ಜಗತ್ತಿನ ಹತ್ತು ಶೇಕಡಾ ಜನರಿಗೆ ಕೊರೊನಾ ; WHO ಅಂದಾಜು

06-10-20 06:05 pm       Headline Karnataka News Network   ದೇಶ - ವಿದೇಶ

ಜಗತ್ತಿನ ಹತ್ತು ಮಂದಿಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಹರಡಿರುವ ಸಾಧ್ಯತೆ ಇದೆ. ಈಗ ಪಾಸಿಟಿವ್ ಆಗಿರುವ ಸಂಖ್ಯೆಯ 20 ಪಟ್ಟು ಹೆಚ್ಚು ಸೋಂಕಿತರು ಇದ್ದಾರೆ.

ನವದೆಹಲಿ, ಅಕ್ಟೋಬರ್ 6: ಜಗತ್ತಿನ ಹತ್ತು ಮಂದಿಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಹರಡಿರುವ ಸಾಧ್ಯತೆ ಇದೆ. ಈಗ ಪಾಸಿಟಿವ್ ಆಗಿರುವ ಸಂಖ್ಯೆಯ 20 ಪಟ್ಟು ಹೆಚ್ಚು ಸೋಂಕಿತರು ಇದ್ದಾರೆ. ಇದರಿಂದಾಗಿ ಮುಂದಿನ ದಿನಗಳು ಕಷ್ಟಕರ ಆಗಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಎಮರ್ಜೆನ್ಸಿ ವಿಭಾಗದ ಮೈಕಲ್ ರ್ಯಾನ್ ಹೀಗೊಂದು ಸಮೀಕ್ಷೆಯ ಮಾಹಿತಿ ಹಂಚಿಕೊಂಡಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ಈ ಸಂಖ್ಯೆ ವ್ಯತ್ಯಾಸ ಇರಬಹುದು. ಆದರೆ, ಜಗತ್ತಿನ ಬಹುತೇಕ ಕಡೆ ಹರಡಿದ್ದು, ಅತಿ ಹೆಚ್ಚು ಜನ ಅಪಾಯದಲ್ಲಿದ್ದಾರೆ. ದಕ್ಷಿಣ ಮತ್ತು ಪೂರ್ವ ಏಷ್ಯಾ ದೇಶಗಳ ಜನರು ಕೊರೊನಾ ಹೆಚ್ಚು ಪೀಡಿತರಾಗಿದ್ದಾರೆ. ಆದರೆ ಸಾವಿನ ಸಂಖ್ಯೆ ಹೆಚ್ಚಿರುವುದು ಪೂರ್ವ ಯುರೋಪ್ ದೇಶಗಳಲ್ಲಿ. ಆಫ್ರಿಕಾ ಮತ್ತು ಪೆಸಿಫಿಕ್ ಸಾಗರದ ಪಶ್ಚಿಮ ಭಾಗದ ರಾಷ್ಟ್ರಗಳಲ್ಲಿ ಕೊರೊನಾ ಹೆಚ್ಚು ಬಾಧೆ ಕೊಟ್ಟಿಲ್ಲ. ಸದ್ಯದ ಮಟ್ಟಿಗೆ ಜಗತ್ತಿನ ಹತ್ತು ಶೇಕಡಾ ಜನರು ಈ ಸೋಂಕಿನಿಂದ ಬಾಧಿತರಾಗಿದ್ದಾರೆ ಎಂದು ರ್ಯಾನ್ ಹೇಳಿದ್ದಾರೆ.