14000 ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿದ 103 ವರ್ಷದ ಅಜ್ಜ !

07-10-20 10:54 am       Headline Karnataka News Network   ದೇಶ - ವಿದೇಶ

103 ವರ್ಷದ ಆಲ್ಫ್ರೆಡ್ ಅಲ್ ಬ್ಲಾಷ್ಕೆ ಎನ್ನುವವರು 14000 ಅಡಿ ಎತ್ತರದಿಂದ ಸ್ಕೈ ಡೈವ್ ಮಾಡುವ ಮೂಲಕ ಗಿನ್ನಿಸ್ ದಾಖಲೆಯನ್ನು ಮಾಡಿದ್ದಾರೆ.

ವಾಷಿಂಗ್ಟನ್, ಅಕ್ಟೋಬರ್.07 : ಯುಎಸ್‌ನ 103 ವರ್ಷದ ಆಲ್ಫ್ರೆಡ್ ಅಲ್ ಬ್ಲಾಷ್ಕೆ ಎನ್ನುವವರು ತಮ್ಮ ಅವಳಿ ಮೊಮ್ಮಕ್ಕಳ ಜೊತೆ ಸ್ಕೈ ಡೈವ್ ಮಾಡಿ ಎಲ್ಲರ ಗಮನ ಸೆಳೆದಿದ್ದಲ್ಲದೆ   ಗಿನ್ನಿಸ್ ದಾಖಲೆ ಪುಟದಲ್ಲೂ ಕೂಡ ತಮ್ಮ ಹೆಸರು ದಾಖಲಿಸಿಕೊಂಡಿದ್ದಾರೆ. 

ಜನವರಿ 4, 1917ರಲ್ಲಿ ಜನಿಸಿದ ಆಲ್‌ಫರ್ಡ್ ಬ್ಲಾಷ್ಕೆಗೆ  ಈಗ 103 ವರ್ಷ .'ಸೆಂಟೆರೇನಿಯನ್ ಡೇರ್ ಡೆವಿಲ್ ' ಎಂದು ಗಿನ್ನೆಸ್ ವಿಶ್ವದಾಖಲೆಯ ಪೇಜ್‌ನಲ್ಲಿ ಇವರನ್ನು ಕರೆಯಲಾಗಿದ್ದು, ಅವರ ಈ ಸಾಹಸದ ವಿಡಿಯೋ ಪೋಸ್ಟ್ ಮಾಡಲಾಗಿದೆ.

 ಸುಮಾರು 14,000 ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿರುವ ಅವರು ಯುವಕರು ನಾಚುವಂತೆ ಆ ಕ್ಷಣವನ್ನು ಎಂಜಾಯ್​ ಮಾಡಿದ್ದಾರೆ.  ಅವರು ಸ್ಕೈ ಡೈವ್ ಮಾಡಿರುವ ವಿಡಿಯೋ ಎಂಥವರ ಎದೆಯನ್ನೂ ಝಲ್ ಎನಿಸುವಂತೆ ಮಾಡುತ್ತದೆ.

2017 ರಲ್ಲಿ, ಬ್ಲಾಷ್ಕೆ ತನ್ನ 100 ನೇ ಹುಟ್ಟುಹಬ್ಬದ ನಿಮಿತ್ತ ತನ್ನ ಮೊದಲ ಸ್ಕೈಡೈವ್ ಮಾಡಿದ್ದರು, ಅದಾದ ಬಳಿಕ ತನ್ನ ಅವಳಿ ಮೊಮ್ಮಕ್ಕಳು ಕಾಲೇಜು ಪದವಿ ಮುಗಿಸಿದಾಗ ಇನ್ನೊಮ್ಮೆ  ಸ್ಕೈ ಡೈವ್ ಮಾಡುತ್ತೇನೆ ಎಂದಿದ್ದರು. ಇದೀಗ ತನ್ನ ಮಾತಿನಂತೆ ನಡೆದುಕೊಂಡಿದ್ದಾರೆ ಬ್ಲಾಷ್ಕೆ.

ಬ್ಲಾಷ್ಕೆ ಅವರು ಈ ಸಾಹಸವನ್ನು ಮಾಡುವ ಮೂಲಕ  ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ನಿರೂಪಿಸಿದ್ದಾರೆ. ವಯಸ್ಸಾಗಿದೆ ಎನ್ನುವ ಮಾತ್ರಕ್ಕೆ ಜೀವನೋತ್ಸಾಹ ಕಳೆದುಕೊಳ್ಳಬಾರದು ಎಂಬುದಕ್ಕೆ 103 ವರ್ಷದ ವೃದ್ಧರೊಬ್ಬರು ಸಾಕ್ಷಿಯಾಗಿದ್ದಾರೆ.