ಭಾರತದಿಂದ ಮತ್ತೊಂದು ಮಹತ್ವದ ಸಾಧನೆ: 'ಶೌರ್ಯ' ಕ್ಷೀಪಣಿ ಪರೀಕ್ಷೆ ಯಶಸ್ವೀ

03-10-20 09:39 pm       Headline Karnataka News Network   ದೇಶ - ವಿದೇಶ

ಭಾರತದ ಮೊಟ್ಟಮೊದಲ ದೇಸೀ ನಿರ್ಮಿತ ಶಬ್ದಾತೀತ ಪರಮಾಣು ಸಾಮರ್ಥ್ಯದ ಕ್ಷಿಪಣಿ 'ಶೌರ್ಯ'ವನ್ನು ಶನಿವಾರ ಒಡಿಸ್ಸಾ ತೀರದಿಂದ ಉಡಾಯಿಸಲಾಯಿತು.

ಒಡಿಸ್ಸಾ, ಅಕ್ಟೋಬರ್. 03 : ಗಡಿಯಲ್ಲಿ ಚೀನಾದೊಂದಿಗಿನ ಬಿಕ್ಕಟ್ಟು ಹೆಚ್ಚಿರುವ ಹೊತ್ತಲ್ಲೇ, ಭಾರತ ಒಡಿಸ್ಸಾದ ಬಾಲಾಸೋರ್​ನಲ್ಲಿ ಹೊಸ ಆವೃತ್ತಿಯ ಶೌರ್ಯ ಸರ್ಫೇಸ್​ ಟು ಸರ್ಫೇಸ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿಸುವ ಮೂಲಕ  ತನ್ನ ರಕ್ಷಣಾ ಸಾಮರ್ಥ್ಯದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ.

 ಶೌರ್ಯ ಕ್ಷಿಪಣಿ ಹೊಸ ಆವೃತ್ತಿಯು, ಸುಮಾರು 800 ಕಿಲೋಮೀಟರ್​ ದೂರದ ಟಾರ್ಗೆಟ್​​ಗೆ ಹೊಡೆಯಬಲ್ಲ ಸಾಮರ್ಥ್ಯ ಹೊಂದಿದೆ. ಈಗಾಗಲೇ ಭಾರತದಲ್ಲಿ ಇರುವ ಕ್ಷಿಪಣಿಗಳ ಬಲಕ್ಕೆ ಇದು ಮತ್ತಷ್ಟು ಶಕ್ತಿ ತುಂಬಿದೆ. 

ಈಗಿರುವ ಕ್ಷಿಪಣಿಗಳಿಗೆ ಹೋಲಿಸಿದ್ರೆ ನೂತನ ಶೌರ್ಯ ಕ್ಷಿಪಣಿ ಕಡಿಮೆ ತೂಕದ್ದಾಗಿದ್ದು, ಬಳಸಲು ಕೂಡ ಸುಲಭ. ಟಾರ್ಗೆಟ್​​ ಸಮೀಪಿಸುತ್ತಿದ್ದಂತೆ ಈ ಮಿಸೈಲ್​​ ಹೈಪರ್​ಸೋನಿಕ್ ವೇಗದಲ್ಲಿ ಚಲಿಸುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.ಈ ಹಿಂದೆ ಭಾರತ, 400 ಕಿ.ಮೀ ದೂರದ ಟಾರ್ಗೆಟ್​​ಗೆ ಹೊಡೆಯಬಲ್ಲ ಬ್ರಹ್ಮೋಸ್​ ಸೂಪರ್​ಸೋನಿಕ್ ಕ್ರೂಸ್​​ ಮಿಸೈಲ್​ ಪರೀಕ್ಷೆ ನಡೆಸಿ ಯಶಸ್ವಿಯಾಗಿತ್ತು.

ರಕ್ಷಣಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಆತ್ಮನಿರ್ಭರ್ ಭಾರತ್' ಕರೆ ನೀಡಿದ ನಂತರ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತನ್ನ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿದು ಬಂದಿದೆ