ಬ್ರೇಕಿಂಗ್ ನ್ಯೂಸ್
05-10-26 11:40 am HK News Staffer ದೇಶ - ವಿದೇಶ
ರಿಯಾದ್ , ಅ.5: ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸಲು ಬಯಸಿದ್ದಾಗಿ ಒಮಾನ್ ಮೂಲದ ಸಹ ಪೈಲಟ್ ಹಮಾಮ್ ಅಲ್ ಹಮಾಮಿ ಸೌದಿ ಅಧಿಕಾರಿಗಳ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ‘ನಾನು ಸಾವಿಗೆ ಅಂಜುವುದಿಲ್ಲ’ ಎಂಬ ಅರ್ಥದಲ್ಲಿ ಹಮಾಮಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿರುವುದು, ಕೃತ್ಯದ ಹಿಂದೆ ಉಗ್ರವಾದಿಗಳ ಕೈವಾಡದ ಬಗ್ಗೆ ಗಂಭೀರ ಶಂಕೆ ಮೂಡಿಸಿದೆ.
ಹಲ್ಲೆ ಘಟನೆ ಬಳಿಕ ಪ್ರಯಾಣಿಕರು ಹಾಗೂ ವಿಮಾನದಲ್ಲಿದ್ದ ಇತರ ಪೈಲಟ್‌ಗಳ ಮಧ್ಯಪ್ರವೇಶದಿಂದ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಗಿತ್ತು. ಘಟನೆಯ ಬಳಿಕ ಹಮಾಮಿಯನ್ನು ವಶಕ್ಕೆ ಪಡೆಯಲಾಗಿತ್ತು.
ಸಿರಿಯನ್ ಮನಸ್ಥಿತಿಯ ಅಲ್ ಹಮ್ಮಾಮಿ
ಅಲ್ ಹಮಾಮಿ ತಂದೆ ಒಮಾನ್ ಪ್ರಜೆಯಾಗಿದ್ದರೆ, ತಾಯಿ ಸಿರಿಯಾ ಮೂಲದವರು. ಹೀಗಾಗಿ ಹೆಚ್ಚಿನ ಸಮಯ ಸಿರಿಯಾದಲ್ಲಿ ಕಳೆದಿದ್ದು ಮೂಲಭೂತವಾದಿ ಮನಸ್ಥಿತಿ ಬೆಳೆಸಿಕೊಂಡಿದ್ದ. ಹೀಗಾಗಿ ಮೊದಲಿಗೆ ಒಮಾನ್ ದೇಶದ ವಿಮಾನ ಕಂಪನಿಗಳಲ್ಲಿ ಪೈಲಟ್ ಆಗಿದ್ದರೂ, ಆತನ ಹಿನ್ನೆಲೆಯನ್ನು ಅರಿತು ಆ ದೇಶ ಪೈಲಟ್ ಕೆಲಸದಿಂದ ತೆಗೆದುಹಾಕಿತ್ತು. ಅಲ್ಲದೆ, ಆತ ಉಗ್ರಗಾಮಿ ವಿಚಾರಗಳಿಂದ ಪ್ರಭಾವಿತನಾಗಿದ್ದ ಎನ್ನುವುದಕ್ಕು ತನಿಖೆಯಲ್ಲಿ ಸಾಕ್ಷ್ಯ ಸಿಕ್ಕಿದೆ. ಆತನ ಜಾಲತಾಣದಲ್ಲಿ ಅಲ್ ಖೈದಾ ಉಗ್ರ ಅಲ್ ಜವಾಹಿರಿಯ ಫೋಟೊ ಹಾಕಿರುವುದು ಪತ್ತೆಯಾಗಿದೆ.





ಒಮಾನ್ ದೇಶದಲ್ಲಿ ನಿಷೇಧ ಇದ್ದಾಗಿಯೂ, ಯುಎಇ ತನ್ನ ಫ್ಲೈದುಬೈ ವಿಮಾನದಲ್ಲಿ ಪೈಲಟ್ ಆಗಿ ಅಲ್ ಹಮಾಮಿಯನ್ನು ಕೆಲಸಕ್ಕೆ ನೇಮಿಸಿಕೊಂಡಿತ್ತು. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಸ್ರೇಲ್ ನಡುವಿನ ಸೂಕ್ಷ್ಮ ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ನೀಡಿತ್ತು. ಇದೀಗ ಸೌದಿ ಅರೇಬಿಯಾ ಮತ್ತು ಯುಎಇ ಭದ್ರತಾ ಸಂಸ್ಥೆಗಳು ಹಮ್ಮಾಮಿ ವಿಚಾರಣೆ ನಡೆಸುತ್ತಿದ್ದು, ಇಸ್ರೇಲ್‌ನಲ್ಲೇ ವಿಮಾನವನ್ನು ಕ್ರ್ಯಾಶ್ ಮಾಡುವುದು ತನ್ನ ಗುರಿಯಾಗಿತ್ತು ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ದಾಳಿಗೂ ಮುನ್ನ ವಿಮಾನದ ಕಾಕ್‌ಪಿಟ್‌ನಲ್ಲಿ ಈತ ಪ್ರಾರ್ಥನೆ ಮಾಡಲು ಎದ್ದು ನಿಂತಿದ್ದ. ಪ್ರಾರ್ಥನೆ ಮುಗಿಯುತ್ತಿದ್ದಂತೆ ಎದ್ದು ನಿಂತು ಏಕಾಏಕಿ ಕ್ಯಾಪ್ಟನ್ ಸ್ಮಿತ್ ಮೇಲೆ ದಾಳಿ ನಡೆಸಿದ್ದಾನೆ. ಇದನ್ನು ಸ್ಮಿತ್ ಕೂಡ ಹೇಳಿಕೊಂಡಿದ್ದಾರೆ. ಕಾಕ್‌ಪಿಟ್‌ನಲ್ಲಿದ್ದ ಎಮರ್ಜೆನ್ಸಿ ಕೊಡಲಿಯನ್ನು ತೆಗೆದುಕೊಂಡು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಹಿಂಭಾಗಕ್ಕೆ ಏಕಾಏಕಿ ಹಲ್ಲೆ ನಡೆಸಿದ್ದ.
