ಪ್ರಾರ್ಥನೆ ವೇಳೆ ಮಸೀದಿಯಲ್ಲಿ ಬಾಂಬ್ ಸ್ಫೋಟ ; 20 ಮಂದಿ ಜೀವ ಬಲಿ, 50ಕ್ಕೂ ಹೆಚ್ಚು ಜನರಿಗೆ ಗಾಯ ! 

18-08-22 11:01 am       HK News Desk   ದೇಶ - ವಿದೇಶ

ಖೈರ್ ಖಾನಾ ಪ್ರದೇಶದ ಮಸೀದಿಯಲ್ಲಿ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿದೆ.

ಕಾಬೂಲ್, ಆಗಸ್ಟ್ 18: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‍ನ ಮಸೀದಿಯ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 20 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಖೈರ್ ಖಾನಾ ಪ್ರದೇಶದ ಮಸೀದಿಯಲ್ಲಿ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿದೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಘಟನೆಯಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸಿರುವ ಸಾಧ್ಯತೆಗಳಿವೆ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.ಸದ್ಯ ಸ್ಥಳದಲ್ಲಿ ಭದ್ರತಾ ಪಡೆ ಬೀಡು ಬಿಟ್ಟಿವೆ. ಘಟನೆಯಲ್ಲಿ ಇಮಾಮ್ ಮೌಲಾವಿ ಅಮೀರ್ ಮೊಹಮ್ಮದ್ ಕಾವೂಲಿ ಕೂಡ ಸಾವನ್ನಪ್ಪಿದ್ದಾರೆ.  

At least 20 feared dead in Kabul bomb blast, several more injured

ISIS Bomber Kills Dozens at Shiite Mosque in Northern Afghanistan - The New  York Times

Blast rips through mosque in Afghan capital, casualties feared

12 ದಿನಗಳ ಹಿಂದಷ್ಟೇ ನಡೆದಿತ್ತು ಬಾಂಬ್ ಸ್ಫೋಟ ; 

ಆಗಸ್ಟ್ 6ರಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನ ಮಸೀದಿಯೊಂದರ ಬಳಿ ಕಾರ್ಟ್‌ನಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡು 8 ಜನರು ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದರು. ಈಗ ಮತ್ತೆ ಬಾಂಬ್ ಸ್ಫೋಟ ಸಂಭವಿಸಿದೆ.

A massive explosion ripped through a mosque in Afghanistan's capital Kabul. At least 20 people are feared dead with several injured. This is the latest bomb blast to have hit Afghanistan as the country saw one year anniversary of the Taliban coming back to power. The bomb blast took place at the Siddiquiya Mosque located in Kabul.The blast took place on August 17, 2022, during evening prayers when the mosque was packed with people.