ಇಷ್ಟಕ್ಕೂ ನೋಯ್ಡಾ ಅವಳಿ ಕಟ್ಟಡ ಕೆಡವಿದ್ದೇಕೆ ? ಕೇವಲ ಒಂಬತ್ತು ಮೀಟರ್ ಅಂತರದಲ್ಲಿ ಕಟ್ಟಿದ್ದ ಟವರ್ ! ಸುಪ್ರೀಂ ಚಾಟಿಗೆ ಭ್ರಷ್ಟ ಅಧಿಕಾರಸ್ಥರ ಎದೆ ಢವ ಢವ ! ಒಂಬತ್ತೇ ಸೆಕೆಂಡಿನಲ್ಲಿ ಕಟ್ಟಡ ನೆಲಸಮ ಆಗಿದ್ಹೇಗೆ ?  

28-08-22 08:11 pm       HK News Desk   ದೇಶ - ವಿದೇಶ

ದೆಹಲಿಯ ಐತಿಹಾಸಿಕ ಕುತುಬ್ ಮಿನಾರ್ ಗಿಂತಲೂ ಎತ್ತರವಾಗಿದ್ದ ಕಟ್ಟಡ ಅದಾಗಿತ್ತು. ಆದರೆ, ಅವಳಿ ಕಟ್ಟಡಗಳನ್ನು ನಿಮಯ ಮೀರಿ, ಸಾರ್ವಜನಿಕ ಹಿತ ಕಡೆಗಣಿಸಿ ಕಟ್ಟಲಾಗಿತ್ತು.

ನವದೆಹಲಿ, ಆಗಸ್ಟ್ 28: ದೆಹಲಿಯ ಐತಿಹಾಸಿಕ ಕುತುಬ್ ಮಿನಾರ್ ಗಿಂತಲೂ ಎತ್ತರವಾಗಿದ್ದ ಕಟ್ಟಡ ಅದಾಗಿತ್ತು. ಆದರೆ, ಅವಳಿ ಕಟ್ಟಡಗಳನ್ನು ನಿಮಯ ಮೀರಿ, ಸಾರ್ವಜನಿಕ ಹಿತ ಕಡೆಗಣಿಸಿ ಕಟ್ಟಲಾಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶದಂತೆ, ನೋಯ್ಡಾ ನಗರದಲ್ಲಿ ಅಕ್ರಮವಾಗಿ ಒಂಬತ್ತು ವರ್ಷಗಳಿಂದ ಎದ್ದು ನಿಲ್ಲಿಸಿದ್ದ 40 ಮಹಡಿಯ ಕಟ್ಟಡವನ್ನು ಕೇವಲ ಒಂಬತ್ತು ಸೆಕೆಂಡಿನಲ್ಲಿ ಕೆಡವಿ ಹಾಕಲಾಗಿದೆ.

ಅವಳಿ ಕಟ್ಟಡವನ್ನು ಕೆಡವಲು ಸುಮಾರು 3700 ಕೇಜಿ ಸ್ಫೋಟಕಗಳನ್ನು ಬಳಸಲಾಗಿತ್ತು. ಎರಡು ವಾರಗಳಿಂದ ಪ್ರತಿ ಮಹಡಿ ಮತ್ತು ಅದರ ಪಿಲ್ಲರ್ ಗಳೆಡೆಯಲ್ಲಿ ಸ್ಫೋಟಕಗಳನ್ನು ಹುದುಗಿಸುವ ಕೆಲಸ ನಡೆದಿತ್ತು. ರಾಜಧಾನಿ ದೆಹಲಿ ಹೊರವಲಯದ ನೋಯ್ಡಾ – ಗ್ರೇಟರ್ ನೋಯ್ಡಾ ಎಕ್ಸ್ ಪ್ರೆಸ್ ವೇ ಹೆದ್ದಾರಿಯ ಬದಿಯಲ್ಲಿರುವ ಕಟ್ಟಡವನ್ನು ಕೆಡವುದಕ್ಕೂ ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದರು. ಯಾಕಂದ್ರೆ, ಜನ ನಿಬಿಡ ಮತ್ತು ಆಸುಪಾಸಿನಲ್ಲಿ ಕಟ್ಟಡಗಳು ಇದ್ದುದರಿಂದ ಬೇರೆಯದಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿತ್ತು. 7.5 ಲಕ್ಷ ಚದರಡಿ ವ್ಯಾಪ್ತಿಯಲ್ಲಿದ್ದ ಕಟ್ಟಡವನ್ನು ಕೆಡವುದೇ ಚಿಂತೆಯಾಗಿತ್ತು. ಬಳಿಕ ಮುಂಬೈನ ಎಡಿಫೈಸ್ ಇಂಜಿನಿಯರಿಂಗ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ದಕ್ಷಿಣ ಆಫ್ರಿಕಾ ಮೂಲದ ಜೆಟ್ ಡೆಮೋಲಿಶನ್ ಅನ್ನುವ ಕಂಪನಿ ಸಹಯೋಗದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕಟ್ಟಡವನ್ನು ನೆಲಸಮ ಮಾಡಲಾಗಿದೆ.  

