ಬ್ರೇಕಿಂಗ್ ನ್ಯೂಸ್
04-10-26 07:07 pm HK News Staffer ದೇಶ - ವಿದೇಶ
ಬೆಂಗಳೂರು, ಅ.4: ಹಾಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 2006ರಲ್ಲಿ ಕೇರಳದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ನಡೆದಿದ್ದ ಕೆಎಸ್‌ಟಿಪಿ ರಸ್ತೆ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪಗಳು ಹಾಗೂ ಈ ಯೋಜನೆಗೆ ಸಂಬಂಧಿಸಿ ಮಲೇಷ್ಯಾ ಮೂಲದ ಸಿವಿಲ್ ಎಂಜಿನಿಯರ್ ಸಾವಿನ ಪ್ರಕರಣ ಕುರಿತು ಮರು ತನಿಖೆ ನಡೆಸಲು ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಆದೇಶ ಹೊರಡಿಸಿದ್ದಾರೆ.
2006ರಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧ ನಡೆದಿದ್ದ ಪ್ರಾಥಮಿಕ ವಿಜಿಲೆನ್ಸ್ ವಿಚಾರಣೆಗೆ ಸಂಬಂಧಿಸಿದ ಕಡತಗಳನ್ನು ಕೇರಳ ಗೃಹ ಇಲಾಖೆ ಇತ್ತೀಚೆಗೆ ಕೋರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆ ನಡೆಸುವಂತೆ ಕೆಪಿಸಿಸಿ ನಾಯಕ ವೇಣುಗೋಪಾಲ್ ದೂರು ಸಲ್ಲಿಸಿದ ಬಳಿಕ ಚೆನ್ನಿತ್ತಲ ಅವರು ಹೊಸದಾಗಿ ತನಿಖೆಗೆ ಆದೇಶಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಜ್ಞಾನೇಶ್ ಕುಮಾರ್ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಮೊದಲು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಪ್ರಾಥಮಿಕ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಚೆನ್ನಿತ್ತಲ, ತಾವು ದೂರನ್ನು ಪರಿಶೀಲಿಸಿದ್ದು, ಆರೋಪಗಳಲ್ಲಿ ಮೇಲ್ನೋಟಕ್ಕೆ ಸತ್ಯಾಂಶ ಕಂಡುಬಂದಿದೆ ಎಂದು ಹೇಳಿದರು.
ವಿಸ್ತೃತ ಭ್ರಷ್ಟಾಚಾರ ನಿಗ್ರಹ ತನಿಖೆ ಅಗತ್ಯ ಎಂಬ ತೀರ್ಮಾನಕ್ಕೆ ಬಂದಿದ್ದು, ಮುಖ್ಯಮಂತ್ರಿ ಜೊತೆಗೆ ಮಾತನಾಡಿದ ಬಳಿಕ ವಿಸ್ತೃತ ತನಿಖೆ ನಡೆಸುವಂತೆ ವಿಜಿಲೆನ್ಸ್ ನಿರ್ದೇಶಕ ಮನೋಜ್ ಅಬ್ರಹಾಂ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು. ಪ್ರಕರಣವು ಕೇರಳ ರಾಜ್ಯ ಸಾರಿಗೆ ಯೋಜನೆ (KSTP) ಅಡಿಯಲ್ಲಿ ಎಂಸಿ ರಸ್ತೆಯ ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ PATI-BEL ಒಕ್ಕೂಟದೊಂದಿಗೆ ಕೆಲಸ ಮಾಡುತ್ತಿದ್ದ ಮಲೇಷ್ಯಾದ ಸಿವಿಲ್ ಎಂಜಿನಿಯರ್ ಲೀ ಸೀ ಬೀನ್ ಅವರ ಆತ್ಮಹತ್ಯೆಗೆ ಸಂಬಂಧಿಸಿದ್ದಾಗಿದೆ.
2006ರಲ್ಲಿ ವಿಶ್ವಬ್ಯಾಂಕ್ ನೆರವಿನಿಂದ 215 ಕೋಟಿ ರೂ ವೆಚ್ಚದಲ್ಲಿ ಅಂಗಮಾಲಿ– ತಿರುವನಂತಪುರಂ ನಡುವಿನ ಎಂಸಿ ರಸ್ತೆಯ ಪುನರ್ ನಿರ್ಮಾಣ ಯೋಜನೆಯನ್ನು ಕೆಎಸ್‌ಟಿಪಿ ಕೈಗೆತ್ತಿಕೊಂಡಿತ್ತು. ಮಲೇಷ್ಯಾದ ಕಂಪನಿ ಮತ್ತು ಭಗೀರಥ ಎಂಜಿನಿಯರಿಂಗ್‌ನ ಜಂಟಿ ಸಹಭಾಗಿತ್ವದ PATI-BEL ಸಂಸ್ಥೆ ಈ ಯೋಜನೆಯ ಕಾಮಗಾರಿಯನ್ನು ಕೈಗೊಂಡಿತ್ತು. ಕಾಮಗಾರಿ ನಡೆಯುತ್ತಿದ್ದ ವೇಳೆ ಲೀ ಅವರು ಹಲವು ದೂರುಗಳನ್ನು ನೀಡಿದ್ದರು. ಮಲೇಷ್ಯಾಕ್ಕೆ ಮರಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಸಚಿವ ಚೆನ್ನಿತ್ತಲ ತಿಳಿಸಿದರು.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
04-10-26 07:07 pm
HK News Staffer
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
Smith Machar, Mankind Pharma: 180 ಜೀವ ಉಳಿಸಿದ...
03-10-26 01:00 pm
ಹನುಮಾನ್ ಚಾಲೀಸಾ ಜಪಿಸುತ್ತಲೇ ಕಾಕ್ಪಿಟ್ ಬಾಗಿಲು ತೆ...
02-10-26 05:28 pm
ಇಸ್ರೇಲ್ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ? ಒಮಾ...
02-10-26 10:23 am
03-10-26 09:56 pm
HK News Staffer
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
KSCA, Mangaluru: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ...
02-10-26 05:20 pm
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
Madoor Yusuf Murder Case: ಜೈಲಿನಲ್ಲಿ ಮಾಡೂರು ಯೂ...
01-10-26 10:45 pm
04-10-26 12:51 pm
HK News Staffer
ಪುತ್ತೂರು ; ವಿದ್ಯುತ್ ಸ್ಪರ್ಶಿಸಿ ಪವರ್ಮ್ಯಾನ್ ಸಾ...
03-10-26 08:46 pm
Mangalore Crime, Mangalore Police, Delhi Thie...
03-10-26 06:39 pm
Kasaragod crime: ಕಾಸರಗೋಡು ; ಮನೆ ಮೇಲೆ ಬಿದ್ದ ಬೋ...
03-10-26 05:05 pm
Infra Developers, Vasudevan: ಬೆಂಗಳೂರಿನಲ್ಲಿ ಫ್...
03-10-26 03:41 pm