ರಿಲಯನ್ಸ್ ನಲ್ಲಿ 7,350 ಕೋಟಿ ರೂ. ಹೂಡಿಕೆ ಮಾಡಿದ ವಿಶ್ವದ ಎರಡು ಪ್ರಸಿದ್ಧ ಸಂಸ್ಥೆಗಳು!!

04-10-20 12:46 pm       Headline Karnataka News Network   ದೇಶ - ವಿದೇಶ

ತನ್ನ ರಿಟೇಲ್‌ ವಹಿವಾಟಿನ ಷೇರುಗಳನ್ನು ಜಿಐಸಿ ಮತ್ತು ಟಿಪಿಜಿ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ₹ 7,350 ಕೋಟಿ ಸಂಗ್ರಹಿಸುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ತಿಳಿಸಿದೆ

ಮುಂಬೈ,ಅಕ್ಟೋಬರ್.04 :  ವಿಶ್ವದ ಎರಡು ಪ್ರಸಿದ್ಧ ಸಂಸ್ಥೆಗಳು  ಭಾರತದ ಹೆಮ್ಮೆಯ ರಿಲಯನ್ಸ್ ನಲ್ಲಿ  ಒಟ್ಟು 7350 ಕೋಟಿ ರೂ.ಗಳ ಬಂಡವಾಳ ಹೂಡುತ್ತಿದೆ.

 ಸಿಂಗಾಪುರದ ಜಿಐಸಿ ಮತ್ತು ಟಿಪಿಜಿ ಸಂಸ್ಥೆಗಳು  ಸದ್ಯ ರಿಲಯನ್ಸ್ ನಲ್ಲಿ ಬಂಡವಾಳ ಹೂಡಿದೆ. ಜಿಐಸಿ ಕಂಪನಿಯು ಶೇ 1.22 ರಷ್ಟು ಷೇರುಗಳನ್ನು ಖರೀದಿಸುವ ಮೂಲಕ ₹ 5,512.5 ಕೋಟಿ ಹೂಡಿಕೆ ಮಾಡಿದ್ದು, ಟಿಪಿಜಿ  ಕಂಪನಿಯು ಶೇ 0.41ರಷ್ಟು ಷೇರುಗಳನ್ನು ಖರೀದಿಸಿ ₹ 1,837.5 ಕೋಟಿ ಹೂಡಿಕೆ ಮಾಡಿದೆ ಎಂದು ರಿಲಯನ್ಸ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋದಲ್ಲಿ ಫೇಸ್‌ಬುಕ್, ಗೂಗಲ್ ಸೇರಿದಂತೆ 13 ದಿಗ್ಗಜ ಕಂಪನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಮುಕೇಶ್‌ ಅಂಬಾನಿ ಲಕ್ಷಾಂತರ ಕೋಟಿ ರೂಪಾಯಿಯ ಹೂಡಿಕೆಗೆ ಕಾರಣವಾಗಿದ್ದರು. ಇದೀಗ ರಿಲಯನ್ಸ್ ರೀಟೆಲ್‌ನಲ್ಲಿ ಒಂದರ ಹಿಂದೆ ಮತ್ತೊಂದರಂತೆ ಕಂಪನಿಗಳನ್ನು ತನ್ನತ್ತ ಸೆಳೆಯುತ್ತಿದ್ದಾರೆ. 

ರಿಲಯನ್ಸ್‌ ಇಂಡಸ್ಟ್ರೀಸ್‌ ಸೆಪ್ಟೆಂಬರ್‌ 9 ರಿಂದ ಇಲ್ಲಿಯವರೆಗೆ ಶೇ 7.28 ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದು ₹ 32,197.50 ಕೋಟಿ ಸಂಗ್ರಹಿಸಿದೆ