'ವಿಕ್ರಮ ಬೇತಾಳ' ಜನಕ, ಲೆಜೆಂಡರಿ ಆರ್ಟಿಸ್ಟ್ ಕೆ.ಸಿ.ಸಿವಸಂಕರ್ ನಿಧನ

30-09-20 10:56 am       Headline Karnataka News Network   ದೇಶ - ವಿದೇಶ

ಚಂದಮಾಮ, ವಿಕ್ರಮ ಬೇತಾಳ ಕತೆಗಳನ್ನು ಮಕ್ಕಳ ಮನಮುಟ್ಟುವಂತೆ ಕೈಚಳಕ ತೋರಿದ್ದ ಲೆಜೆಂಡರಿ ಆರ್ಟಿಸ್ಟ್ ಕೆ.ಸಿ. ಸಿವಸಂಕರ್ ನಿಧನರಾಗಿದ್ದಾರೆ. 

ಚೆನ್ನೈ, ಸೆಪ್ಟಂಬರ್ 30: ಚಂದಮಾಮ, ವಿಕ್ರಮ ಬೇತಾಳ ಕತೆಗಳನ್ನು ಮಕ್ಕಳ ಮನಮುಟ್ಟುವಂತೆ ಕೈಚಳಕ ತೋರಿದ್ದ ಲೆಜೆಂಡರಿ ಆರ್ಟಿಸ್ಟ್ ಕೆ.ಸಿ. ಸಿವಸಂಕರ್ (97) ನಿಧನರಾಗಿದ್ದಾರೆ. 

ಚಂದಮಾಮ ಹೆಸರು ಕೇಳಿದರೆ ರಾಜಾ ವಿಕ್ರಮ ತನ್ನ ತೋಳಿನಲ್ಲಿ ಬೇತಾಳನನ್ನು ತುಂಬಿಕೊಂಡು ಕೈಯಲ್ಲಿ ಖಡ್ಗ ಹಿಡಿದು ಸಾಗುತ್ತಿದ್ದ ಚಿತ್ರ ನೆನಪಿಗೆ ಬರುತ್ತದೆ. ತನ್ನ ಹಿಂಬಾಲಿಸುವ ಬೇತಾಳನನ್ನು ಸೋಲಿಸಿ, ತನ್ನ ತೋಳಿನಲ್ಲಿ ಹಾಕಿ ಕರೆದೊಯ್ಯುವ ಕಥೆಗಳು ಅಂದಿನ ಮಕ್ಕಳಲ್ಲಿ ಕಚಗುಳಿ ಇಟ್ಟಿದ್ದವು. 1960 ರ ದಶಕದಲ್ಲಿ ಬರೆಯುತ್ತಿದ್ದ ಚಂದಮಾಮ ಸರಣಿ ಕಥೆಗಳಿಗೆ ಜೀವ ತುಂಬುತ್ತಿದ್ದುದೇ ಈ ಸಿವಸಂಕರ್. ಪೆನ್ಸಿಲ್ ಗೆರೆಗಳ ಮೂಲಕವೇ ಡಿಂಗ, ವಿಕ್ರಮರ ಚಿತ್ರಗಳನ್ನು ಬರೆಯುತ್ತಿದ್ದರು ಸಂಕರ್. 

ಚಂದಮಾಮ ಸರಣಿ ಕಥೆಗಳ ಜನಕರಲ್ಲಿ ಕಲಾವಿದ ಸಂಕರ್ ಕೊನೆಯ ಕೊಂಡಿಯಾಗಿದ್ದರು. ಉಳಿದವರೆಲ್ಲ ಈಗಾಗ್ಲೇ ಇಹಲೋಕ ತ್ಯಜಿಸಿದ್ದರು. ಚಂದಮಾಮ ಜೊತೆಗೆ ಅಂಬುಲಿಮಾಮ ಕಥೆಗಳಿಗೆ ಜೀವ ತುಂಬಿದ್ದ ಇವರ ಚಿತ್ರಗಳು ದೇಶಾದ್ಯಂತ ಜನರನ್ನು ತಲುಪಿದ್ದವು. ಶಿವಶಂಕರ್ ಮೂಲತಃ ತಮಿಳ್ನಾಡಿನ ಈರೋಡ್ ನಿವಾಸಿ.