ವಿಚಾರಣೆ ವೇಳೆ ಜಾಗತಿಕ ಉಗ್ರ ಸಂಘಟನೆ ಅಲ್ ಖೈದಾ ಸಿದ್ಧಾಂತದಿಂದ ಪ್ರೇರಿತನಾಗಿದ್ದ. ಅದಲ್ಲದೆ, ಈತ ವಿಮಾನ ಕಂಪನಿಯ ಕಚೇರಿಗಳಲ್ಲಿ ಯಾವುದೇ ಮಹಿಳಾ ಸಿಬ್ಬಂದಿಗೆ ‘ಶೇಕ್ ಹ್ಯಾಂಡ್’ ಸಹ ಮಾಡುತ್ತಿರಲಿಲ್ಲ. ಮಹಿಳಾ ಸಿಬಂದಿಯನ್ನು ಸಮಾನ ದೃಷ್ಟಿಯಿಂದ ನೋಡುತ್ತಿರಲಿಲ್ಲ ಎಂಬುದು ಪತ್ತೆಯಾಗಿದೆ.
ಅಲ್ ಖೈದಾ ಶ್ಲಾಘನೆ, ಅಮೆರಿಕ ಅಂತ್ಯಕ್ಕೆ ಕರೆ !
ಇದೇ ವೇಳೆ, ಫ್ಲೈದುಬೈ ವಿಮಾನ ಹೈಜಾಕ್ ಮಾಡಲು ಯತ್ನಿಸಿದ ಘಟನೆಯನ್ನು ಉಗ್ರ ಸಂಘಟನೆ ಅಲ್ ಖೈದಾ ಶ್ಲಾಘಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಇಸ್ರೇಲ್, ಅಮೆರಿಕನ್ನರು ಸಂಚರಿಸುವ ವಿಮಾನಗಳ ಮೇಲೆ ಇದೇ ರೀತಿಯ ದಾಳಿಗೆ ಅಲ್ ಖೈದಾ ಕರೆ ನೀಡಿದೆ. ದುಷ್ಟ ಅಮೆರಿಕ ಶೀಘ್ರದಲ್ಲೇ ಅಂತ್ಯವಾಗಲಿದೆ ಎಂದು ಸಂದೇಶ ರವಾನಿಸಲಾಗಿದೆ. ಅಲ್ ಖೈದಾ ನಂಟಿರುವ ಟೆಲಿಗ್ರಾಂ ಚಾನೆಲ್‌ಗಳಲ್ಲಿ ಈ ಸಂದೇಶ ರವಾನಿಸಲಾಗಿದೆ ಎಂದು ದಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
"ಯುದ್ಧ ಇನ್ನೂ ಮುಗಿದಿಲ್ಲ. ಇಸ್ಲಾಂ ವಿರುದ್ಧ ಹೋರಾಡುತ್ತಿರುವ ಯಹೂದಿಗಳು, ಅಮೆರಿಕನ್ನರನ್ನು ಹೊತ್ತ ವಿಮಾನಗಳು ಆಕಾಶದಲ್ಲಿ ಹಾರಾಡುತ್ತಿರುತ್ತವೆ. 9/11 ಮಾದರಿಯಲ್ಲಿ ಆ ವಿಮಾನಗಳನ್ನು ಗುರಿಯಾಗಿಸಬಹುದು. ಅಮೆರಿಕ, ಯಹೂದಿಗಳು ಈಗ ಮೊದಲಿಗಿಂತ ಹೆಚ್ಚು ಶತ್ರುಗಳನ್ನು ಹೊಂದಿದ್ದಾರೆ. ಇಂತಹ ಕಾರ್ಯಾಚರಣೆಯಿಂದ ಅಂತಿಮವಾಗಿ ಇಸ್ಲಾಂಗೆ ಪ್ರಯೋಜನವಾಗುತ್ತದೆ, ದುಷ್ಟ ಅಮೆರಿಕ ಸಾಮ್ರಾಜ್ಯ ಅಂತ್ಯಗೊಳ್ಳುವ ದಿನ ಬಂದೇ ಬರುತ್ತದೆ" ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 11:40 am
HK News Staffer
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
Smith Machar, Mankind Pharma: 180 ಜೀವ ಉಳಿಸಿದ...
03-10-26 01:00 pm
ಹನುಮಾನ್ ಚಾಲೀಸಾ ಜಪಿಸುತ್ತಲೇ ಕಾಕ್ಪಿಟ್ ಬಾಗಿಲು ತೆ...
02-10-26 05:28 pm
05-10-26 11:41 am
HK News Staffer
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
KSCA, Mangaluru: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ...
02-10-26 05:20 pm
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
05-10-26 12:28 pm
HK News Staffer
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am
ಕಾಲೇಜು ಕ್ಯಾಂಟೀನ್ ಬಳಿ ಬಿಸಿಎ ವಿದ್ಯಾರ್ಥಿಗೆ ಚೂರಿ...
04-10-26 12:51 pm
ಪುತ್ತೂರು ; ವಿದ್ಯುತ್ ಸ್ಪರ್ಶಿಸಿ ಪವರ್ಮ್ಯಾನ್ ಸಾ...
03-10-26 08:46 pm