ಇಷ್ಟಕ್ಕೂ ಅವಳಿ ಕಟ್ಟಡ ಕೆಡವಿದ್ದೇಕೆ ?

Supreme Court: Latest news, Updates, Photos, Videos and more.

ಗಂಭೀರ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ಕಟ್ಟಿದ್ದೇ ಸುಪ್ರೀಂ ಕೋರ್ಟ್ ಕೆಡವಲು ಆದೇಶ ನೀಡುವುದಕ್ಕೆ ಮುಖ್ಯ ಕಾರಣ. ನೋಯ್ಡಾ ಪ್ರಾಧಿಕಾರ ಮತ್ತು ಕಟ್ಟಡ ನಿರ್ಮಾಣ ಕಂಪನಿ ಸೂಪರ್ ಟೆಕ್ ಅಧಿಕಾರಿಗಳ ಕೊಡು-ಕೊಳ್ಳುವಿಕೆಯ ಭ್ರಷ್ಟಾಚಾರದಿಂದ ನಿಯಮಗಳನ್ನು ಮುರಿದು ಅವಳಿ ಕಟ್ಟಡ ರಚಿಸಲಾಗಿತ್ತು. ಪ್ರಮುಖವಾಗಿ ಎರಡು ಕಟ್ಟಡಗಳ ನಡುವೆ ನಿರ್ದಿಷ್ಟ ಅಂತರ ಇರಬೇಕು. ಮಹಡಿಗಳ ನಡುವೆಯೂ ಒಂದೇ ರೀತಿಯ ಅಂತರ ಇರಬೇಕು. ಅವಳಿ ಗೋಪುರಗಳಲ್ಲಿ ಮಹಡಿಗಳ ಎತ್ತರವೂ ಬೇರೆ ಬೇರೆ ಇತ್ತೆನ್ನುವುದು ನಿಯಮಗಳ ಉಲ್ಲಂಘನೆಯಾಗಿತ್ತು.

