ ನಾಯಕಿ ನೂಪುರ್ ಶರ್ಮಾ ಬಗ್ಗೆ ಧೈರ್ಯಶಾಲಿ ಮಹಿಳೆ ಎಂದು ಹೊಗಳಿ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 

ಮುಂಬೈ, ಜೂನ್ 13 : ಬಿಜೆಪಿ ನಾಯಕಿ ನೂಪುರ್ ಶರ್ಮಾ ಬಗ್ಗೆ ಧೈರ್ಯಶಾಲಿ ಮಹಿಳೆ ಎಂದು ಹೊಗಳಿ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 

ಯುವಕ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ನಗರದ ನಿವಾಸಿಯಾಗಿದ್ದು ಈ ಹಿಂದೆ ಪ್ರವಾದಿ ಮಹಮ್ಮದ್‌ ಪೈಗಂಬರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ ಮಾಡಿದ ಆರೋಪವೂ ಈತನ ಮೇಲಿದೆ. 

Muslim boy in Bhiwandi thrashed, arrested for supporting Nupur Sharma

ಸಾಮಾಜಿಕ ಜಾಲತಾಣದ ಪೋಸ್ಟ್‌ ವೈರಲ್‌ ಆದ ಬೆನ್ನಲ್ಲೇ ಉದ್ರಿಕ್ತ ಗುಂಪೊಂದು ಯುವಕನ ಮನೆಗೆ ತೆರಳಿ, ಆತನ ಮೇಲೆ ಹಲ್ಲೆ ನಡೆಸಿತ್ತು. ಹಲ್ಲೆ ನಡೆಸುವ ವಿಡಿಯೋ ಕೂಡ ವೈರಲ್‌ ಆಗಿತ್ತು. ಯುವಕನ ಮನೆಯ ಮುಂದೆ ಮುಸ್ಲಿಂ ಸಮುದಾಯದ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ.

Bhiwandi police detain Muslim boy over derogatory remark on Prophet,  supporting Nupur Sharma

ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಯುವಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಎಫ್‌ಐಆರ್‌ ದಾಖಲಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Police on Sunday detained a 19-year-old Muslim man at Bhiwandi town in Maharashtra's Thane district for allegedly posting a derogatory remark on Prophet Mohammad and showing support to now-suspended BJP spokesperson Nupur Sharma over her controversial comments, a senior official said. The accused was taken into custody by the police after tense situation prevailed in the town over his viral social media post, which angered the members of the Muslim community, he confirmed.