2004ರಲ್ಲಿ ಕಟ್ಟಡ ನೀಲನಕ್ಷೆ, 2014ರಲ್ಲೇ ಆಕ್ಷೇಪ

Twin towers demolition: Supertech says it lost Rs 500 cr

ಸೂಪರ್ ಟೆಕ್ ಎಮರಾಲ್ಡ್ ಕೋರ್ಟ್ ಎಂಬ ಕಂಪನಿ 2004ರಲ್ಲಿ ನೋಯ್ಡಾ ನಗರದ 93 ಎ ಸೆಕ್ಟರ್ ನಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ ಪ್ರಾಧಿಕಾರದಲ್ಲಿದ್ದ ಆಗಿನ ಅಧಿಕಾರಿಗಳು 14 ಮಹಡಿ ಮತ್ತು 9 ಮಹಡಿಯ ಅವಳಿ ಕಟ್ಟಡ ರಚನೆಗೆ ಅನುಮತಿ ನೀಡಿದ್ದರು. ಆದರೆ 2012ರಲ್ಲಿ ಒಟ್ಟು ಯೋಜನೆಯನ್ನು ಪೂರ್ತಿ ಪರಿವರ್ತನೆ ಮಾಡಲಾಗಿತ್ತು. ನೋಯ್ಡಾ ಪ್ರಾಧಿಕಾರ, ಕಂಪನಿ ಪ್ರತಿನಿಧಿಗಳು ಮುಂದಿಟ್ಟಿದ್ದ 40 ಮಹಡಿಯ ಅವಳಿ ಗೋಪುರ ನಕ್ಷೆಗೆ ನಿಮಯ ಉಲ್ಲಂಘಿಸಿ ಅನುಮತಿ ನೀಡಿದ್ದರು. 2014ರಲ್ಲಿ ಕಟ್ಟಡ ನಿರ್ಮಾಣದ ವಿರುದ್ಧ ನೋಯ್ಡಾದ ಫ್ಲಾಟ್ ನಿವಾಸಿಗಳ ಕಲ್ಯಾಣ ಸಂಘದ ವತಿಯಿಂದ ಅಲಹಾಬಾದ್ ಹೈಕೋರ್ಟಿಗೆ ಆಕ್ಷೇಪ ಸಲ್ಲಿಸಲಾಗಿತ್ತು. ಕಟ್ಟಡ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಹೈಕೋರ್ಟ್, 40 ಮಹಡಿಗಳ ಉದ್ದೇಶಿತ ಕಟ್ಟಡವನ್ನು ಕಂಪೆನಿ ಖರ್ಚಿನಲ್ಲೇ ನೆಲಸಮ ಮಾಡುವಂತೆ ಆದೇಶ ಮಾಡಿತ್ತು. ಇದಲ್ಲದೆ, ಅದಾಗಲೇ ಫ್ಲಾಟ್ ಖರೀದಿಸಲು ಬುಕ್ಕಿಂಗ್ ಮಾಡಿದ್ದವರಿಗೆ 14 ಶೇಕಡಾ ಬಡ್ಡಿ ಸಹಿತ ಹಣವನ್ನು ಹಿಂತಿರುಗಿಸುವಂತೆ ಆದೇಶದಲ್ಲಿ ತಿಳಿಸಿತ್ತು.

ಹೈಕೋರ್ಟ್ ಆದೇಶ ಇದ್ದರೂ ಕಟ್ಟಡ ನಿರ್ಮಾಣ  

Allahabad High Court - Wikipedia

News18 Evening Digest: Noida Twin Towers Demolished, India to Face Pak in  Asia Cup & Other Top Stories

ಒಂದೆಡೆ ಕಟ್ಟಡ ನಿರ್ಮಾಣ ಆಗುತ್ತಿರುವಾಗಲೇ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. ವಾದ- ವಿವಾದ ನಡೆಯುತ್ತಿರುವಾಗಲೇ ಒಂಬತ್ತು ವರ್ಷಗಳಲ್ಲಿ ಅವಳಿ ಗೋಪುರಗಳು ಎದ್ದು ನಿಂತಿದ್ದವು. ವರ್ಷದ ಹಿಂದೆ ಕಟ್ಟಡದ ಕಾಮಗಾರಿ ಬಹುತೇಕ ಅಂತಿಮಗೊಂಡಿತ್ತು. ಆದರೆ 2021ರ ಆಗಸ್ಟ್ ನಲ್ಲಿ ವಿಚಾರಣೆ ಮುಗಿಸಿದ ಸುಪ್ರೀಂ ಕೋರ್ಟ್, ಅವಳಿ ಕಟ್ಟಡವನ್ನು ಧ್ವಂಸ ಮಾಡುವಂತೆ ಹೇಳಿದ್ದ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. ಇದಲ್ಲದೆ, ಈ ರೀತಿಯ ನಿಯಮ ಉಲ್ಲಂಘನೆಗೆ ಕಾರಣವಾದ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಆದೇಶ ಮಾಡಿತ್ತು. 2021ರ ಆಗಸ್ಟ್ 31ಕ್ಕೆ ನ್ಯಾ.ಡಿವೈ ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರಿದ್ದ ಪೀಠವು ಈ ಬಗ್ಗೆ ಆದೇಶ ಹೊರಡಿಸಿ, ಮೂರು ತಿಂಗಳಲ್ಲಿ ಕಟ್ಟಡ ಧ್ವಂಸಕ್ಕೆ ತಿಳಿಸಿತ್ತು. ಆನಂತರ, ನೋಯ್ಡಾ ಪ್ರಾಧಿಕಾರ ಸಮಯ ಕೇಳಿದ್ದರಿಂದ ಅಂತಿಮ ಗಡುವು ಹೆಚ್ಚಿಸಲಾಗಿತ್ತು. ಕೋರ್ಟ್ ಆದೇಶ ಹೊರಡಿಸಿ, ಒಂದು ವರ್ಷ ಪೂರ್ತಿಯಾಗಲು ಮೂರು ದಿನ ಇರುವಾಗ ಆಗಸ್ಟ್ 28ರಂದು ಕಟ್ಟಡ ನೆಲಸಮಗೊಂಡಿದೆ.

9 ಮೀಟರ್ ಅಂತರದಲ್ಲಿ ಅವಳಿ ಕಟ್ಟಡ !

ನೋಯ್ಡಾ ಅಥಾರಿಟಿಯ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ. ಅಧಿಕಾರಿಗಳು ಅನುಮತಿಸಿದ್ದ ಮೂಲ ನೀಲನಕ್ಷೆಯನ್ನು ಉಲ್ಲಂಘಿಸಿ ಕಟ್ಟಡ ರಚನೆ ಮಾಡಲಾಗಿತ್ತು. ಕಟ್ಟಡಗಳ ನಡುವೆ ನಿರ್ದಿಷ್ಟ ಅಂತರವನ್ನು ಪಾಲನೆ ಮಾಡಿರಲಿಲ್ಲ. ನಿವಾಸಿಗಳ ಸುರಕ್ಷತೆ ದೃಷ್ಟಿಯಿಂದ ಅವಳಿ ಕಟ್ಟಡಗಳ ಮಧ್ಯೆ ನಿರ್ದಿಷ್ಟ ಅಂತರ ಹೊಂದಿರಬೇಕು. ಕನಿಷ್ಠ 16 ಮೀಟರ್ ಅಂತರ ಇರಬೇಕೆಂದಿದ್ದರೆ, ಇಲ್ಲಿ ಕೇವಲ 9 ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಿಸಲಾಗಿತ್ತು. ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ನೋಯ್ಡಾ ಅಧಿಕಾರಿಗಳೂ ಬಾಧ್ಯಸ್ಥರು. ಅನಧಿಕೃತ ಕಟ್ಟಡ ರಚನೆಗಳಿಗೆ ಕೇವಲ ಡೆವಲಪರ್ ಮಾತ್ರ ಕಾರಣರಾಗುವುದಿಲ್ಲ. ಆಯಾ ಭಾಗದ ಆಡಳಿತ, ಅಲ್ಲಿನ ಅಧಿಕಾರಿಗಳೂ ಕಾರಣ. ಸಾರ್ವಜನಿಕ ಹಿತದೃಷ್ಟಿಯಿಂದ ಖರೀದಿದಾರರ ಹಕ್ಕುಗಳನ್ನು ಎತ್ತಿಹಿಡಿಯುವುದು ಮುಖ್ಯವಾಗುತ್ತದೆ. ನಗರ ಪ್ರದೇಶ, ಮೆಟ್ರೋ ನಗರಗಳಲ್ಲಿ ಈ ರೀತಿಯ ಅನಧಿಕೃತ ಕಟ್ಟಡಗಳು ಹೆಚ್ಚುತ್ತಿದ್ದು, ಅದಕ್ಕೆ ಆಯಾ ಆಡಳಿತಗಳೇ ಹೊಣೆಯಾಗುತ್ತದೆ ಎಂದು ಕೋರ್ಟ್ ನೀಡಿದ್ದ ಆದೇಶದಲ್ಲಿ ತಿಳಿಸಿತ್ತು.

Big setback to Noida CEO Ritu Maheshwari as Supreme Court refuses to stay  non-bailable warrant - Law News

ನೋಯ್ಡಾ ಅಭಿವೃದ್ಧಿ ಪ್ರಾಧಿಕಾರದ ಸಿಇಓ ರಿತು ಮಹೇಶ್ವರಿ, ಮುಂಬೈ ಮೂಲದ ಎಡಿಫೈಸ್ ಕಂಪನಿಗೆ ಅವಳಿ ಕಟ್ಟಡ ಒಡೆಯಲು ಗುತ್ತಿಗೆ ನೀಡಿದ್ದರು. ಅಲ್ಲದೆ, 500 ಮೀಟರ್ ಆಸುಪಾಸಿನಲ್ಲಿ ನಿಷೇಧಿತ ವಲಯವಾಗಿಸಿ ಅಲ್ಲಿದ್ದ ನಿವಾಸಿಗಳು, 2700 ರಷ್ಟು ವಾಹನಗಳನ್ನು ತೆರವು ಮಾಡಲಾಗಿತ್ತು. ಭಾನುವಾರ ಬೆಳಗ್ಗೆ 7 ಗಂಟೆಯಿಂದಲೇ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆದಿತ್ತು. ಸುತ್ತ ಪೊಲೀಸರನ್ನು ಬಳಸ್ಕೊಂಡು ಜನರನ್ನು ನಿರ್ಬಂಧಿಸಲಾಗಿತ್ತು. ಬೇರೆ ಯಾವುದೇ ಕಟ್ಟಡಗಳಿಗೆ ಸಮಸ್ಯೆ ಆಗದಂತೆ ನಡುವೆ ಇದ್ದ ಕಟ್ಟಡವನ್ನು ಒಡೆಯುವುದು ಸವಾಲಾಗಿತ್ತು. ಕಟ್ಟಡದ ಪ್ರತಿ ಮಹಡಿಯಲ್ಲಿದ್ದ ಪಿಲ್ಲರ್ ಗಳಲ್ಲಿ ಏಕಕಾಲದಲ್ಲಿ ಸ್ಫೋಟಕಗಳನ್ನು ಬಳಸಿ, ಸ್ಫೋಟಿಸಿದ್ದರಿಂದ ಅಮೆರಿಕದ ನ್ಯೂಯಾರ್ಕ್ ನಗರದ ಅವಳಿ ಕಟ್ಟಡ ಬಾಂಬ್ ಸ್ಫೋಟಕ್ಕೆ ನೆಲಸಮ ಆದ ರೀತಿಯಲ್ಲೇ ಕೇವಲ 9 ಸೆಕೆಂಡಿನಲ್ಲಿ ನೇರವಾಗಿ ಕುಸಿದು ಬೀಳುವಂತೆ ಮಾಡಲಾಗಿತ್ತು. 

ಕೇವಲ 9 ಸೆಕೆಂಡ್ ನಲ್ಲಿ 40 ಮಹಡಿಯ ದೇಶದ ಅತಿದೊಡ್ಡ ಅವಳಿ ಕಟ್ಟಡ ಉಡೀಸ್ !! ಕ್ಷಣಕಾಲ ಕಂಪಿಸಿದ ನೋಯ್ಡಾ ನಗರ, ಕುಸಿದು ಬೀಳುವ ವಿಡಿಯೋ ವೈರಲ್ ! 

On August 31, 2021, a Supreme Court bench of justices DY Chandrachud and MR Shah upheld a 2014 ruling of the Allahabad high court to demolish the Supertech twin towers in the Emerald Court compound in Sector 93A of Noida. The judgment set in motion the long and daunting process that will see the towers being imploded on Sunday, just three days short of a year since the top court pronounced its verdict. We revisit the ruling and its impact not just on real estate but also on governance.